ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಬಂಧನ: ಕೊನೆಗೂ ಮೌನ ಮುರಿದ ಸಹೋದರ ದಿನಕರ್​ ತೂಗುದೀಪ್​

3 Min Read
Dinakar Tugoodeep

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಮತ್ತು ಗೆಳತಿ ಪವಿತ್ರಾ ಗೌಡ ಅರೆಸ್ಟ್​ ಆಗಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್​ ಕೈವಾಡ ಇದೆ. ದರ್ಶನ್​ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್​ರನ್ನು ಬಂಧಿಸಲಾಗಿದೆ. ಈ ಪ್ರಕರಣದಿಂದ ಇಡೀ ಚಿತ್ರರಂಗವೇ ಶಾಕ್​ಗೆ ಒಳಗಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ದರ್ಶನ್​ ಕುಟುಂಬದ ಮೇಲೆ ತೀವ್ರ ಪರಿಣಾಮ ಬೀರಿದೆ.

ಸ್ಟಾರ್​ ನಟನಾಗಿರುವ ದರ್ಶನ್​ ಇಂತಹದ್ದೊಂದು ಕೆಟ್ಟ ಕೆಲಸ ಮಾಡಿ ಬಂಧನವಾಗುತ್ತಾರೆ ಅಂತ ಯಾರೂ ಯೋಚಿಸಿರಲಿಲ್ಲ. ಅಭಿಮಾನಿಗಳಿಗಂತೂ ಇದಕ್ಕಿಂತ ದೊಡ್ಡ ಆಘಾತ ಮತ್ತೊಂದಿಲ್ಲ. ಇನ್ನು ದರ್ಶನ್​ ಬಗ್ಗೆ ಮಾತನಾಡಲು ಕುಟುಂಬಸ್ಥರು ಸಹ ಹೆದರುತ್ತಿದ್ದಾರೆ. ಮಾಧ್ಯಮದವರು ಕೇಳುವ ಪ್ರಶ್ನೆಗೆ ಯಾವ ರೀತಿ ಉತ್ತರ ನೀಡುವುದು ಅಂತ ಕಂಗಾಲಾಗಿದ್ದಾರೆ.

ಇದರ ನಡುವೆ ದರ್ಶನ್ ಅವರ​ ಸಹೋದರ ದಿನಕರ್​ ತೂಗುದೀಪ್​ ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ದರ್ಶನ್​ ವಿಚಾರವನ್ನು ನನ್ನ ಬಳಿ ಕೇಳಲೇಬೇಡಿ ಎಂದಿದ್ದಾರೆ. ಅಲ್ಲದೆ, ನನಗೇನು ಗೊತ್ತಿಲ್ಲ. ಅದರ ಬಗ್ಗೆ ನಾನೇನು ಮಾತನಾಡುವುದೇ ಇಲ್ಲ ಎಂದು ಬಹಳ ನೋವಿನಿಂದಲೇ ದಿನಕರ್ ಹೇಳಿದ್ದಾರೆ.

ಇನ್ನು ದರ್ಶನ್​ ಅವರ ತಾಯಿ ಮೀನಾ ತೂಗುದೀಪ್​ ಸಹ ತೀವ್ರ ಆಘಾತದಲ್ಲಿದ್ದಾರೆ. ಈಗಾಗಲೇ ತಾಯಿ ಜತೆ ದರ್ಶನ್​ ಜಗಳ ಮಾಡಿಕೊಂಡಿದ್ದು, ಮೀನಾ ತೂಗುದೀಪ್​ ಅವರು ತಮ್ಮ ಕಿರಿಯ ಪುತ್ರ ದಿನಕರ್​ ಕುಟುಂಬದ ಜತೆ ಇರುವುದಾಗಿ ತಿಳಿದುಬಂದಿದೆ. ತಾನು ಹುಟ್ಟಿ ಬೆಳೆದ ಮೈಸೂರಿನಲ್ಲಿರುವ ಮನೆಗೆ ದರ್ಶನ್​ ಇತ್ತೀಚಿಗೆ ಒಮ್ಮೆಯೂ ಬಂದಿಲ್ಲ ಎಂದು ಹೇಳಲಾಗಿದೆ. ದರ್ಶನ್​ ಅವರ ನಿರಂತರ ವಿವಾದಗಳಿಂದ ಇಡೀ ಕುಟುಂಬ ಬೇಸತ್ತಿರುವುದಾಗಿ ತಿಳಿದುಬಂದಿದೆ.

See also  ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನದ ಶಂಕೆ ಕಾಂಗ್ರೆಸ್‍ಗೆ: ಮಣಿಪುರದ ಇಬ್ಬರು ಶಾಸಕರಿಗೆ ಶೋಕಾಸ್ ನೋಟಿಸ್!  

ಏನಿದು ಪ್ರಕರಣ?
ಫೆಬ್ರವರಿ 27ರಿಂದ ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್‌ ಬ್ಲಾಕ್‌ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್​ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್‌ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್​ಗೆ ಹೇಳಿದ್ದರು. ಈ ವಿಚಾರ ದರ್ಶನ್​ಗೆ ತಿಳಿದಿದೆ.

ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್​ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್​, ಹಲ್ಲೆಯಿಂದ ರೇಣುಕಾ ಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.

ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ.

ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್​ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.

ಖ್ಯಾತ ಸಂಗೀತ ನಿರ್ದೇಶಕನಿಗೆ ಹೃದಯಾಘಾತವಾಗಲು ದರ್ಶನ್ ಕಾರಣ! ಬಿಗ್​ಬಾಸ್​ ಸ್ಪರ್ಧಿಯಿಂದ ಗಂಭೀರ ಆರೋಪ

ಕೊಲೆಯಾದ ರೇಣುಕಸ್ವಾಮಿ ಕೂಡ ಒಳ್ಳೆಯವನಲ್ಲ! ದರ್ಶನ್​ ಪರ ಬ್ಯಾಟ್​ ಬೀಸಿದ್ರಾ ನಟಿ ಕಸ್ತೂರಿ ಶಂಕರ್​?

Share This Article