More

    2047ರ ವೇಳೆಗೆ ಭಾರತ ಅಭಿವೃದ್ಧಿ

    ದಾವಣಗೆರೆ : ದೇಶದ ಯುವಶಕ್ತಿಯಿಂದ ಭಾರತ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶ ಆಗಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ದಾವಣಗೆರೆ ವಿವಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಸಮನ್ವಯಾಧಿಕಾರಿ ಡಾ.ಅಶೋಕ್‌ಕುಮಾರ್ ವಿ. ಪಾಳೇದ್ ಹೇಳಿದರು.
     ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಹಾಗೂ ದಾವಣಗೆರೆ ವಿವಿ ಎನ್‌ಎಸ್‌ಎಸ್ ಸೆಲ್ ಸಹಯೋಗದಲ್ಲಿ ನಗರದ ಎವಿಕೆ ಕಾಲೇಜು ಆವರಣದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 2047ರ ವೇಳೆಗೆ ಭಾರತ ಕುರಿತ ಯುವ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಸ್ವಾತಂತ್ರೃ ದೊರೆತ ಸಂದರ್ಭದಲ್ಲಿ ದೇಶವು ಆಹಾರ ಸೇರಿ ಸಾಮಾಜಿಕ, ಆರ್ಥಿಕ ಮೊದಲಾದ ಸಮಸ್ಯೆಗಳನ್ನು ಎದುರಿಸುತ್ತಿತ್ತು. ತೊಂಬತ್ತರ ದಶಕದ ಜಾಗತೀಕರಣದ ಸಂದರ್ಭದಲ್ಲಿ ಭಾರತದ ವ್ಯವಸ್ಥೆಯಲ್ಲಿ ಬದಲಾಗಿದ್ದು, ಬಹು ದಿನಗಳಿಂದ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದೇ ಕರೆಯಲ್ಪಡುತ್ತಿದೆ ಎಂದು ತಿಳಿಸಿದರು.
     ಪ್ರಸ್ತುತ ಭಾರತ ಎಲ್ಲ  ಕ್ಷೇತ್ರಗಳಲ್ಲೂ ಸದೃಢಗೊಂಡಿದೆ. ದೇಶದಲ್ಲಿ ಆಡಳಿತ ನಡೆಸಿದ ಜವಾಹರ್‌ಲಾಲ್ ನೆಹರೂ ಅವರಿಂದ ಹಿಡಿದು ನರೇಂದ್ರ ಮೋದಿಯವರೆಗೆ ಎಲ್ಲ ಪ್ರಧಾನಿಗಳು ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದು, ಇಡೀ ಜಗತ್ತು ಭಾರತದ ಕಡೆಗೆ ತಿರುಗಿ ನೋಡುತ್ತಿದೆ. ಇದಕ್ಕೆ ದೇಶದ ಯುವಶಕ್ತಿ ಕಾರಣ ಎಂದರು.
     ದೇಶದ ಯುವಜನತೆ ಅಮೆರಿಕಾ, ಬ್ರಿಟನ್ ಸೇರಿ ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ಪ್ರತಿಭೆ ಮೆರೆಯುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ದೇಶದ ಪ್ರಗತಿಗೂ ಅವರು ಕೊಡುಗೆ ನೀಡಬೇಕು. ಯುವಜನರು ಯಾವುದೇ ಬದಲಾವಣೆ ಮಾಡಬಲ್ಲವರಾಗಿದ್ದು, ಸರಿಯಾದ ದಾರಿಯಲ್ಲಿ ಸಾಗಿದಾಗ ಮಾತ್ರ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲು ಸಾಧ್ಯ ಎಂದು ಹೇಳಿದರು.
     ಕಾರ್ಯಕ್ರಮ ಉದ್ಘಾಟಿಸಿದ ದಾವಣಗೆರೆ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಯು.ಎಸ್.ಮಹಾಬಲೇಶ್ವರ್ ಮಾತನಾಡಿ,  ವಿದ್ಯಾರ್ಥಿಗಳು ನಿಖರ ಗುರಿಯೊಂದಿಗೆ ಸತತ ಅಭ್ಯಾಸ ಕೈಗೊಂಡಾಗ ಯಶಸ್ಸು ಗಳಿಸಲು ಸಾಧ್ಯ ಎಂದು ತಿಳಿಸಿದರು.
     ಎವಿಕೆ ಕಾಲೇಜು ಪ್ರಾಚಾರ್ಯೆ ಪ್ರೊ.ಕಮಲಾ ಸೊಪ್ಪಿನ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ನಿವೃತ್ತ ಪ್ರಾಚಾರ್ಯ ಪ್ರೊ.ಎಂ.ಬಸವರಾಜ್, ಪ್ರೊ.ಟಿ.ಆರ್.ರಂಗಸ್ವಾಮಿ, ಕಾಲೇಜಿನ ಐಕ್ಯೂಎಸಿ ಸಂಯೋಜಕ ಆರ್.ಆರ್. ಶಿವಕುಮಾರ್, ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಎಂ.ಆರ್. ಉಷಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts