ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಗೆಳತಿ ಪವಿತ್ರಾ ಗೌಡ ಹಾಗೂ ಸಹಚರರು ಅರೆಸ್ಟ್ ಆಗಿರುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಡಿ-ಗ್ಯಾಂಗ್ನ ಕೃತ್ಯ ತಿಳಿದು ಎಲ್ಲರು ಶಾಕ್ ಆಗಿದ್ದಾರೆ. ಸ್ಟಾರ್ ನಟನೊಬ್ಬ ಇಂತಹ ಹೇಯ ಕೃತ್ಯ ಎಸಗಿದ್ದಾನೆ ಎಂಬುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಸದ್ಯ ಈ ಪ್ರಕರಣ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಾಸ್ವಾಮಿ ಕೊಲೆ ನಡೆದಿದೆ ಎನ್ನಲಾಗಿದೆ. ಸಮಾಜಕ್ಕೆ ದಾರಿದೀಪವಾಗಬೇಕಿದ್ದ ನಟ ಇಂದು ಸಮಾಜವೇ ತಲೆತಗ್ಗಿಸುವಂತಹ ಆರೋಪವೊತ್ತು ನಿಂತಿದ್ದಾರೆ.
ಇದರ ನಡುವೆ ದರ್ಶನ್ ಬಗ್ಗೆ ಒಂದೊಂದೆ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಮೈಸೂರಿನ ಬಳಿಯಿರುವ ದರ್ಶನ್ ಅವರ ತೂಗುದೀಪ ಫಾರ್ಮ್ಹೌಸ್ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ ಎತ್ತಿನ ಕೊಂಬು ಚುಚ್ಚಿ ಗಾಯವಾದಾಗ ದರ್ಶನ್ ಸಹಾಯ ಮಾಡಲಿಲ್ಲ ಎಂಬ ಆರೋಪ ಮೊನ್ನೆಯಷ್ಟೇ ಕೇಳಿಬಂತು. ಅಲ್ಲದೆ, ಸಹಾಯ ಕೇಳಲು ಹೋದಾಗ ನಾಯಿ ಛೂ ಬಿಟ್ಟಿದ್ದರು ಎಂದು ಸಂತ್ರಸ್ತನ ಸಂಬಂಧಿಕರು ಮಾಧ್ಯಮದ ಮುಂದೆ ಬಾಯ್ಬಿಟ್ಟಿದ್ದರು. ಪೊನ್ನಂಪೇಟೆಯಲ್ಲಿರುವ ದರ್ಶನ್ ಅವರ ಪೂರ್ವಿಕರ ನಿವಾಸವನ್ನು ಕೆಡವಿದ್ದಾರೆ ಎಂದು ಆರೋಪಿಸಲಾಗಿದೆ. ಇದೆಲ್ಲದರ ನಡುವೆ ಈ ಹಿಂದೆ ದರ್ಶನ್ ಅವರ ಮ್ಯಾನೇಜರ್ ಆಗಿದ್ದ ಮಲ್ಲಿಕಾರ್ಜುನ್ ನಾಪತ್ತೆ ಪ್ರಕರಣವೂ ಇದೀಗ ಹಲವು ಅನುಮಾನಗಳನ್ನ ಹುಟ್ಟಿ ಹಾಕಿದೆ.
ಗದಗ ಮೂಲದ ಮಲ್ಲಿಕಾರ್ಜುನ್ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ? ಎಂಬ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿಲ್ಲ. ಬಹಳ ಹಿಂದೆ ದರ್ಶನ್ ಜತೆ ಕೆಲಸ ಮಾಡುತ್ತಿದ್ದರು ಎಂಬ ವಿಚಾರ ಮಾತ್ರ ಎಲ್ಲರಿಗೂ ತಿಳಿದಿದೆ. ದರ್ಶನ್ ಡೇಟ್ಸ್ಗಳನ್ನು ನಿರ್ವಹಿಸುವುದು ಮತ್ತು ದರ್ಶನ್ಗೆ ಸಂಬಂಧಿಸಿದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಸದಾ ದರ್ಶನ್ ಜತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ದರ್ಶನ್ 2018ರಿಂದ ಏಕಾಏಕಿ ನಾಪತ್ತೆಯಾಗಿದ್ದಾರೆ. ಅವರ ಸುಳಿವೇ ಇಲ್ಲ. ಇದೀಗ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನವಾಗಿರುವ ಹಿನ್ನೆಲೆಯಲ್ಲಿ ಮಲ್ಲಿ ಪ್ರಕರಣವೂ ಸಹ ಮುನ್ನೆಲೆಗೆ ಬಂದಿದೆ. ಇದರ ಬೆನ್ನಲ್ಲೇ ರವಿ ಬೆಳೆಗೆರೆ ಅವರ ಪುತ್ರಿ ಭಾವನಾ ಬೆಳೆಗರೆ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾವನಾ ಅವರು ತಮ್ಮ ಹಾಯ್ ಬೆಂಗಳೂರು ಪತ್ರಿಕೆಯ ಹಳೆಯ ತುಣುಕೊಂದನ್ನು ಶೇರ್ ಮಾಡಿದ್ದಾರೆ. ಅಲ್ಲಿ ಮಲ್ಲಿಕಾರ್ಜುನ್ ಕುರಿತ ಮಾಹಿತಿ ಇದೆ.
ಕಾಣೆಯಾದ ಮಲ್ಲಿ ಎಲ್ಲಿ?
ಮಲ್ಲಿಕಾರ್ಜುನ್ ಎನ್ನುವ ವ್ಯಕ್ತಿ ಈತನ ಮ್ಯಾನೇಜರ್ ಆಗಿದ್ದವರು. 2013ರಲ್ಲಿ ‘ಬೃಂದಾವನ’ ಎಂಬ ಸಿನೆಮಾ ರಿಲೀಸ್ ಆಗಿ ತೋಪೆದ್ದು ಹೋಯಿತು. ಆನಂತರ ಬಂದ ಕೆಲವು ಚಿತ್ರಗಳು ಸಹ ಈ ಸಾಲಿನಲ್ಲಿ ಸೇರಿದ್ದವು. ಹೀಗೆ ತೋಪೆದ್ದ ಸಿನೆಮಾಗಳನ್ನು ಥಿಯೇಟರ್‌ನಲ್ಲಿ ಓಡಿಸೋಕೆ ಈ ಮಲ್ಲಿ ಹಲವಾರು ನಿರ್ಮಾಪಕರ ಹತ್ತಿರ ದರ್ಶನ್ ಡೇಟ್ ಕೊಡಿ ಸುತ್ತೇನೆ ಎಂದು ಹೇಳಿ ಹಣ ಪಡೆದುಕೊಳ್ಳುತ್ತಾರೆ. ಇದರ ಮೊತ್ತವೇ ಸುಮಾರು ಇಪ್ಪತ್ತರಿಂದ ಮೂವತ್ತು ಕೋಟಿ. ಈ ರೀತಿ ಹಣ ವಸೂಲಿ ಮಾಡುವಂತೆ ಹೇಳಿದ್ದು ಈ ದರ್ಶನ್. ನಂತರ ಹಣ ಕೊಟ್ಟ ನಿರ್ಮಾಪಕರು ಡೇಟ್ ಕೊಡಿ, ಇಲ್ಲ ಹಣ ವಾಪಸು ಕೊಡಿ ಎಂದು ಹೇಳಿದಾಗ ನನ್ನ ಹತ್ರ ಕೊಟ್ಟ ದುಡ್ಡು ತಿರುಪತಿ ಹುಂಡಿಗೆ ಹಾಕಿದ ಹಾಗೆ. ಇಷ್ಟಕ್ಕೂ ನನ್ನ ಹತ್ರ ದ್ದಾಡ ದುಡ್ಡು ಕೊಟ್ರಾ? ಮಲ್ಲಿ ಹತ್ರ ತಾನೇ ದುಡ್ಡು ಕೊಟ್ಟದ್ದು. ಅವನನ್ನೇ ಕೇಳಿ ಎಂದು ನಿರ್ಮಾಪಕರಿಗೆ ಧಮ್ಮಿ ಹಾಕಿ ಓಡಿಸುತ್ತಾನೆ. ವಿಷಯ ಗೊತ್ತಾಗಿ ಮಲ್ಲಿ ಇಂದಿಗೂ ಎಲ್ಲಿದ್ದಾನೆ ಎಂಬುದು ಪತ್ತೆಯಿಲ್ಲ.
ಈ ಮಾಹಿತಿಯನ್ನು ಹಂಚಿಕೊಂಡಿರುವ ಭಾವನಾ ಬೆಳೆಗೆರೆ ನಮ್ಮಲ್ಲೇ ಮೊದಲು, ಅದು ಹಾಯ್ ತಾಕತ್ತು ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ ಭಾವನಾ ಬೆಳೆಗೆರೆ ಅವರು ಚಿತ್ರದುರ್ಗದಲ್ಲಿರುವ ಹತ್ಯೆಯಾದ ರೇಣುಕಾಸ್ವಾಮಿ ಅವರ ಮನೆಗೆ ಭೇಟಿ ನೀಡಿ ರೇಣುಕಾಸ್ವಾಮಿ ಪತ್ನಿ ಮತ್ತು ಪಾಲಕರಿಗೆ ಸಾಂತ್ವಾನ ಹೇಳಿ ಬಂದಿದ್ದರು.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ 18 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಮತ್ತೆ 5 ದಿನಗಳ ಕಾಲ ಆರೋಪಿಗಳನ್ನು ನ್ಯಾಯಾಲಯ ಕಸ್ಟಡಿಗೆ ನೀಡಿದೆ. (ಏಜೆನ್ಸೀಸ್)
ಖ್ಯಾತ ಸಂಗೀತ ನಿರ್ದೇಶಕನಿಗೆ ಹೃದಯಾಘಾತವಾಗಲು ದರ್ಶನ್ ಕಾರಣ! ಬಿಗ್ಬಾಸ್ ಸ್ಪರ್ಧಿಯಿಂದ ಗಂಭೀರ ಆರೋಪ
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನ: ಕೊನೆಗೂ ಮೌನ ಮುರಿದ ಸಹೋದರ ದಿನಕರ್ ತೂಗುದೀಪ್
ಮದ್ವೆಯಾದ್ರೂ ಅದು ಸಿಗುತ್ತೆ ಎಂಬ ಭರವಸೆ ಇಲ್ಲ! ಮೊನಾಲಿಸಾ ಬೆಡಗಿ ಸದಾ ಬೋಲ್ಡ್ ಸ್ಟೇಟ್ಮೆಂಟ್