More

    ಲವ್ವಿ-ಡವ್ವಿ ವದಂತಿಗಳಿಗೆ ಕಿವಿಗೊಡದ ಸಾರಾ, ಓದಿನಲ್ಲಿ ಸಾಧನೆ; ಭಾವನಾತ್ಮಕ ಪೋಸ್ಟ್​ ಹಂಚಿಕೊಂಡ ‘ಕ್ರಿಕೆಟ್ ದೇವರು’

    ನವದೆಹಲಿ: ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರ, ‘ಕ್ರಿಕೆಟ್ ದೇವರು’ ಎಂದೇ ಪ್ರೀತಿ, ಅಭಿಮಾನದಿಂದ ಕರೆಯಲ್ಪಡುವ ‘ಮಾಸ್ಟರ್​ ಬ್ಲಾಸ್ಟರ್’​ ಸಚಿನ್ ತೆಂಡೂಲ್ಕರ್​ ಇದೀಗ ಹೆಮ್ಮೆಯ ವಿಷಯವೊಂದನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿರುವುದು ಎಲ್ಲರ ಗಮನಸೆಳೆದಿದೆ. ತಮ್ಮ ಪ್ರೀತಿಯ ಪುತ್ರಿ ಸಾರಾ ತೆಂಡೂಲ್ಕರ್​ ಸ್ನಾತಕೋತ್ತರ ಪದವಿ ಪೂರೈಸಿದ್ದು, ನಮನ್ನು ಹೆಮ್ಮೆ ಪಡುವಂತೆ ಮಾಡಿದ್ದಾಳೆ ಎಂದು ಸಚಿನ್ ಅತೀವ ಸಂತಸದಿಂದ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಪೊಲೀಸ್ ಠಾಣೆಗೆ ಕಲ್ಲು ತೂರಾಟ; ಲಾಠಿ ಪ್ರಹಾರ, ಅಶ್ರುವಾಯು ಸಿಡಿಸಿ ಪರಿಸ್ಥಿತಿ ನಿಐಂತ್ರಣಕ್ಕೆ ಯತ್ನ

    ಕೇವಲ ಕ್ರಿಕೆಟ್ ಸ್ಟೇಡಿಯಂಗೆ ಆಗಮಿಸಿ ಮ್ಯಾಚ್ ನೋಡಿದ್ರೂ, ಹೊರಗಡೆ ಹೋಟೆಲ್​ನಲ್ಲಿ ಊಟ ಸವಿದರೂ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗುತ್ತಿದ್ದ ಸಾರಾ, ಒಂದಲ್ಲ ಒಂದು ವಿಚಾರಗಳಿಂದ ನೆಟ್ಟಿಗರ ಲೇವಡಿಗೆ ಗುರಿಯಾಗುತ್ತಿದ್ದರು. ಟೀಂ ಇಂಡಿಯಾದ ಹೆಸರಾಂತ ಕ್ರಿಕೆಟಿಗ ಶುಭಮನ್​ ಗಿಲ್​ ಜತೆಗೆ ಸಾರಾ ಕದ್ದುಮುಚ್ಚಿ ಡೇಟಿಂಗ್ ಮಾಡುತ್ತಿದ್ದಾರೆ, ಇವರಿಬ್ಬರು ಶೀಘ್ರವೇ ಮದುವೆ ಕೂಡ ಆಗಲಿದ್ದಾರೆ ಎಂದು ವದಂತಿಗಳನ್ನು ಹಬ್ಬಿಸಲಾಗಿತ್ತು. ಆದ್ರೆ, ಇದ್ಯಾವುದಕ್ಕೂ ಕಿವಿಗೊಡದ ಸಾರಾ, ಇದೀಗ ಡಿಸ್ಟಿಂಕ್ಷನ್​ನಲ್ಲಿ ತಮ್ಮ ಮಾಸ್ಟರ್ಸ್​​ ಅನ್ನು ಮುಗಿಸಿಕೊಂಡಿದ್ದಾರೆ.

    https://x.com/sachin_rt/status/1793988043667308653?ref_src=twsrc%5Etfw%7Ctwcamp%5Etweetembed%7Ctwterm%5E1793988043667308653%7Ctwgr%5Ea3a1e309b56cfa449817dbb67d8a9253bcadeee7%7Ctwcon%5Es1_&ref_url=https%3A%2F%2Fwww.indiatoday.in%2Fsports%2Fcricket%2Fstory%2Fsara-tendulkar-sachin-tendulkar-ucl-post-graduation-ceremony-anjali-instagram-2543542-2024-05-24

    ಇನ್ನು ಮಗಳ ಸಾಧನೆಯನ್ನು ಕೊಂಡಾಡಿದ ಕ್ರಿಕೆಟ್ ದೇವರು, “ಪುತ್ರಿ ಸಾರಾ ಕ್ಲಿನಿಕಲ್ ಮತ್ತು ಪಬ್ಲಿಕ್ ಹೆಲ್ತ್ ನ್ಯೂಟ್ರಿಷನ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪೋಷಕರಾಗಿ, ಈ ಸ್ಥಾನಕ್ಕೆ ಬರಲು ನೀನು ವರ್ಷಗಳಿಂದ ಪಟ್ಟ ಶ್ರಮ ನೋಡಿದ ನಮಗೆ ತುಂಬ ಹೆಮ್ಮೆಯಾಗಿದೆ. ಇದು ಅಷ್ಟು ಸುಲಭವಲ್ಲ. ಭವಿಷ್ಯಕ್ಕಾಗಿ ನಿನ್ನೆಲ್ಲಾ ಕನಸುಗಳು ಸಾಕಾರಗೊಳ್ಳಲಿ” ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪುತ್ರಿ ಸಾರಾ ಮತ್ತು ಪತ್ನಿ ಅಂಜಲಿ ಜತೆಗಿರುವ ಫೋಟೋ ಜತೆಗೆ ಈ ವಿಷಯವನ್ನು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).

    ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ ಅಂದ್ರೆ, ನೀನು 500 ರನ್​ ಗಳಿಸಿ ಏನು ಫಲ? ಸಂಜುಗೆ ಬೆವರಿಳಿಸಿದ ಮಾಜಿ ಆಟಗಾರ

    ಇವರಿಬ್ಬರಿಲ್ಲ ಅಂದ್ರೆ IPL​ಗೆ ಕಳೆಯೇ ಇಲ್ಲ! ಮುಂದೆ ಯಾರೂ ಹೀಗೆ ಹುಚ್ಚೆದ್ದು ನೋಡೋದಿಲ್ಲ: ನವಜೋತ್ ಸಿಂಗ್ ಸಿಧು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts