More

    ಬಾಂಗ್ಲಾ ವಿರುದ್ಧ ಅಂತಿಮ ಟಿ20 ಪಂದ್ಯದಲ್ಲೂ ಜಯ: ಹರ್ಮಾನ್‌ಪ್ರೀತ್ ಕೌರ್ ಪಡೆ ಸರಣಿ ಕ್ವೀನ್‌ಸ್ವೀಪ್

    ಸಿಲ್ಲೆಟ್: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ನಿರ್ವಹಣೆ ತೋರಿದ ಭಾರತ ತಂಡ ಮಹಿಳೆಯರ ಟಿ20 ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ಎದುರು 21 ರನ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಹರ್ಮಾನ್‌ಪ್ರೀತ್ ಕೌರ್ ಪಡೆ ಐದು ಪಂದ್ಯಗಳ ಸರಣಿಯಲ್ಲಿ 5-0ಯಿಂದ ಕ್ಲೀನ್‌ಸ್ವೀಪ್ ಸಾಧಿಸಿದೆ.

    ಗುರುವಾರ ನಡೆದ ಔಪಚಾರಿಕ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ, ದಯಾಳನ್ ಹೇಮಲತಾ (37) ಹಾಗೂ ನಾಯಕಿ ಹರ್ಮಾನ್‌ಪ್ರೀತ್ ಕೌರ್ (30) ಮೂರನೇ ವಿಕೆಟ್‌ಗೆ ನಡೆಸಿದ ಜತೆಯಾಟದ ಬಲದಿಂದ 5 ವಿಕೆಟ್‌ಗೆ 156 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ರಿತು ಮೋನಿ (37 ) ಪ್ರತಿರೋಧ ಹೊರತಾಗಿಯೂ ರಾಧಾ ಯಾದವ್ (24ಕ್ಕೆ 3) ಬಿಗಿ ಬೌಲಿಂಗ್ ದಾಳಿಗೆ ನಲುಗಿದ ಬಾಂಗ್ಲಾ 6 ವಿಕೆಟ್‌ಗೆ 135 ರನ್‌ಗಳಿಸಲಷ್ಟೇ ಶಕ್ತವಾಯಿತು.

    ಭಾರತ: 5 ವಿಕೆಟ್‌ಗೆ 156 (ಶೆಾಲಿ ವರ್ಮ 14, ಸ್ಮತಿ ಮಂದನಾ 33, ಡಿ. ಹೇಮಲತಾ 37, ಹರ್ಮಾನ್‌ಪ್ರೀತ್ 30, ರಿಚಾ 28, ಸಜನಾ 1*, ದೀಪ್ತಿ 5*, ನಹಿದಾ 27ಕ್ಕೆ 2, ರಬೇಯಾ 28ಕ್ಕೆ 2). ಬಾಂಗ್ಲಾದೇಶ: 6 ವಿಕೆಟ್‌ಗೆ 135 (ಶೋಭನಾ ಮೊಸ್ತರಿ 13, ರುಬ್ಯಾ ಹೈದರ್ 20, ರಿತು 37, ಶೋರಿಾ 28*, ರಬೆಯಾ 14*, ರಾಧಾ ಯಾದವ್ 24ಕ್ಕೆ 3, ಆಶಾ ಶೋಭನಾ 25ಕ್ಕೆ2). ಪಂದ್ಯಶ್ರೇಷ್ಠ-ಸರಣಿಶ್ರೇಷ್ಠ: ರಾಧಾ ಯಾದವ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts