More

    ರಷ್ಯಾದ ಮಾಡೆಲ್​, ಪವನ್​ ಕಲ್ಯಾಣ್​ ಪತ್ನಿ ಅನ್ನಾ ಲೆಜ್ನೆವಾ 1800 ಕೋಟಿ ರೂ. ಒಡತಿ! ಆಂಧ್ರ ಡಿಸಿಎಂ ಬಾಳಲ್ಲಿ ಬಂದಿದ್ಹೇಗೆ?

    ವಿಜಯವಾಡ: ನಟ ಪವನ್ ಕಲ್ಯಾಣ್ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ಎನ್‌ಡಿಎ ಜತೆ ಕೈ ಜೋಡಿಸುವ ಮೂಲಕ ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ 21 ಸ್ಥಾನಗಳನ್ನು ಗೆದ್ದಿದೆ. ಮಂಗಳವಾರ ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತಿತರರು ಭಾಗವಹಿಸಿದ್ದರು.

    ಪ್ರಮಾಣ ವಚನ ಸಮಾರಂಭ ಮುಗಿಸಿ ಮನೆಗೆ ಬಂದ ಪವನ್ ಕಲ್ಯಾಣ್ ಅವರನ್ನು ಪತ್ನಿ ಅನ್ನಾ ಲೆಜ್ನೆವಾ, ಆರತಿಯೊಂದಿಗೆ ಸ್ವಾಗತಿಸಿದರು. ಇದಕ್ಕೆ ಸಂಬಂಧಸಿದ ವಿಡಿಯೋ ವೈರಲ್ ಆದ ಬಳಿಕ ಪವನ್ ಅವರ ರಷ್ಯನ್ ಪತ್ನಿಯ ಮಾಹಿತಿಗಾಗಿ ಹುಡುಕಾಟ ನಡೆಯುತ್ತಿದೆ. ತನ್ನ ಮೊದಲ ಎರಡು ಮದುವೆಗಳು ವಿಫಲವಾದ ನಂತರ ಪವನ್, ಅನ್ನಾ ಅವರನ್ನು ಮದುವೆಯಾದರು.

    ಅನ್ನಾ, 1980ರಲ್ಲಿ ರಷ್ಯಾದಲ್ಲಿ ಜನಿಸಿದರು. ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅನ್ನಾ 2011ರಲ್ಲಿ ತೀನ್ ಮಾರ್ ಚಿತ್ರದ ಚಿತ್ರೀಕರಣದ ವೇಳೆ ಪವನ್ ಕಲ್ಯಾಣ್ ಅವರನ್ನು ಭೇಟಿಯಾದರು. ಆರಂಭದ ಸ್ನೇಹ ನಂತರ ಪ್ರೀತಿಗೆ ತಿರುಗಿತ್ತು. ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ 2013ರಲ್ಲಿ ಇಬ್ಬರೂ ವಿವಾಹವಾದರು. ಅಂದಹಾಗೆ ಅನ್ನಾ, ಪವನ್ ಕಲ್ಯಾಣ್ ಅವರ ಮೂರನೇ ಪತ್ನಿ. ದಂಪತಿಗೆ ಮಾರ್ಕ್ ಶಂಕರ್ ಪವನೋವಿಚ್ ಎಂಬ ಮಗನಿದ್ದಾನೆ. ಅನ್ನಾ ತನ್ನ ಮೊದಲ ಮದುವೆಯಿಂದ ಪೋಲಿನಾ ಅಂಜನಾ ಪವನೋವಾ ಎಂಬ ಮಗಳನ್ನು ಹೊಂದಿದ್ದಾಳೆ.

    ತನ್ನ ಮಾಡೆಲಿಂಗ್ ವೃತ್ತಿಜೀವನದ ಹೊರತಾಗಿ, ಅನ್ನಾ ಸಿಂಗಾಪುರದಲ್ಲಿ ಹೋಟೆಲ್ ಉದ್ಯಮಗಳನ್ನು ಹೊಂದಿದ್ದಾರೆ. ರಷ್ಯಾ ಮತ್ತು ಸಿಂಗಾಪುರದಲ್ಲಿನ ಆಸ್ತಿ ಸೇರಿದಂತೆ ಸುಮಾರು 1800 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.

    See also  ಯಾವ ಹೀರೋ ಡ್ರಗ್ಸ್​ ತಗೋತಾರೆ ಅಂತ ನನಗೆ ಗೊತ್ತು: ಪಾಯಲ್ ಘೋಶ್​

    ಪವನ್ ಅವರು ನಂದಿನಿ ಎಂಬುವರನ್ನು 1997 ರಲ್ಲಿ ಮದುವೆಯಾದರು. ಆದರೆ 2008 ರಲ್ಲಿ ಅವರ ಸಂಬಂಧವು ವಿಚ್ಛೇದನದಲ್ಲಿ ಕೊನೆಗೊಂಡಿತು. ನಂತರ 2009 ರಲ್ಲಿ ಅವರು ತೆಲುಗು ನಟಿ ರೇಣು ದೇಸಾಯಿ ಅವರನ್ನು ವಿವಾಹವಾದರು. ದಂಪತಿಗೆ ಅಕಿರಾ ನಂದನ್ ಮತ್ತು ಅಧಯಾ ಎಂಬ ಇಬ್ಬರು ಮಕ್ಕಳಿದ್ದಾರೆ. 2012ರಲ್ಲಿ ಪವನ್ ಕಲ್ಯಾಣ್ ರೇಣುವಿನಿಂದ ವಿಚ್ಛೇದನ ಪಡೆದರು. ಬಳಿಕ ಅನ್ನಾ ಅವರನ್ನು ಪವನ್​ ಮದುವೆಯಾದರು.

    ಇತ್ತೀಚೆಗೆ ತೆಲುಗು ನಟ ವರುಣ್ ತೇಜ್ ಅವರ ನಿಶ್ಚಿತಾರ್ಥ ಮತ್ತು ರಾಮ್ ಚರಣ್ ಮತ್ತು ಉಪಾಸನಾ ಅವರ ಮಗಳ ತೊಟ್ಟಿಲು ಸಮಾರಂಭದಂತಹ ಪ್ರಮುಖ ಕೌಟುಂಬಿಕ ಕಾರ್ಯಕ್ರಮಗಳಿಗೆ ಅನ್ನಾ ಹಾಜರಾಗದಿದ್ದಾಗ, ಇಬ್ಬರು ದೂರವಾಗುತ್ತಿದ್ದಾರೆ ಎಂಬ ವರದಿಗಳು ಬಂದವು. ಆದರೆ ಪವನ್ ಕಲ್ಯಾಣ್ ಸಾರ್ವಜನಿಕ ಕೆಲಸದಲ್ಲಿ ಸಕ್ರಿಯರಾದಾಗ ಅವರಿಗೆ ಅನ್ನಾರ ಸಂಪೂರ್ಣ ಬೆಂಬಲವಿತ್ತು. (ಏಜೆನ್ಸೀಸ್​)

    ದರ್ಶನ್​ ಜತೆ ಇರೋರೆಲ್ಲ ರೌಡಿಗಳು, ಬೇರೆ ನಟರಷ್ಟು ಅಭಿಮಾನಿಗಳು ಆತನಿಗಿಲ್ಲ! ನಟಿ ರಮ್ಯಾ ಸ್ಫೋಟಕ ಹೇಳಿಕೆ

    ಟೀಮ್​ ಇಂಡಿಯಾದ ಆ ಆಟಗಾರನ ಬಗ್ಗೆ ಮಾತನಾಡಲು ನನಗೆ ಹಕ್ಕಿಲ್ಲ! ಶಿವಂ ದುಬೆ ಅಚ್ಚರಿಯ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts