More

    ಸಾಲ ತೀರಿಸಲು ಗಮನ ನೀಡುತ್ತಿದೆ ಕಂಪನಿ: ಅದಾನಿ ಸಮೂಹದ ಷೇರು ಬೆಲೆ ರೂ. 1500 ದಾಟಬಹುದು

    ಮುಂಬೈ: ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ (Adani Ports and Special Economic Zone Ltd.- APSEZ) ಷೇರುಗಳ ಮೇಲೆ ತಜ್ಞರು ಬುಲಿಶ್ ಆಗಿದ್ದಾರೆ. ಬ್ರೋಕರೇಜ್ ಸಂಸ್ಥೆಯಾದ ಮೋತಿಲಾಲ್ ಓಸ್ವಾಲ್ ತನ್ನ ಇತ್ತೀಚಿನ ವರದಿಯಲ್ಲಿ ಅದಾನಿ ಸಮೂಹದ ಈ ಷೇರನ್ನು ಖರೀದಿಸಲು ಸಲಹೆ ನೀಡಿದೆ. ಈ ಷೇರಿಗೆ ಗುರಿ ಬೆಲೆಯನ್ನೂ ನಿಗದಿಪಡಿಸಿದೆ.

    ಬ್ರೋಕರೇಜ್ ಪ್ರಕಾರ, ಅದಾನಿ ಪೋರ್ಟ್ಸ್ ತನ್ನ ಬ್ಯಾಲೆನ್ಸ್ ಶೀಟ್ ಸ್ಥಿತಿಯನ್ನು ಬಲವಾದ ನಗದು ಹರಿವಿನೊಂದಿಗೆ ನಿರಂತರವಾಗಿ ಸುಧಾರಿಸುತ್ತಿದೆ. ಈ ಅದಾನಿ ಗ್ರೂಪ್ ಕಂಪನಿಯು ತನ್ನ ಕಾರ್ಯಾಚರಣೆಯ ದಕ್ಷತೆಯಿಂದಾಗಿ ದೊಡ್ಡ ಮಾರುಕಟ್ಟೆ ಪಾಲನ್ನು ಹೊಂದಿದೆ.

    ಮೋತಿಲಾಲ್ ಓಸ್ವಾಲ್ ಷೇರಿನ ಗುರಿ ಬೆಲೆ 1590 ರೂ.ಗೆ ನಿಗದಿಪಡಿಸಿದೆ. ಈ ಸ್ಟಾಕ್‌ನಲ್ಲಿ ‘ಖರೀದಿ’ ರೇಟಿಂಗ್ ಅನ್ನು ಮೋತಿಲಾಲ್​ ಓಸ್ವಾಲ್​ ಕಾಯ್ದುಕೊಂಡಿದೆ.

    ಮಂಗಳವಾರ, ಅದಾನಿ ಪೋರ್ಟ್ಸ್‌ನ ಷೇರುಗಳ ಬೆಲೆ ಶೇಕಡಾ 0.08 ರಷ್ಟು ಏರಿಕೆಯಾಗಿ 1322.10 ರೂ. ತಲುಪಿವೆ. ಈ ಬೆಲೆಗೆ ಹೋಲಿಸಿದರೆ, ಮೋತಿಲಾಲ್‌ ಓಸ್ವಾಲ್​ ನಿಗದಿಪಡಿಸಿರುವ ಗುರಿ ಬೆಲೆಯು ಅಂದಾಜು 20 ಪ್ರತಿಶತದಷ್ಟು ಸಂಭಾವ್ಯ ಏರಿಕೆಯನ್ನು ತೋರಿಸುತ್ತದೆ.

    2024-26 ರ ಹಣಕಾಸು ವರ್ಷದ ಅವಧಿಯಲ್ಲಿ ಅದಾನಿ ಪೋರ್ಟ್ಸ್ ಕಾರ್ಯಾಚರಣೆಗಳಿಂದ ನಗದು ಹರಿವು ವಾರ್ಷಿಕವಾಗಿ ಶೇಕಡಾ 13ರ ದರದಲ್ಲಿ ಬೆಳೆಯಬಹುದು ಎಂದು ದೇಶೀಯ ಬ್ರೋಕರೇಜ್ ನಂಬುತ್ತದೆ. ಬಂಡವಾಳ ವೆಚ್ಚಗಳಿಗೆ ಹಣಕಾಸು ಒದಗಿಸಲು ಮತ್ತು ಸಾಲವನ್ನು ಕಡಿಮೆ ಮಾಡಲು ಇದನ್ನು ಬಳಸಲಾಗುತ್ತದೆ ಎಂದು ಅದು ಅಂದಾಜಿಸಿದೆ.

    2023-24 ರ ಹಣಕಾಸು ವರ್ಷದಲ್ಲಿ ಅದಾನಿ ಪೋರ್ಟ್ಸ್ ದಾಖಲೆಯ 42 ಕೋಟಿ ಟನ್ ಸರಕು ಸಾಗಣೆಯನ್ನು ನಿರ್ವಹಿಸಿದೆ. ಭಾರತದ ಅತಿ ದೊಡ್ಡ ಖಾಸಗಿ ಬಂದರು ನಿರ್ವಾಹಕ ಕಂಪನಿಯಾಗಿರುವ ಅದಾನಿ ಪೋರ್ಟ್ಸ್ ನಿರ್ವಹಿಸುವ ಸರಕು ವರ್ಷದಿಂದ ವರ್ಷಕ್ಕೆ 24 ಪ್ರತಿಶತದಷ್ಟು ಬೆಳೆದಿದೆ. ಇದರಲ್ಲಿ ಅಂತಾರಾಷ್ಟ್ರೀಯ ಬಂದರುಗಳೂ ಸೇರಿವೆ.

    ಹಣಕಾಸು ವರ್ಷ 2023-24ರಲ್ಲಿ ಕಂಪನಿಯ ದೇಶೀಯ ಬಂದರುಗಳು 408 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಸರಕುಗಳನ್ನು ನಿರ್ವಹಿಸಿವೆ. ಕಂಪನಿಯು 2014 ರಲ್ಲಿ ಅಂದಾಜು 1.43 ಕೋಟಿ ಸರಕು ವಾಹನಗಳನ್ನು ನಿರ್ವಹಿಸಿದೆ.

    ವೊಡಾಫೋನ್ ಐಡಿಯಾದ ಷೇರು ಬೆಲೆಯಲ್ಲಿ ಬಿರುಗಾಳಿ: ವರ್ಷದ ಸ್ಟಾಕ್ ಇದಾಗಲಿದೆ ಎಂದು ತಜ್ಞರು ಹೇಳುತ್ತಿರುವುದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts