More

    ಮುಂದಿನ ವರ್ಷ ಈ 4 ಸ್ಟಾರ್​ ಆಟಗಾರರನ್ನು ಕೈಬಿಡಲಿದೆ ಆರ್​ಸಿಬಿ ಫ್ರಾಂಚೈಸಿ! ಫ್ಯಾನ್ಸ್​ ಕಂಗಾಲು

    ಬೆಂಗಳೂರು: ನಿನ್ನೆ (ಮೇ.23) ರಾಜಸ್ಥಾನ ರಾಯಲ್ಸ್​ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ 4 ವಿಕೆಟ್ ಅಂತರದಿಂದ ಸೋತ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ, ಸತತವಾಗಿ 17ನೇ ಆವೃತ್ತಿಯಲ್ಲಿಯೂ ಕಪ್ ನೋಡದೆ ತಮ್ಮ ಅಭಿಮಾನಿಗಳನ್ನು ನಿರಾಸೆಗೊಳಿಸಿತು. ಆದ್ರೆ, ಲೀಗ್​ನ ಮೊದಲ ಹಂತದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿ, ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ಆರ್​ಸಿಬಿ, ಪ್ಲೇಆಫ್​ ಇರಲಿ ಮೊದಲು ಟಾಪ್ 5ಗೆ ಬರಲಿ ನೋಡೋಣ ಎಂದು ಅನೇಕರು ಸವಾಲು ಹಾಕಿದ್ದರು. ಈ ಟೀಕೆ, ಲೆಕ್ಕಾಚಾರಗಳನ್ನು ತಲೆಕೆಳಗಾಗಿ ಮಾಡಿದ ಆರ್​ಸಿಬಿ ತಂಡ, ಬ್ಯಾಕ್ ಟು ಬ್ಯಾಕ್ ಆರು ಪಂದ್ಯಗಳನ್ನು ಭಾರೀ ಅಂತರದಿಂದ ಗೆಲ್ಲುವ ಮೂಲಕ ಪ್ಲೇಆಫ್​ಗೆ ಅದ್ದೂರಿ ಎಂಟ್ರಿ ಕೊಟ್ಟು, ಟೀಕಾಕಾರರಿಗೆ ಭಾರೀ ಮುಖಭಂಗ ಉಂಟುಮಾಡಿತು.

    ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ನಡೆಸಿರುವುದು ಲೈಂಗಿಕ ಹತ್ಯಾಕಾಂಡ: ಪ್ರಾಂತ ಕೃಷಿ ಕೂಲಿಕಾರರ ಸಂಘ ಆಕ್ರೋಶ

    ಪ್ರಸಕ್ತ ಐಪಿಎಲ್​ ಆವೃತ್ತಿಯಲ್ಲಿ ಅತ್ಯಂತ ಕಳಪೆ ಫಾರ್ಮ್​ನಿಂದ ಅತ್ಯುತ್ತಮ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಎಲ್ಲಿಲ್ಲದ ಮೆಚ್ಚುಗೆ, ಶ್ಲಾಘನೆ ವ್ಯಕ್ತವಾಗಿದೆ. ಯಾರು ಟೀಕೆ, ಅಪಹಾಸ್ಯ ಮಾಡಿದ್ದರೋ, ಅವರೇ ಇಂದು ಆರ್​ಸಿಬಿ ತಂಡ ನೀಡಿದ ಅಮೋಘ ಪ್ರದರ್ಶನಕ್ಕೆ ಮನಸೋತು, ತಮ್ಮ ಮಾತುಗಳನ್ನು ಬದಲಾಯಿಸಿಕೊಂಡಿದ್ದಾರೆ. ಆದ್ರೆ, ಈ ಮಧ್ಯೆ ಸಿಎಸ್​ಕೆ ತಂಡದ ಕೆಲವು ಅಭಿಮಾನಿಗಳು ಮಾತ್ರ ಎಂದಿನಂತೆ ತಮ್ಮ ಟೀಕೆ ಮಾಡುವ ಚಾಳಿಯನ್ನು ಯಶಸ್ವಿಯಾಗಿ ಮುಂದುವರೆಸಿದ್ದಾರೆ.

    ಆರು ಸತತ ಗೆಲುವಿನಲ್ಲಿ ಒಂದಷ್ಟು ಆಟಗಾರರು ಅದ್ದೂರಿ ಪ್ರದರ್ಶನ ನೀಡಿ, ತಂಡದವರ ಗಮನೆಸೆಳೆದು ಮುಂದಿನ ಸೀಸನ್​ಗೂ ಆಡುವ ಭರವಸೆ ಉಳಿಸಿಕೊಂಡರೆ, ಇನ್ನೂ ಕೆಲವರು ಇಡೀ ಸೀಸನ್​ನಲ್ಲಿ ಒಂದೇ ಒಂದು ಪಂದ್ಯವನ್ನು ಆಡದೆ, ತಂಡದೊಂದಿಗೆ ಪಂದ್ಯ ನೋಡುತ್ತ ಪ್ರೋತ್ಸಾಹಿಸಿದ್ದಾರೆ. ಆದ್ರೆ, ಅಪಾರ ನಿರೀಕ್ಷೆ ಮೂಡಿಸಿದ್ದ ಸ್ಟಾರ್​ ಆಟಗಾರರೇ ಅತ್ಯಂತ ಕಳೆಪೆ ಪ್ರದರ್ಶನ ನೀಡಿದ್ದು, ಇವರು ಅವರೇನಾ? ಎಂದು ಪ್ರಶ್ನಿಸುವಂತೆ ಮಾಡಿತು.

    ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ನಡೆಸಿರುವುದು ಲೈಂಗಿಕ ಹತ್ಯಾಕಾಂಡ: ಪ್ರಾಂತ ಕೃಷಿ ಕೂಲಿಕಾರರ ಸಂಘ ಆಕ್ರೋಶ

    ಈ ಸೀಸನ್​ನಲ್ಲಿ ಆರ್​ಸಿಬಿ ಪರ ಆರಂಭಿಕ ಪಂದ್ಯಗಳಲ್ಲಿ ಆಡಿದ ವೆಸ್ಟ್​ ಇಂಡೀಸ್​ನ ಸ್ಟಾರ್​ ಬೌಲರ್​ ಅಲ್ಜಾರಿ ಜೋಸೆಫ್, ತೀರ ಕಳಪೆ ಮಟ್ಟದ ಬೌಲಿಂಗ್ ಮಾಡಿ, ಎದುರಾಳಿಗಳು ಅತ್ಯಧಿಕ ರನ್​ಗಳನ್ನು ತನ್ನ ಓವರ್​ನಲ್ಲಿಯೇ ಸಿಡಿಸುವಂತೆ ಮಾಡಿದರು. ಇದರಿಂದ ಕೆರಳಿದ ಫ್ರಾಂಚೈಸಿ ಅಭಿಮಾನಿಗಳು ಇಂತಹ ಆಟಗಾರನಿಗೆ 11.5 ಕೋಟಿ ರೂ. ಕೊಟ್ಟು ತಂಡಕ್ಕೆ ಕರೆದುಕೊಳ್ಳುವಂತದ್ದೇನಿತ್ತು? ಎಂದು ಪ್ರಶ್ನಿಸಿತ್ತು. ವ್ಯಾಪಕ ಆಕ್ರೋಶದ ಬೆನ್ನಲ್ಲೇ ಟೀಮ್​ ಮ್ಯಾನೆಂಜ್​ಮೆಂಟ್ ಜೋಸೆಫ್​ರನ್ನು ತಂಡದಿಂದ ಕೈಬಿಟ್ಟಿತು.

    ಜೋಸೆಫ್​ ಜತೆಗೆ ಆಸ್ಟ್ರೇಲಿಯಾದ ಸ್ಟಾರ್ ಆಲ್​ರೌಂಡರ್​​ ಗ್ಲೆನ್ ಮ್ಯಾಕ್ಸ್​ವೆಲ್​ ಕೂಡ ಇದೇ ರೀತಿ ಕಳಪೆ ಪ್ರದರ್ಶನ ನೀಡಿದ್ದು, ನಿನ್ನೆಯ ಪಂದ್ಯದಲ್ಲಿಯೂ ಅದನ್ನು ಮರುಕಳಿಸಿದರು. ಸದ್ಯ ಈ ಎಲ್ಲಾ ವಿಷಯಗಳಿಂದ ತೀವ್ರ ಕಂಗೆಟ್ಟ ಆರ್​ಸಿಬಿ ಫ್ರಾಂಚೈಸಿ, ಇದೀಗ ತಮ್ಮ ತಂಡದಿಂದ ಮುಂಬರುವ ಆವೃತ್ತಿಯಲ್ಲಿ ನಾಲ್ವರು ಸ್ಟಾರ್​ ಆಟಗಾರರನ್ನು ಕೈಬಿಡಲು ನಿರ್ಧರಿಸಿದೆ ಎಂಬ ಹೊಸ ಮಾಹಿತಿ ಹೊರಬಿದ್ದಿದೆ.

    ಇದನ್ನೂ ಓದಿ: ಆ ನಿರ್ಮಾಪಕರಿಂದ ನನಗೆ ಮೋಸವಾಯಿತು… ವರ್ಷಗಳ ನಂತರ ಸತ್ಯ ಬಿಚ್ಚಿಟ್ಟ ನಮಿತಾ

    ವರದಿಗಳ ಪ್ರಕಾರ, ಗ್ಲೆನ್ ಮ್ಯಾಕ್ಸ್​ವೆಲ್, ಕ್ಯಾಮರಾನ್ ಗ್ರೀನ್, ಅಲ್ಜಾರಿ ಜೋಸೆಫ್ ಮತ್ತು ಆಕಾಶ್ ದೀಪ್ ಅಥವಾ ಅನುಜ್ ರಾವತ್​ರನ್ನು ತಂಡದಿಂದ ರಿಲೀಸ್ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ಆರ್​ಸಿಬಿ ಅಭಿಮಾನಿಗಳಲ್ಲಿ ಭಾರೀ ಆತಂಕ ಮೂಡಿದ್ದು, ಇದು ನಿಜವೇ? ಎಂಬ ಪ್ರಶ್ನೆಯನ್ನು ಮುಂದಿಡುವಂತೆ ಮಾಡಿದೆ. ಆದರೆ, ಈ ಕುರಿತು ಆರ್​ಸಿಬಿ ಫ್ರಾಂಚೈಸಿ ಪ್ರಕಟಿಸಲಿರುವ ಅಧಿಕೃತ ಮಾಹಿತಿಗಾಗಿ ಸದ್ಯ ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).

    ನಿವೃತ್ತಿ ಬಗ್ಗೆ ನಮಗೆ ಸ್ಪಷ್ಟನೆ ಇಲ್ಲ! ಆದ್ರೆ, ಹೋಗುವ ಮುನ್ನ ಧೋನಿ ಹೇಳಿದ್ದು ಇದೊಂದು ಮಾತು…

    ಇವರಿಬ್ಬರಿಲ್ಲ ಅಂದ್ರೆ IPL​ಗೆ ಕಳೆಯೇ ಇಲ್ಲ! ಮುಂದೆ ಯಾರೂ ಹೀಗೆ ಹುಚ್ಚೆದ್ದು ನೋಡೋದಿಲ್ಲ: ನವಜೋತ್ ಸಿಂಗ್ ಸಿಧು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts