More

  ಕೊಲೆಯಾದ ರೇಣುಕಸ್ವಾಮಿ ಕೂಡ ಒಳ್ಳೆಯವನಲ್ಲ! ದರ್ಶನ್​ ಪರ ಬ್ಯಾಟ್​ ಬೀಸಿದ್ರಾ ನಟಿ ಕಸ್ತೂರಿ ಶಂಕರ್​?

  ಹೈದರಾಬಾದ್​: ನಟಿ ಕಸ್ತೂರಿ ಅವರು 80 ಮತ್ತು 90ರ ದಶಕದಲ್ಲಿ ಬಹು ಬೇಡಿಕೆ ನಟಿಯಾಗಿದ್ದರು. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಎಲ್ಲ ಸಿನಿರಂಗದ ಸ್ಟಾರ್​ ನಟರ ಜತೆ ಕಸ್ತೂರಿ ಅಭಿನಯಿಸಿದ್ದಾರೆ. ಈಗಲೂ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕಸ್ತೂರಿ ಅವರು ಸಕ್ರಿಯರಾಗಿದ್ದಾರೆ. ಅವರು ಸಾಮಾಜಿಕ ಕಾರ್ಯಕರ್ತೆಯೂ ಹೌದು. ರಾಜಕೀಯ ಹಾಗೂ ಸಿನಿಮಾ ಸೇರಿದಂತೆ ಸಮಾಜದಲ್ಲಿ ನಡೆಯುವ ಕೆಲ ಘಟನೆಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ಅವರು ಎಂದಿಗೂ ದೂರ ಉಳಿಯುವುದಿಲ್ಲ. ಇದೀಗ ನಟ ದರ್ಶನ್​ ಹಾಗೂ ಪವಿತ್ರಾ ಗೌಡ ವಿರುದ್ಧವೂ ಕಸ್ತೂರಿ ಆಕ್ರೋಶ ಹೊರಹಾಕಿದ್ದಾರೆ.

  ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಮತ್ತು ಪವಿತ್ರಾ ಗೌಡ ಸೇರಿದಂತೆ 17 ಮಂದಿ ಬಂಧನವಾಗಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್​ ಕಳುಹಿಸಿದ ಎಂಬ ಕಾರಣಕ್ಕೆ ರೇಣುಕಸ್ವಾಮಿಯನ್ನು ಅಪಹರಿಸಿ, ಶೆಡ್​ನಲ್ಲಿ ಕೂಡಿ ಹಾಕಿ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಇದೀಗ ಎಲ್ಲೆಡೆ ಡಿ-ಗ್ಯಾಂಗ್​ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ನಿಟ್ಟಿನಲ್ಲಿ ನಟಿ ಕಸ್ತೂರಿ ಕೂಡ ದರ್ಶನ್​ ಹಾಗೂ ಪವಿತ್ರಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಕೊಲೆಯಾದ ರೇಣುಕಸ್ವಾಮಿ ನಡೆಯನ್ನೂ ಸಹ ಕಸ್ತೂರಿ ಖಂಡಿಸಿದ್ದಾರೆ. ಸಾಮಾಜಿಕ ಜಾಲತಾಣದ ದುರ್ಬಳಕೆ ಬಗ್ಗೆಯೂ ಇತ್ತೀಚೆಗೆ ತೆಲುಗಿನ iDreampost ಮಾಧ್ಯಮ ಸಂದರ್ಶನದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.

  ಪವಿತ್ರಾ ಮತ್ತು ದರ್ಶನ್ ಸಂಬಂಧದಲ್ಲಿರುವುದನ್ನು ತಿಳಿದು ರೇಣುಕಸ್ವಾಮಿ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ. ಅವರ ಜೀವನ ಅವರದ್ದು, ಅದನ್ನು ಇನ್ನೊಬ್ಬರು ಜಡ್ಜ್​ ಮಾಡಬಾರದು. ಸಾಮಾಜಿಕ ಜಾಲತಾಣಗಳಿಂದಾಗಿ ಪ್ರತಿಯೊಬ್ಬರ ವೈಯಕ್ತಿಕ ಬದುಕು ನಮ್ಮ ಆಸ್ತಿ ಎಂದು ನಿರ್ಧಾರ ಮಾಡುತ್ತಿದ್ದಾರೆ. ನಿಮ್ಮ ಮನೆಯಲ್ಲಿ ಏನಾಗುತ್ತದೆ ಎಂಬುದರ ಬಗ್ಗೆ ಗಮನ ಹರಿಸುತ್ತಿಲ್ಲ. ಬದಲಾಗಿ ಬೇರೆಯವರ ಮನೆಯ ಬಗ್ಗೆ ಚಿಂತಿಸುತ್ತಾರೆ ಮತ್ತು ಕಿರುಕುಳ ನೀಡಲಾಗುತ್ತಿದೆ. ಸತ್ತ ವ್ಯಕ್ತಿಯೂ ಕೂಡ ಒಳ್ಳೆಯವನಲ್ಲ. ಹಾಗಾಂತ ನಾನು ಹಿಂಸೆಯನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಕಸ್ತೂರಿ ಹೇಳಿದರು.

  See also  ನಾಳೆ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ ಕಾಂತಾರ..!

  ರೇಣುಕಸ್ವಾಮಿ ಪವಿತ್ರಾಗೆ ಕಿರುಕುಳ ನೀಡಿದ್ದಾನೆ. ಅವರ ಕೆಲಸ ಏನು? ಅವನಿಗೂ ಆಕೆಗೂ ಏನು ಸಂಬಂಧ? ಅವನೇಕೆ ಇಂತಹ ಸಂದೇಶಗಳನ್ನು ಕಳುಹಿಸಬೇಕು? ಸರಿ ದರ್ಶನ್​ ಮಾಡಿದ್ದು ತಪ್ಪೇ! ರೇಣುಕಸ್ವಾಮಿಯದ್ದು ತಪ್ಪಿದಲ್ಲಿ ಅದಕ್ಕೆ ಪೋಲೀಸರು ಮತ್ತು ಕೋರ್ಟ್​ ಇದೆ, ಅವರು ನೋಡಿಕೊಳ್ಳುತ್ತಾರೆ. ಅದನ್ನು ಬಿಟ್ಟು ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ದರ್ಶನ್ ಅವರು ವೈಯಕ್ತಿಕ ಜೀವನದಲ್ಲಿ ಏನಾದರೂ ಸಮಸ್ಯೆಯಾದರೆ ಮೊದಲ ಪತ್ನಿಯೇ ನೋಡಿಕೊಳ್ಳುತ್ತಾರೆ. ಅದೆಲ್ಲ ಅವರ ವೈಯಕ್ತಿಕ ವಿಚಾರ. ಆದರೆ, ಸೆಲೆಬ್ರಿಟಿಗೆ ಮೆಸೇಜ್​ ಕಳುಹಿಸುವ ಮತ್ತು ಕಿರುಕುಳ ನೀಡುವ ಹಕ್ಕನ್ನು ಸಾರ್ವಜನಿಕರಿಗೆ ನೀಡಿದವರು ಯಾರು? ದರ್ಶನ್ ವಿಚಾರದಲ್ಲಿ ಇದು ಎಲ್ಲೆ ಮೀರಿದೆ. ದರ್ಶನ್ ಒಬ್ಬ ಕೋಪಿಷ್ಟ ಮತ್ತು ಅವರ ಅಭಿಮಾನಿಗಳು ರೇಣುಕಸ್ವಾಮಿಗೆ ಹೊಡೆದು ಪಾಠ ಕಲಿಸಲು ಬಯಸಿದ್ದರು, ಆದರೆ ಅವರು ನಿಧನರಾದರು. ಹಾಗಾಗಿ ಪರಿಸ್ಥಿತಿ ಕೈ ಮೀರಿತು. ಎಲ್ಲದಕ್ಕೂ ಒಂದು ಮಿತಿ ಇರಬೇಕು ಎಂದರು.

  ಅದೇ ರೀತಿ ಇತ್ತೀಚಿಗೆ ಡೀಪ್ ಫೇಕ್ ನಂತಹ ತಂತ್ರಜ್ಞಾನದ ಬಗ್ಗೆ ಮಾತನಾಡಿರುವ ಕಸ್ತೂರಿ ಶಂಕರ್, ರಶ್ಮಿಕಾ ಮಂದಣ್ಣ ಪ್ರಕರಣದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಈ ಎಐ ತಂತ್ರಜ್ಞಾನದಿಂದ ಕೌಶಲ್ಯವಿಲ್ಲದವರು ಹಣ ವ್ಯಯಿಸದೆ ಅಶ್ಲೀಲ ಫೋಟೋಗಳನ್ನು ಮಾಡುತ್ತಿದ್ದಾರೆ. ಇದನ್ನು ರಾಜಕಾರಣಿ ಅಥವಾ ಉದ್ಯಮಿಗೆ ಮಾಡಿದರೆ ಅವರು ಸುಮ್ಮನೇ ಬಿಡುತ್ತಾರಾ? ಏನಾಯಿತು ಅಂತಾ ಗೊತ್ತಾಗದಂಗೆ ಮಾಡಿಬಿಡುತ್ತಾರೆ. ಆದರೆ, ಸಿನಿಮಾ ತಾರೆಯರಿಗೆ ಈ ರೀತಿ ತೊಂದರೆ ಕೊಟ್ಟರೆ ಬಾಯಿ ಮುಚ್ಚಿಕೊಳ್ಳಬೇಕು. ಇದು ನ್ಯಾಯವೇ? ನೀವು ಹೋಗಿ ಜನರನ್ನು ಹೊಡೆಯಿರಿ ಎಂದು ನಾನು ಹೇಳುತ್ತಿಲ್ಲ. ಆದರೆ ನಾವು ಎಷ್ಟು ಸಹಿಸಿಕೊಳ್ಳಬಲ್ಲೆವು? ಎಲ್ಲರೂ ಒಂದಲ್ಲ ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಳ್ಳುತ್ತಾರೆ. ದರ್ಶನ್​ ವಿಚಾರದಲ್ಲೂ ಇದೇ ಆಗಿದ್ದು ಎಂದು ಕಸ್ತೂರಿ ಹೇಳಿದರು. (ಏಜೆನ್ಸೀಸ್​)

  See also  ನ್ಯೂಜಿಲೆಂಡ್‌ಗೆ ಫಿಲಿಪ್ಸ್ ಅರ್ಧಶತಕದಾಸರೆ: ಬಾಂಗ್ಲಾದೇಶ ಎದುರು ಅಲ್ಪ ಮುನ್ನಡೆ

  ಸಾನಿಯಾ ಮಿರ್ಜಾಗೆ ಐಟಂ ಸಾಂಗ್ ಆಫರ್; ತೆರೆ ಮೇಲೆ ಕಾಣಿಸಿಳ್ಳುತ್ತಾರಾ? ಟೆನಿಸ್ ಆಟಗಾರ್ತಿ

  ನನಗೆ ಕಿಸ್ಸಿಂಗ್​​, ರೊಮ್ಯಾನ್ಸ್ ಸೀನ್ಸ್​ ಅಂದರೆ…. ಬೋಲ್ಡ್​ ಹೇಳಿಕೆ ನೀಡಿದ ನಟಿ ಅವಿಕಾ ಗೋರ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts