More

    ಪ್ರಸಿದ್ಧ ರಾಪ್ ಗಾಯಕ ಎಮಿನೆಮ್ ಪುತ್ರಿ ಅಲೈನಾ ವಿವಾಹ..ಕಾರ್​ ಮೇಲೇರಿ ಚುಂಬಿಸುತ್ತ ಸಾಗುವ ಫೋಟೋಗಳು ವೈರಲ್​

    ಲಾಸ್ ಏಂಜಲೀಸ್: ಪ್ರಸಿದ್ಧ ರಾಪ್ ಗಾಯಕ, ವಿಶ್ವದ ಹಿಪ್-ಹಾಪ್ ಐಕಾನ್ ಅಮೆರಿಕದ ಎಮಿನೆಮ್ ಅವರ ಹಿರಿಯ ಮಗಳು ಅಲೈನಾ ಮೇರಿ ಸ್ಕಾಟ್ ತನ್ನ ದೀರ್ಘಕಾಲದ ಪ್ರಿಯಕರ ಮ್ಯಾಟ್ ಮೊಲ್ಲರ್ ನನ್ನು ವಿವಾಹವಾಗಿದ್ದು, ಈ ಕುರಿತ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿವೆ.

    ಇದನ್ನೂ ಓದಿ: ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ: ಬಾಲಕನ ತಂದೆ ಬಿಲ್ಡರ್ ವಿಶಾಲ್ ಅಗರವಾಲ್ 2 ದಿನ ಪೊಲೀಸ್ ಕಸ್ಟಡಿಗೆ

    30 ವರ್ಷದ ಅಲೈನಾ ತನ್ನ ಮದುವೆಯನ್ನು ಅಧಿಕೃತವಾಗಿ ಇನ್​ಸ್ಟಾಗ್ರಾಮ್​ನಲ್ಲಿ ಘೋಷಿಸಿದ್ದಳು. ಈಗ ಮದುವೆಯ ಚಿತ್ರಗಳನ್ನು ಹಂಚಿಕೊಂಡಿದ್ದಾಳೆ.

    ಫೋಟೋಗಳಲ್ಲಿ ಸ್ಕಾಟ್ ಮತ್ತು ಮೊಲ್ಲರ್ ಕಾರ್​ನ ಮೇಲ್ಛಾವಣಿ ಮೇಲೆ ಚುಂಬಿಸುವ ಕಲಾತ್ಮಕ ಶಾಟ್‌ಗಳನ್ನು ಸಹ ಒಳಗೊಂಡಿದ್ದು, ಬಳಕೆದಾರರು ಶುಭಾಷಯ ಮತ್ತು ಮೆಚ್ಚುಗೆಯ ಮಹಾಪೂರ ಹರಿಸುತ್ತಿದ್ದಾರೆ.

    ಇನ್ನು ಲಿಫ್ಟ್‌ನಲ್ಲಿ ವಿಂಟೇಜ್ ಕಾರಿನ ಮೂಲಕ ತಬ್ಬಿಕೊಳ್ಳುವುದು, ಮದುವೆಯ ಪ್ರಯುಕ್ತ ವಿನಿಮಯ ಮಾಡಿಕೊಂಡ ಉಂಗುರಗಳ ಪ್ರದರ್ಶನ, ಮೊದಲ ನೃತ್ಯ, ಮದುವೆಯ ಪಾರ್ಟಿಯೊಂದಿಗೆ ಪೋಸ್ ನೀಡುವ ಫೋಟೋಗಳು ಸೇರಿದ್ದು, ಅತ್ಯಾಕರ್ಷಕವಾಗಿವೆ.

    ಮಾರ್ಷಲ್ ಮ್ಯಾಥರ್ಸ್ ಎಂದು ಕರೆಯಲ್ಪಡುವ ಎಮಿನೆಮ್, 2000 ರ ದಶಕದ ಆರಂಭದಲ್ಲಿ ಅಲೈನಾಳನ್ನು ದತ್ತು ಪಡೆದರು. ಆಕೆಯ ತಾಯಿ ಡಾನ್ ಸ್ಕಾಟ್, 2016 ರಲ್ಲಿ ಮಾದಕವಸ್ತು ಮಿತಿಮೀರಿದ ಸೇವನೆಯಿಂದ ಅನುಮಾನಾಸ್ಪದವಾಗಿ ಸಾವನ್ನಪ್ಪಿದರು. ಡಾನ್ ಎಮಿನೆಮ್ ಅವರ ಮಾಜಿ ಪತ್ನಿ ಕಿಮ್ ಅವರ ಸಹೋದರಿ. ಎಮಿನೆಮ್ ಮತ್ತು ಕಿಮ್ 27 ವರ್ಷದ ಹೈಲಿ ಜೇಡ್ ಎಂಬ ಮಗಳನ್ನು ಸಹ ಹೊಂದಿದ್ದಾರೆ. ಎಮಿನೆಮ್ 21 ವರ್ಷ ವಯಸ್ಸಿನ ಸ್ಟೀವ್ ಲೈನ್ ಮ್ಯಾಥರ್ಸ್ ಅವರ ದತ್ತು ತಂದೆ.

    ದೇಶವನ್ನೇ ಬೆಚ್ಚಿ ಬೀಳಿಸುತ್ತಿರುವ ಪುಣೆ ಕಾರು ಅಪಘಾತ ಪ್ರಕರಣ! ಜನರ ಅಸಹನೆ ಕಟ್ಟೆಹೊಡೆದಿರುವುದೇಕೆ? ವಿವರ ಇಲ್ಲಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts