More

  ತಿರುಪತಿಗೆ ಭಕ್ತಸಾಗರ..36 ಗಂಟೆ ಕಾದರಷ್ಟೇ ತಿಮ್ಮಪ್ಪನ ದರ್ಶನ!

  ತಿರುಪತಿ: ತಿರುಮಲೆಯಲ್ಲಿ ಶ್ರೀವೆಂಕಟರಮಣ ಸ್ವಾಮಿ ದರ್ಶನಕ್ಕೆ ಭಾನುವಾರ ಭಕ್ತರ ದಂಡೇ ಹರಿದುಬರುತ್ತಿದೆ. ವಾರಾಂತ್ಯದ ಜೊತೆಗೆ ಸೋಮವಾರವೂ ರಜೆ ಇರುವುದರಿಂದ ದೇಶದ ನಾನಾ ಕಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸ್ವಾಮಿಯ ದರ್ಶನಕ್ಕೆ ಬರುತ್ತಿದ್ದಾರೆ.

  ಇದನ್ನೂ ಓದಿ: ನ.4ರಿಂದ ಮೂರು ದಿನ ಶ್ರೀಶೈಲ ಪೀಠದ ಉಭಯ ಶ್ರೀಗಳ ಪುಣ್ಯಾರಾಧನೆ 

  ತಿರುಮಲದಲ್ಲಿ ಯಾತ್ರಿಗಳ ಭಾರಿ ನೂಕುನುಗ್ಗಲು ಕಂಡುಬರುತ್ತಿದ್ದು, ಭಾನುವಾರ ವೈಕುಂಠಂ ಸರದಿ ಸಂಕೀರ್ಣ, ನಾರಾಯಣಗಿರಿ ಶೆಡ್‌ಗಳು ಭರ್ತಿಯಾಗಿವೆ. ರಿಂಗ್ ರಸ್ತೆಯ ಆಕ್ಟೋಪಸ್ ಕಟ್ಟಡದವರೆಗೆ ಸುಮಾರು 3 ಕಿಲೋಮೀಟರ್‌ಗಳವರೆಗೆ ಭಕ್ತರು ಸರತಿ ಸಾಲಿನಲ್ಲಿ ನಿಂತು ಸಾಗುತ್ತಾರೆ.

  ಹೀಗಾಗಿಯೇ ವೆಂಕಟರಮಣಸ್ವಾಮಿಯ ದರ್ಶನಕ್ಕೆ 36 ಗಂಟೆ ಕಾಯಬೇಕಿದೆ. ಕ್ಯೂನಲ್ಲಿರುವ ಭಕ್ತರಿಗೆ ನೀರು, ಆಹಾರ ಮತ್ತಿತರ ಮೂಲಸಂಕರ್ಯದ ವ್ಯವಸ್ಥೆ ಕಲ್ಪಿಸುವ ಬಗ್ಗೆ ಟಿಟಿಡಿ ಅಧಿಕಾರಿಗಳು ನಿರಂತರ ನಿಗಾ ವಹಿಸಿದ್ದಾರೆ. ಕುಡಿಯುವ ನೀರು ಅನ್ನ ಮತ್ತು ಹಾಲು ನೀಡಲಾಗುತ್ತಿದೆ. ಸೋಮವಾರದವರೆಗೂ ಈ ದಟ್ಟಣೆ ಮುಂದುವರಿಯುವ ಸಾಧ್ಯತೆ ಇದೆ.

  ಗುರುವಾರದಿಂದ ಯಾತ್ರಾರ್ಥಿಗಳ ಒಳಹರಿವು ಹೆಚ್ಚಾಗಿದೆ. ಸೋಮವಾರವೂ ರಜೆ ಇರುವುದರಿಂದ ಮುಂದುವರಿಯುವ ನಿರೀಕ್ಷೆಯಿದೆ. ವೆಂಕಟರಮಣಸ್ವಾಮಿ ಸೇವಕರ ನೆರವಿನೊಂದಿಗೆ ಸರತಿ ಸಾಲಿನಲ್ಲಿ ಭಕ್ತರಿಗೆ ಅನ್ನಪ್ರಸಾದ, ನೀರನ್ನು ಟಿಟಿಡಿ ನಿರಂತರವಾಗಿ ವಿತರಿಸುತ್ತಿದೆ. ಟಿಟಿಡಿ ಜೆಇಒ ವೀರಬ್ರಹ್ಮಮ್ಮ ಮೇಲ್ವಿಚಾರಣೆಯಲ್ಲಿ ಹಿರಿಯ ಅಧಿಕಾರಿಗಳು ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲು ಶ್ರಮಿಸುತ್ತಿದ್ದಾರೆ, ಟಿಟಿಡಿ ವಿಜಿಲೆನ್ಸ್ ಮತ್ತು ಭದ್ರತಾ ವಿಭಾಗ ನಿರಂತರವಾಗಿ ಭಕ್ತರ ಹರಿವನ್ನು ನಿರ್ವಹಿಸುತ್ತಿದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

  ಪವನ್​ ಕಲ್ಯಾಣ್​ಗೆ ಅತ್ತಿಗೆ ಕೊಟ್ರು ಮರೆಯಲಾಗದ ಗಿಫ್ಟ್​..ಇದಕ್ಕೆ ಚಿರಂಜೀವಿ ಏನಂದ್ರು ಗೊತ್ತಾ?

  See also  "140 ಕೋಟಿ ಭಾರತೀಯರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದೆ": ಮೋದಿ - ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಧಾನಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts