More

    ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಗೆ ಬಂಪರ್ ಲಾಭ: ಟಾಟಾ ಗ್ರೂಪ್​ ಷೇರು ಖರೀದಿಸಿದರೆ ಲಾಭದಾಯಕವೇ?

    ಮುಂಬೈ: ಮಾರ್ಚ್ ತ್ರೈಮಾಸಿಕದ ಅತ್ಯುತ್ತಮ ಫಲಿತಾಂಶಗಳ ನಂತರ, ಟಾಟಾ ಗ್ರೂಪ್ ಕಂಪನಿ ಟ್ರೆಂಟ್ ಲಿಮಿಟೆಡ್‌ನ ಷೇರುಗಳು ಗಮನ ಸೆಳೆದಿವೆ. ಈ ಸ್ಟಾಕ್‌ ಬೆಲೆಯಲ್ಲಿ ದೇಶೀಯ ಬ್ರೋಕರೇಜ್​ ಸಂಸ್ಥೆಗಳು ಏರುಗತಿಯನ್ನು ಕಾಣುತ್ತಿವೆ. ಬ್ರೋಕರೇಜ್ ಮೋತಿಲಾಲ್ ಓಸ್ವಾಲ್ ಪ್ರಕಾರ, ಈ ಸ್ಟಾಕ್ ರೂ 4800 ಮಟ್ಟವನ್ನು ದಾಟಬಹುದು. ಮಂಗಳವಾರದಂದು ಈ ಷೇರಿನ ಬೆಲೆ ರೂ 4427 ಆಗಿತ್ತು, ಇದು ಹಿಂದಿನ ದಿನಕ್ಕೆ ಹೋಲಿಸಿದರೆ 2.62% ಏರಿಕೆಯಾಗಿತ್ತು.

    ಷೇರು ಮಾರುಕಟ್ಟೆಗೆ ಬುಧವಾರ ರಜೆ ಇದೆ. ಗುರುವಾರ ಷೇರುಪೇಟೆ ಆರಂಭವಾಗಲಿದ್ದು, ಟ್ರೆಂಟ್ ಷೇರುಗಳಲ್ಲಿ ಸಂಚಲನ ಮೂಡುವ ನಿರೀಕ್ಷೆ ಇದೆ.

    ಟ್ರೆಂಟ್ ಲಿಮಿಟೆಡ್‌ನ ನಿವ್ವಳ ಲಾಭವು ಮಾರ್ಚ್ ತ್ರೈಮಾಸಿಕದಲ್ಲಿ 712 ಕೋಟಿ ರೂ. ಆಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 45 ಕೋಟಿ ರೂ. ಲಾಭ ಇತ್ತು. ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ 2,182.75 ಕೋಟಿ ರೂ.ಗೆ ಹೋಲಿಸಿದರೆ ಕಾರ್ಯಾಚರಣೆಗಳ ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡಾ 51 ರಷ್ಟು ಹೆಚ್ಚಾಗಿದೆ. ಈಗ ಆದಾಯ 3,297.70 ಕೋಟಿ ರೂ.ಗೆ ತಲುಪಿದೆ. ಟ್ರೆಂಟ್ ಲಿಮಿಟೆಡ್‌ನ ಮಂಡಳಿಯು ಷೇರುದಾರರಿಗೆ ಪ್ರತಿ ಷೇರಿಗೆ 320% ಅಥವಾ ರೂ 3.20 ರಷ್ಟು ಲಾಭಾಂಶವನ್ನು ಶಿಫಾರಸು ಮಾಡಿದೆ.

    232 ವೆಸ್ಟ್‌ಸೈಡ್, 545 ಜೂಡಿಯೋ ಮತ್ತು ಇತರ ಜೀವನಶೈಲಿಯ ಪರಿಕಲ್ಪನೆಗಳ 34 ಮಳಿಗೆಗಳನ್ನು ಟ್ರೆಂಟ್​ ಕಂಪನಿ ಒಳಗೊಂಡಿದೆ. 2023-24ರಲ್ಲಿ ಹೊಸದಾಗಿ ವೆಸ್ಟ್‌ಸೈಡ್ 18, ಜುಡಿಯೊ 193 ಮತ್ತು ಇತರೆ 10 ಸ್ಟೋರ್‌ಗಳು ಸೇರಿಕೊಂಡಿವೆ.

    ಕಳೆದ ಒಂದು ವರ್ಷದಲ್ಲಿ ಟ್ರೆಂಟ್ ಷೇರುಗಳು ಭಾರಿ ಲಾಭವನ್ನು ಕಂಡಿವೆ. ಷೇರುಗಳ ಬೆಲೆ ಕಳೆದ ವರ್ಷಕ್ಕಿಂತ 218 ರಷ್ಟು ಏರಿಕೆ ಕಂಡಿವೆ.

    ಬ್ರೋಕರೇಜ್​ಗಳು ಹೇಳಿದ್ದೇನು?:

    ಟ್ರೆಂಟ್‌ನ ಬಲವಾದ ಬೆಳವಣಿಗೆಯ ಅಂದಾಜಿನ ದೃಷ್ಟಿಯಿಂದ ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್, ಈ ಷೇರಿನ ಗುರಿ ಬೆಲೆಯನ್ನು ರೂ 4,870ಕ್ಕೆ ನಿಗದಿಪಡಿಸಿದೆ. ಷೇರುಗಳನ್ನು ಖರೀದಿಸಲು ಅದು ಸಲಹೆ ನೀಡಿದೆ.

    ಆದಾಯದ ಬೆಳವಣಿಗೆ, ಬಲವಾದ ಉಪಸ್ಥಿತಿ, ಜೂಡಿಯೊದ ವ್ಯವಹಾರದಲ್ಲಿನ ಸಕಾರಾತ್ಮಕ ಬೆಳವಣಿಗೆಯು ಟ್ರೆಂಟ್ ಷೇರುಗಳ ಬೆಲೆ ಏರಿಕೆಗೆ ಕಾರಣವಾಗುವ ಸಂಕೇತಗಳಾಗಿವೆ ಎಂದು ಅದು ಹೇಳಿದೆ.

    ನುವಾಮಾ ಇನ್‌ಸ್ಟಿಟ್ಯೂಶನಲ್ ಇಕ್ವಿಟೀಸ್ ಬ್ರೋಕರೇಜ್​ ಸಂಸ್ಥೆಯು ಟ್ರೆಂಟ್‌ ಷೇರಿನ ಗುರಿ ಬೆಲೆಯನ್ನು ರೂ 4,926 ಕ್ಕೆ ಹೆಚ್ಚಿಸಿದೆ. ಅದರ ‘ಖರೀದಿ’ ಕರೆಯನ್ನು ಅದು ನೀಡಿದೆ.

    ಬ್ರೋಕರೇಜ್ ಸಂಸ್ಥೆ ಆಂಟಿಕ್ ಸ್ಟಾಕ್ ಬ್ರೋಕಿಂಗ್, ಈ ಹಿಂದಿನ ರೂ. 3,771 ರಿಂದ ಈಗ ರೂ. 4,87ಕ್ಕೆ ಗುರಿ ಬೆಲೆಯನ್ನು ಪರಿಷ್ಕರಿಸಿದೆ. ಅಲ್ಲದೆ, ಈ ಸ್ಟಾಕ್ ಅನ್ನು ‘ಹೋಲ್ಡ್’ ನಿಂದ ‘ಖರೀದಿ’ ಗೆ ಅಪ್‌ಗ್ರೇಡ್ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts