More

    ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಸಮಿಫೈನಲ್​ ತಲುಪಲ್ಲ! ಮಾಜಿ ಸ್ಟಾರ್​ ಕ್ರಿಕೆಟಿಗನ ಶಾಕಿಂಗ್​ ಹೇಳಿಕೆ

    ನವದೆಹಲಿ: ಟಿ20 ವಿಶ್ವಕಪ್ 2024 ಫೀವರ್​ ಈಗಷ್ಟೇ ಶುರುವಾಗುತ್ತಿದೆ. ಮೆಗಾ ಟೂರ್ನಿಯ ಆರಂಭಕ್ಕೆ ಇನ್ನೂ ಒಂದು ತಿಂಗಳಷ್ಟೇ ಬಾಕಿ ಇದೆ. ಆಯಾ ತಂಡಗಳು ಘೋಷಣೆಯಾಗುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಏಕಾಏಕಿ ಐಪಿಎಲ್‌ನಿಂದ ವಿಶ್ವಕಪ್‌ನತ್ತ ಗಮನ ಹರಿಸಿದ್ದಾರೆ. ನ್ಯೂಜಿಲೆಂಡ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ತಮ್ಮ ತಂಡಗಳನ್ನು ಪ್ರಕಟಿಸಿವೆ. ಇದನ್ನು ನೋಡಿದ ಕ್ರೀಡಾಭಿಮಾನಿಗಳು ಎಲ್ಲ ತಂಡವು ಬಲಿಷ್ಠವಾಗಿದೆ ಎನ್ನುತ್ತಿದ್ದಾರೆ. ಇದರ ನಡುವೆ ಇಂಗ್ಲೆಂಡ್​ ಕ್ರಿಕೆಟ್​ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಟೀಮ್​ ಇಂಡಿಯಾ ತಂಡದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

    ಮೈಕಲ್ ವಾನ್ ಪ್ರಕಾರ ಅಮೆರಿಕ-ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ರೋಹಿತ್​ ಶರ್ಮ ಪಡೆ ಸೆಮಿಫೈನಲ್‌ಗೂ ಬರುವುದಿಲ್ಲವಂತೆ. ಇಂಗ್ಲೆಂಡ್ ಜತೆಗೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮಾತ್ರ ಈ ಕಿರು ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಲಿವೆ ಎಂದು ಮೈಕಲ್​ ವಾನ್ ಅಂದಾಜಿಸಿದ್ದಾರೆ.

    ಭಾರತ ತಂಡ ಅಂತಿಮ ನಾಲ್ಕರ ಘಟ್ಟ ತಲುಪುವುದು ತುಂಬಾ ಕಷ್ಟಕರ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಟೀಮ್​ ಇಂಡಿಯಾದ ವಿಶ್ವಕಪ್ ಪಯಣದ ಬಗ್ಗೆ ವಾನ್ ಹೇಳಿರುವ ಭವಿಷ್ಯ ಇದೀಗ ಹಾಟ್ ಟಾಪಿಕ್ ಆಗಿದ್ದು, ಭಾರತೀಯ ಅಭಿಮಾನಿಗಳು ಅವರ ಮೇಲೆ ಕೋಪಗೊಂಡಿದ್ದಾರೆ.

    ಪ್ರಸ್ತುತ ಕ್ರಿಕೆಟ್‌ನಲ್ಲಿ ಅಗ್ರಮಾನ್ಯ ಆಟಗಾರರಾದ ರೋಹಿತ್, ಕೊಹ್ಲಿ, ಬುಮ್ರಾ ಅವರಂತಹ ಆಟಗಾರರನ್ನು ಹೊಂದಿರುವ ತಂಡದ ಮೇಲೆ ಈ ರೀತಿಯ ಟೀಕೆ ಮಾಡುವುದು ಸೂಕ್ತವಲ್ಲ ಎಂದು ಟಿ20ಯಲ್ಲಿ ನಂಬರ್ ಒನ್ ಆಟಗಾರರಾಗಿರುವ ಸೂರ್ಯಕುಮಾರ್ ಯಾದವ್ ಈಗಾಗಲೇ ಹೇಳಿದ್ದಾರೆ.

    ಭಾರತದಂತಹ ಬಲಿಷ್ಠ ತಂಡ ಯಾವ ಆಧಾರದಲ್ಲಿ ಸೆಮಿಫೈನಲ್​ ತಲುಪುವುದಿಲ್ಲ ಎಂದು ಹೇಳುತ್ತೀರಾ? ಅವೈಜ್ಞಾನಿಕ ಭವಿಷ್ಯ ನುಡಿಯುವುದನ್ನು ಬಿಟ್ಟು ನಿಮ್ಮ ತಂಡದ ಕಡೆ ಗಮನ ಕೊಡಿ, ಟೀಮ್ ಇಂಡಿಯಾ ಈ ಬಾರಿ ಕಪ್ ಗೆಲ್ಲುತ್ತದೆ ಎಂದು ಕ್ರೀಡಾಭಿಮಾನಿಗಳು ಸವಾಲು ಹಾಕುತ್ತಿದ್ದಾರೆ.

    ಟೀಮ್​ ಇಂಡಿಯಾ ವಿಶ್ವಕಪ್ ಸೆಮಿಸ್‌ಗೆ ಹೋಗುವುದಿಲ್ಲ ಎಂಬ ಮೈಕಲ್​ ವಾನ್ ಅವರ ಭವಿಷ್ಯವಾಣಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ಗಳ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)

    ಟಿ-20 ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ಕೆ.ಎಲ್. ರಾಹುಲ್​, ಶ್ರೇಯಸ್​ ಅಯ್ಯರ್​ಗೆ ಕೊಕ್

    ರಾಯಲ್ಸ್ ಎದುರು ಮರಳಿ ಉದಯಿಸುವುದೇ ಸನ್?: ಹೈದರಾಬಾದ್‌ನಲ್ಲಿ ಇಂದು ಕಾದಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts