More

    ನನಗೆ ಕಿಸ್ಸಿಂಗ್​​, ರೊಮ್ಯಾನ್ಸ್ ಸೀನ್ಸ್​ ಅಂದರೆ…. ಬೋಲ್ಡ್​ ಹೇಳಿಕೆ ನೀಡಿದ ನಟಿ ಅವಿಕಾ ಗೋರ್​

    ಮುಂಬೈ: ಕನ್ನಡದಲ್ಲಿ ಮಾಸ್ಟರ್​ ಕಿಶನ್​ ನಿರ್ದೇಶಿಸಿದ್ದ ‘ಕೇರ್​ ಆಫ್​ ಫುಟ್​ಪಾತ್​ 2’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಅವಿಕಾ ಗೋರ್​, ಸದ್ಯ ತೆಲುಗಿನಲ್ಲಿ ತುಂಬಾ ಬಿಜಿಯಾಗಿದ್ದಾರೆ. ಆರಂಭದಲ್ಲಿ ಸಾಂಪ್ರದಾಯಿಕ ಪಾತ್ರಗಳಲ್ಲಿ ನಟಿಸುತ್ತಿದ್ದ ಅವಿಕಾ, ಇದೀಗ ಬೋಲ್ಡ್​ ಪಾತ್ರಗಳಿಗೂ ಸೈ ಅನ್ನುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಕಿಸ್ಸಿಂಗ್​ ಮತ್ತು ಇಂಟಿಮೇಟ್​ ದೃಶ್ಯಗಳ ಬಗ್ಗೆ ಆಡಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹಾಟ್​ ಟಾಪಿಕ್​ ಆಗಿದೆ.

    ಅವಿಕಾ ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದನ್ನು ನೀಡಿದ್ದರು. ಆ ಸಂದರ್ಶನದಲ್ಲಿ ಸಿನಿಮಾಗಳಲ್ಲಿನ ಇಂಟಿಮೇಟ್ ದೃಶ್ಯಗಳ ಜತೆಗೆ ತನ್ನ ಗೆಳೆಯ ಮಿಲಿಂದ್ ಚಂದ್ವಾನಿ ಜೊತೆಗಿನ ಸಂಬಂಧದ ಬಗ್ಗೆಯೂ ಮಾತನಾಡಿದ್ದಾರೆ. ಕಳೆದ ವರ್ಷ ಅವಿಕಾ ಅವರು 1920 ಹೆಸರಿನ ಹಾರರ್​ ಚಿತ್ರದಲ್ಲಿ ತುಂಬಾ ಹಾಟ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಆ ಚಿತ್ರದ ಬಗ್ಗೆ ಕೇಳಿದಾಗ ಕೆಲವು ಆಸಕ್ತಿದಾಯಕ ಉತ್ತರಗಳನ್ನು ನೀಡಿದರು.

    ರೊಮ್ಯಾನ್ಸ್​ ಮತ್ತು ಕಿಸ್ಸಿಂಗ್​ ದೃಶ್ಯಗಳಲ್ಲಿ ನಟಿಸುವುದು ತುಂಬಾ ಫನ್​ ಎಂದು ಭಾವಿಸುತ್ತಾರೆ. ಆದರೆ, ಅವು ತುಂಬಾ ನೀರಸವಾಗಿರುತ್ತವೆ ಎಂದು ಅವಿಕಾ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ನಿರ್ದೇಶಕ ವಿಕ್ರಮ್ ಭಟ್ ಬಗ್ಗೆ ಮಾತನಾಡಿ, ಅವರು ನಾಚಿಕೆ ಸ್ವಭಾವದರು ಎಂದರು. ವಿಕ್ರಮ್ ಸರ್ ವೃತ್ತಿಪರರು. ಆದರೆ, ಸೆಟ್‌ಗಳಲ್ಲಿ ಯಾರಾದರೂ ಹೆಚ್ಚು ನಾಚಿಕೆಪಡುತ್ತಿದ್ದರೆ, ಅದು ವಿಕ್ರಮ್​ ಸರ್​ ಮಾತ್ರ. ಅನೇಕ ಬಾರಿ ಅಂತಹ ದೃಶ್ಯಗಳಿಂದ ಅವರು ಸ್ವಲ್ಪ ಮುಜುಗರ ಅನುಭವಿಸಿದ್ದಾರೆ. ನೀವು ಅಂತಹ ತಂಡದೊಂದಿಗೆ ಕೆಲಸ ಮಾಡುವಾಗ, ಇಂಟಿಮೇಟ್​ ದೃಶ್ಯಗಳನ್ನು ಮಾಡುವುದು ಸುಲಭವಾಗುತ್ತದೆ ಎಂದು ಅವಿಕಾ ಹೇಳಿದರು.

    ಸಿನಿಮಾ ವಿಚಾರಕ್ಕೆ ಬಂದರೆ, ಅವಿಕಾ ಅವರು ಬ್ಲಡಿ ಇಸ್ಕ್​ ಹೆಸರಿನ ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತೆಲುಗು ಮತ್ತು ಹಿಂದಿಯಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡದಲ್ಲಿ ಕೇರ್​ ಆಫ್​ ಫುಟ್​ಪಾತ್​ ಸಿನಿಮಾ ಬಿಟ್ಟರೆ, ಪುನೀತ್​ ರಾಜ್​ಕುಮಾರ್​ ಅಭಿನಯದ ನಟಸಾರ್ವಭೌಮ ಸಿನಿಮಾದಲ್ಲಿ ತಾಜಾ ಸಮಾಚಾರ ಹಾಡಿನಲ್ಲಿ ಬಂದು ಹೋಗುತ್ತಾರೆ.

    See also  ನೂತನ ಸಂಸದರ ಮೇಲೆ ಜಿಲ್ಲೆಯ ಜನತೆ ದೊಡ್ಡ ನಿರೀಕ್ಷೆ

    ಎಕ್ಕಡಿಕಿ ಪೋತಾವು ಚಿನ್ನವಾಡ ಹೆಸರಿನ ತೆಲುಗಿನ ಸೂಪರ್​ ಹಿಟ್​ ಸಿನಿಮಾ ಮೂಲಕ ಅವಿಕಾಗೆ ಒಳ್ಳೆಯ ಖ್ಯಾತಿ ಸಿಕ್ಕಿತು. (ಏಜೆನ್ಸೀಸ್​)

    ದರ್ಶನ್​ ಜತೆ ಇರೋರೆಲ್ಲ ರೌಡಿಗಳು, ಬೇರೆ ನಟರಷ್ಟು ಅಭಿಮಾನಿಗಳು ಆತನಿಗಿಲ್ಲ! ನಟಿ ರಮ್ಯಾ ಸ್ಫೋಟಕ ಹೇಳಿಕೆ

    ರಷ್ಯಾದ ಮಾಡೆಲ್​, ಪವನ್​ ಕಲ್ಯಾಣ್​ ಪತ್ನಿ ಅನ್ನಾ ಲೆಜ್ನೆವಾ 1800 ಕೋಟಿ ರೂ. ಒಡತಿ! ಆಂಧ್ರ ಡಿಸಿಎಂ ಬಾಳಲ್ಲಿ ಬಂದಿದ್ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts