

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ನಟ ನವೀನ್ ಶಂಕರ್, ನಾಯಕನಾಗಿ ಮಾತ್ರವಲ್ಲದೇ ವಿಲನ್ ಪಾತ್ರಗಳಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಕಳೆದ ವರ್ಷ ಅವರು ನಟಿಸಿದ ನಾಲ್ಕು ಚಿತ್ರಗಳೂ ಬಾಕ್ಸಾಫಿಸಿನಲ್ಲಿ ಬೌಂಡರಿ, ಸಿಕ್ಸರ್ ಸಿಡಿಸಿ, ಪ್ರೇಕ್ಷಕರ ಮೆಚ್ಚುಗೆ ಪಡೆದಿವೆ. "ಹೊಂದಿಸಿ ಬರೆಯಿರಿ' ಚಿತ್ರದ ರಂಜಿತ್ ಆಗಿ, "ಗುರುದೇವ್ ಹೊಯ್ಸಳ'ದ ಖಡಕ್ ವಿಲನ್ ಬಲಿ ಪಾತ್ರದಲ್ಲಿ, "ಕ್ಷೇತ್ರಪತಿ'ಯ ಜವಾರಿ ಹುಡುಗ ಬಸವನಾಗಿ, "ಸಲಾರ್ 1: ಸೀಸ್ೈರ್'ನಲ್ಲಿ ಪಂಡಿತ್ ಪಾತ್ರದಲ್ಲಿ ಮಿಂಚಿದ್ದರು. ಇದೀಗ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನವೀನ್ ಈ ವರ್ಷವೂ ನಾಲ್ಕು ಸಿನಿಮಾಗಳ ನಿರೀೆಯಲ್ಲಿದ್ದಾರೆ. "ಕಳೆದ ವರ್ಷ ನಾಲ್ಕು ಚಿತ್ರಗಳು ಬಿಡುಗಡೆಯಾದವು. ಪ್ರಚಾರದ ವೇಳೆ ರಾಜ್ಯದ ಮೂಲೆ ಮೂಲೆಗಳಲ್ಲಿ ಜನರನ್ನು ಭೇಟಿ ಮಾಡಿದ್ದು ಖುಷಿಯ ದಿನಗಳು. ಅಷ್ಟೊಂದು ಜನ ನನ್ನನ್ನು ಇಷ್ಟಪಡುತ್ತಾರೆ ಅಂತ ಗೊತ್ತಾಗಿದ್ದೇ ಆಗ. "ಗುಳ್ಟೂ' ಚಿತ್ರದಿಂದ ಹಿಡಿದು, ರಂಜಿತ್, ಬಲಿ, ಪಂಡಿತ್ ಅಂತ ಕೂಗುತ್ತಿದ್ದರು. ಪಾತ್ರದಿಂದ ಗುರುತಿಸಿ ಕರೆದಾಗ ಒಬ್ಬ ಕಲಾವಿದನಿಗೆ ಹೆಚ್ಚು ಖುಷಿಯಾಗುತ್ತದೆ. ಈ ಬಾರಿಯ ಹುಟ್ಟುಹಬ್ಬವನ್ನು ನನ್ನವರು ಅರ್ಥಾತ್ ಅಭಿಮಾನಿಗಳ ಜತೆ ಕಳೆಯಲಿದ್ದೇನೆ' ಎಂದು ಹೇಳಿಕೊಳ್ಳುತ್ತಾರೆ ನವೀನ್ ಶಂಕರ್.
ಬಲಿಷ್ಠ ಪಾತ್ರಕ್ಕೆ ಬಲಾಢ್ಯನಾಗುತ್ತಿದ್ದೇನೆ!
ನವೀನ್ ಶಂಕರ್ ನಟಿಸಿರುವ "ನೋಡಿದವರು ಏನಂತಾರೆ' ಚಿತ್ರ ಸದ್ಯ ರಿಲೀಸ್ಗೆ ರೆಡಿಯಿದೆ. ಅದರ ಜತೆ "ಕಿರಿಕೆಟ್ 11' ಸೆಟ್ಟೇರಬೇಕಿದೆ. "ಹಾಗೇ "ಗುಳ್ಟೂ' ಚಿತ್ರದ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಜತೆಗೂ ಒಂದು ಪ್ರಾಜೆಕ್ಟ್ ಮಾಡಲಿದ್ದೇನೆ. ಅದು ನನ್ನ ಡ್ರೀಮ್ ಪ್ರಾಜೆಕ್ಟ್. ಕೆಮ್ ಡ್ರಾಮಾ ಜಾನರ್ ಚಿತ್ರವಾಗಿರಲಿದೆ. ಎರಡು ಮೂರು ಚಿತ್ರಗಳಲ್ಲಿ ಬಲಾಢ್ಯವಾಗಿ ಕಾಣಿಸಿಕೊಳ್ಳಲಿದ್ದೇನೆ. ಹೀಗಾಗಿ ಜಿಮ್, ವರ್ಕೌಟ್ ಅಂತ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಒಂದು ಚಿತ್ರದಲ್ಲಿ ನಾಯಕ. ಮತ್ತೊಂದು ಗ್ರೇ ಶೇಡ್ ಇರಲಿದೆ. ಇನ್ನೊಂದು ಚಿತ್ರದ ಮಾತುಕತೆ ನಡೆಯುತ್ತಿದೆ' ಎಂದು ಮಾಹಿತಿ ನೀಡುತ್ತಾರೆ.
ಮತ್ತೆ ರ್ಬತಾನಾ ಪಂಡಿತ್?
"ಸಲಾರ್ ಪಾರ್ಟ್ 1 : ಸೀಸ್ೈರ್'ನಲ್ಲಿ ಖಡಕ್ ಪಂಡಿತ್ ಪಾತ್ರದಲ್ಲಿ ನವೀನ್ ಶಂಕರ್ ಕಾಣಿಸಿಕೊಂಡಿದ್ದರು. "ಸಲಾರ್ ಪಾರ್ಟ್ 2 : ಶೌರ್ಯಂಗಪರ್ವಂ' ಇತ್ರದಲ್ಲಿ ಅವರ ಪಾತ್ರಕ್ಕೆ ಮತ್ತಷ್ಟು ಪ್ರಾಮುಖ್ಯವಿರಲಿದೆ ಎನ್ನಲಾಗಿತ್ತು. ಆದರೆ, "ನಿರ್ದೇಶಕ ಪ್ರಶಾಂತ್ ನೀಲ್ ಸರ್, ತೆಲುಗಿನ ಜೂ. ಎನ್ಟಿಆರ್ ಅವರ ಜತೆ ಒಂದು ಸಿನಿಮಾ ಮಾಡಬೇಕಿದೆ. ಹೀಗಾಗಿ ಮೊದಲು ಆ ಚಿತ್ರವನ್ನು ಪ್ರಾರಂಭಿಸುತ್ತಾರಾ? ಅಥವಾ "ಸಲಾರ್ 2' ಶುರು ಮಾಡುತ್ತಾರಾ ಎಂಬುದು ಸದ್ಯಕ್ಕೆ ಗೊತ್ತಿಲ್ಲ. ಕೆಲವೇ ದಿನಗಳಲ್ಲಿ ಸ್ಪಷ್ಟತೆ ದೊರೆಯಲಿದೆ' ಎನ್ನುತ್ತಾರೆ.