ರಾಯಲ್ಸ್ ಎದುರು ಮರಳಿ ಉದಯಿಸುವುದೇ ಸನ್?: ಹೈದರಾಬಾದ್‌ನಲ್ಲಿ ಇಂದು ಕಾದಾಟ

2 Min Read
ರಾಯಲ್ಸ್ ಎದುರು ಮರಳಿ ಉದಯಿಸುವುದೇ ಸನ್?: ಹೈದರಾಬಾದ್‌ನಲ್ಲಿ ಇಂದು ಕಾದಾಟ

ಹೈದರಾಬಾದ್: ಟೂರ್ನಿಯಲ್ಲಿ ಗರಿಷ್ಠ ಮೊತ್ತ ದಾಖಲಿಸಿದರೂ, ಚೇಸಿಂಗ್‌ನಲ್ಲಿ ಎಡವುತ್ತಿರುವ ಆತಿಥೇಯ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಜಯದ ಹಳಿಗೇರುವ ತವಕದಲ್ಲಿದ್ದು, ಐಪಿಎಲ್-17ರಲ್ಲಿ ಗುರುವಾರ ಆರ್‌ಜಿಐ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಟೇಬಲ್ ಟಾಪರ್ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಸಂಜು ಸ್ಯಾಮ್ಸನ್ ಬಳಗ ಇನ್ನೊಂದು ಗೆಲುವಿನೊಂದಿಗೆ ಪ್ಲೇಆ್ ಸ್ಥಾನ ಅಧಿಕೃತಗೊಳಿಸುವ ಗುರಿ ಹೊಂದಿದೆ.
ಸತತ 4 ಪಂದ್ಯಗಳಲ್ಲಿ ಗೆದ್ದು ಬೀಗುತ್ತಿರುವ ರಾಜಸ್ಥಾನ ರಾಯಲ್ಸ್ ಜಯದ ಓಟ ಕಾಯ್ದುಕೊಳ್ಳುವ ಹಂಬಲದಲ್ಲಿದ್ದು, ಈಗಾಗಲೆ ಪ್ಲೇಆ್ಗೆ ಎಂಟ್ರಿ ಬಹುತೇಕ ಖಾತ್ರಿಪಡಿಸಿಕೊಂಡಿದೆ. ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 8 ಗೆಲುವು, 1ರಲ್ಲಿ ಸೋತು 16 ಅಂಕ ಕಲೆಹಾಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ. ಸತತ 2 ಸೋಲಿನ ಬಳಿಕ ಅಗ್ರ 4ರಿಂದ ಹೊರಬಿದ್ದಿರುವ ಸನ್‌ರೈಸರ್ಸ್‌, ಆಡಿರುವ 9 ಪಂದ್ಯಗಳಲ್ಲಿ 5 ಗೆಲುವು, 4 ಸೋಲಿನೊಂದಿಗೆ 10 ಅಂಕ ಹೊಂದಿದೆ. 2016ರ ಚಾಂಪಿಯನ್ಸ್ ಸನ್‌ರೈಸರ್ಸ್‌ ಪ್ಲೇಆ್ಗೇರಲು ಉಳಿದಿರುವ ತನ್ನ 5 ಲೀಗ್ ಪಂದ್ಯಗಳ ಪೈಕಿ ಕನಿಷ್ಠ 4ರಲ್ಲಿ ಜಯ ದಾಖಲಿಸಬೇಕಿದೆ. ಸನ್‌ರೈಸರ್‌ನ ಬಲಿಷ್ಠ ಬ್ಯಾಟಿಂಗ್ ಹಾಗೂ ರಾಜಸ್ಥಾನದ ವೈವಿಧ್ಯತೆಯ ಬೌಲಿಂಗ್ ವಿಭಾಗದ ನಡುವಿನ ಜಿದ್ದಾಜಿದ್ದಿಗೆ ಈ ಪಂದ್ಯ ಸಾಕ್ಷಿಯಾಗಲಿದೆ.

ಚೇಸಿಂಗ್‌ನಲ್ಲಿ ಎಡವುತ್ತಿರುವ ಎಚ್‌ಆರ್‌ಎಸ್: ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಸನ್‌ರೈಸರ್ಸ್‌ ಹಾಲಿ ಟೂರ್ನಿಯಲ್ಲಿ 3 ಬಾರಿ 250 ಪ್ಲಸ್ ರನ್ ಕಲೆಹಾಕಿದೆ. ಮೊದಲು ಬ್ಯಾಟಿಂಗ್‌ಗೆ ಇಳಿದಾಗ ಅಬ್ಬರಿಸುವ ಬ್ಯಾಟರ್‌ಗಳು ಚೇಸಿಂಗ್‌ನಲ್ಲಿ ಪವರ್ ಕಳೆದುಕೊಂಡಿದ್ದಾರೆ. ಪಂದ್ಯದ 2ನೇ ಇನಿಂಗ್ಸ್‌ನಲ್ಲಿ ಆಲೌಟ್ ಆಗುವುದು ತಂಡಕ್ಕೂ ಹಿನ್ನಡೆ ಎಂದು ಕೋಚ್ ವೆಟ್ಟೋರಿ ತಿಳಿಸಿದ್ದಾರೆ. ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮ ಜೋಡಿ ಅಬ್ಬರಿಸಿದರೆ ಮಾತ್ರ ಸನ್‌ರೈಸರ್ಸ್‌ಗೆ ಗೆಲುವು ಎನ್ನಲಾಗುತ್ತಿದೆ. ಏಡನ್ ಮಾರ್ಕ್ರಮ್ ಸತತ ಅವಕಾಶಗಳ ನಡುವೆಯೂ ವೈಲ್ಯ ಕಂಡಿದ್ದಾರೆ, ಮಧ್ಯಮ ಕ್ರಮಾಂಕದಲ್ಲಿ ಹ್ರೆನಿಕ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ ಹಾಗೂ ಅಬ್ದುಲ್ ಸಮದ್ ಬಲವಿದೆ. ಆದರೆ ರಾಜಸ್ಥಾನ ಬೌಲರ್‌ಗಳ ಎದುರು ನೈಜ ಪರೀಕ್ಷೆ ಎದುರಾಗಲಿದೆ. ಬೌಲಿಂಗ್‌ನಲ್ಲಿ ಕಮ್ಮಿನ್ಸ್ ವಿಕೆಟ್ ಪಡೆಯುತ್ತಿಲ್ಲ. ಹಲವು ವರ್ಷಗಳಿಂದ ಪ್ರಮುಖ ವೇಗಿ ಎನಿಸಿರುವ ಭುವನೇಶ್ವರ್, ಜೈದೇವ್ ಉನಾದ್ಕತ್ ದುಬಾರಿ ಆಗಿದ್ದಾರೆ.

See also  ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ

ಆರ್‌ಆರ್‌ಗೆ ಬ್ಯಾಟಿಂಗ್ ಬಲ: ಟಿ20 ವಿಶ್ವಕಪ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಯಶಸ್ವಿ ಜೈಸ್ವಾಲ್ ಹಾಗೂ ಸಂಜು ಸ್ಯಾಮ್ಸನ್ ಸ್ಥಿರ ಪ್ರದರ್ಶನ ಮುಂದುವರಿಸಬೇಕಿದ್ದು, ಟೂರ್ನಿಗೂ ಮುನ್ನ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕಿದೆ. ಪ್ಲೇಆ್ ಪಂದ್ಯಗಳಿಗೆ ಇಂಗ್ಲೆಂಡ್ ಆಟಗಾರರು ಅಲಭ್ಯರಾಗಲಿದ್ದು, ಜೋಸ್ ಬಟ್ಲರ್ ಸ್ಥಾನ ತುಂಬುವ ಆಟಗಾರರ ಆಯ್ಕೆ ಸವಾಲು ರಾಜಸ್ಥಾನ ಮುಂದಿದೆ. ಯುಜುವೇಂದ್ರ ಚಾಹಲ್ ಕಳೆದ ಪಂದ್ಯದಲ್ಲಿ ವಿಕೆಟ್ ಪಡೆಯುವಲ್ಲಿ ವಿಲರಾಗಿದ್ದು, ಟೀಮ್ ಇಂಡಿಯಾಗೆ ಪುನರಾಗಮನದ ಬಳಿಕ ಒತ್ತಡ ಹೆಚ್ಚಿದೆ. ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮ ವೇಗದ ಬೌಲಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ.

ಮುಖಾಮುಖಿ: 19
ಸನ್‌ರೈಸರ್ಸ್‌: 8
ರಾಜಸ್ಥಾನ: 8
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ.

Share This Article