More

    ಮಹಾನಟಿ ನಂತರ ಲೆಜೆಂಡರಿ ಸಿಂಗರ್ ಬಯೋಪಿಕ್ ನಲ್ಲಿ ಕೀರ್ತಿ ಸುರೇಶ್?

    ಚೆನ್ನೈ: ಕಾಲಿವುಡ್ ಬ್ಯೂಟಿ ಕೀರ್ತಿ ಸುರೇಶ್ ಸದ್ಯ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ, ಈ ನಟಿ ಬೇಬಿ ಜಾನ್ ಚಿತ್ರದ ಮೂಲಕ ಹಿಂದಿಗೆ ಎಂಟ್ರಿ ಕೊಡಲಿದ್ದಾರೆ. ಕಾಲಿವುಡ್ ಸ್ಟಾರ್ ಡೈರೆಕ್ಟರ್ ಅಟ್ಲಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಪ್ರಸಿದ್ಧ ರಾಪ್ ಗಾಯಕ ಎಮಿನೆಮ್ ಪುತ್ರಿ ಅಲೈನಾ ವಿವಾಹ..ಕಾರ್​ ಮೇಲೇರಿ ಚುಂಬಿಸುತ್ತ ಸಾಗುವ ಫೋಟೋಗಳು ವೈರಲ್​

    ಇದರ ನಡುವೆ ಕೀರ್ತಿ ಸುರೇಶ್ ಕುರಿತಾದ ಸುದ್ದಿಯೊಂದು ಸದ್ಯ ಇಂಡಸ್ಟ್ರಿಯನ್ನು ಅಲ್ಲಾಡಿಸುತ್ತಿದೆ. ಈ ಸುದ್ದಿ ಹಳೆಯದಾದರೂ, ಪ್ರತಿ ಬಾರಿಯೂ ಸದ್ದುಮಾಡುತ್ತಿರುತ್ತದೆ.

    ಅದೇನೆಂದರೆ.. ಲೆಜೆಂಡರಿ ಸೆಲೆಬ್ರಿಟಿಯ ಬಯೋಪಿಕ್ ನಲ್ಲಿ ಕೀರ್ತಿ ಸುರೇಶ್​ ನಟಿಸಲಿದ್ದಾರೆ ಎಂಬುದು. ಈಗಾಗಲೇ ಸಾವಿತ್ರಿಯವರ ಬಯೋಪಿಕ್ ಆಗಿ ತಯಾರಾದ ಮಹಾನಟಿ ಚಿತ್ರದಲ್ಲಿ ಕೀರ್ತಿ ಸುರೇಶ್​ ಅವರು ಸಾವಿತ್ರಿ ಪಾತ್ರವನ್ನು ನಿರ್ವಹಿಸಿದ್ದಾರೆ.

    ಇದೀಗ ಮತ್ತೊಮ್ಮೆ ಬಯೋಪಿಕ್‌ನಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. ಖ್ಯಾತ ಗಾಯಕಿ ದಿವಂಗತ ಎಂಎಸ್ ಸುಬ್ಬಲಕ್ಷ್ಮಿ ಅವರ ಜೀವನಾಧಾರಿತ ಚಿತ್ರದಲ್ಲಿ ಕೀರ್ತಿ ನಟಿಸಲಿದ್ದಾರೆ ಎನ್ನಲಾಗಿದೆ.

    ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂ ಪ್ರೇಕ್ಷಕರಿಗೆ ಎಂ.ಎಸ್.ಸುಬ್ಬಲಕ್ಷ್ಮಿ ಅವರ ಬಗ್ಗೆ ಯಾವುದೇ ಪರಿಚಯ ಅಗತ್ಯವಿಲ್ಲ. ಆಕೆಯ ಧ್ವನಿ ಮತ್ತು ಅವರು ಹಾಡಿದ ಹಾಡುಗಳು ಮರೆಯಲಾಗದು.

    ತಮಿಳುನಾಡಿನಲ್ಲಿ ಹುಟ್ಟಿ ಬೆಳೆದ ಎಂ.ಎಸ್.ಸುಬ್ಬಲಕ್ಷ್ಮಿ ಇಷ್ಟು ದೊಡ್ಡ ಗಾಯಕಿಯಾದದ್ದು ಹೇಗೆ? ಎಂಬ ಕುತೂಹಲ ಸಿನಿ ಪ್ರಿಯರಲ್ಲಿ ಇದ್ದೇ ಇದೆ. ಆಕೆಯ ಜೀವನದಲ್ಲಿ ನಡೆದ ಘಟನೆಗಳು ಹಾಗೂ ಹೊರಜಗತ್ತಿಗೆ ತಿಳಿಯದೆ ರಹಸ್ಯವಾಗೇ ಉಳಿದಿವೆ. ಬಯೋಪಿಕ್ ನಲ್ಲಿ ಅವು ಎಲ್ಲವನ್ನೂ ತೋರಿಸಲಿದ್ದಾರಂತೆ. ಕಾಲಿವುಡ್ ಸ್ಟಾರ್ ನಿರ್ದೇಶಕರು ಈ ಬಯೋಪಿಕ್ ಅನ್ನು ನಿರ್ದೇಶಿಸುತ್ತಿದ್ದಾರೆ ಎಂದು ವರದಿಯಾಗಿದೆ.

    ಎಂಎಸ್ ಸುಬ್ಬಲಕ್ಷ್ಮಿ ಅವರ ಬಯೋಪಿಕ್ ಅನ್ನು ಶೀಘ್ರದಲ್ಲೇ ತಯಾರಕರು ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಕಾಲಿವುಡ್‌ನಲ್ಲಿ ಚರ್ಚೆ ನಡೆಯುತ್ತಿದೆ.

    ಈ ಬಯೋಪಿಕ್‌ನಲ್ಲಿ ಕೀರ್ತಿ ನಟಿಸುತ್ತಾರೆ ಎಂಬ ಸುದ್ದಿಯೊಂದಿಗೆ ಅಭಿಮಾನಿಗಳು ಸಹ ಇದು ಉತ್ತಮ ಆಯ್ಕೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮಹಾನಟಿ ಚಿತ್ರದ ನಂತರ ಕೀರ್ತಿಗೆ ಯಶಸ್ಸು ಸಿಗಲಿಲ್ಲ. ಈ ಬಯೋಪಿಕ್ ಮೂಲಕ ಆಕೆಗೆ ಮತ್ತೊಂದು ಒಳ್ಳೆಯ ಹಿಟ್ ಸಿಗಲಿ ಎಂದು ಅಭಿಮಾನಿಗಳು ಅಭಿನಂದಿಸುತ್ತಿದ್ದಾರೆ.

    ಇದರಲ್ಲಿ ಎಷ್ಟರಮಟ್ಟಿಗೆ ಸತ್ಯಾಂಶವಿದೆ ಎಂಬುದು ತಿಳಿಯಬೇಕಾದರೆ ಒಂದಷ್ಟು ದಿನ ಕಾಯಲೇಬೇಕು.

    ಪ್ರಸಿದ್ಧ ರಾಪ್ ಗಾಯಕ ಎಮಿನೆಮ್ ಪುತ್ರಿ ಅಲೈನಾ ವಿವಾಹ..ಕಾರ್​ ಮೇಲೇರಿ ಚುಂಬಿಸುತ್ತ ಸಾಗುವ ಫೋಟೋಗಳು ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts