More

    “ಸುದೀಪ್ ಸಿನಿಮಾದಲ್ಲಿ ಫೈಟ್ಸ್ ಮಧ್ಯೆ ಸ್ಟೋರಿ ಹುಡುಕಬೇಕು”: ವಿಡಿಯೋ ವೈರಲ್

    ಬೆಂಗಳೂರು: ಕನ್ನಡದ ಖ್ಯಾತ ನಟರಾದ ದರ್ಶನ್​ ಮತ್ತು ಸುದೀಪ್​ ಫ್ಯಾನ್​ಳ ನಡುವೆ ಆಗಾಗ ತಮ್ಮ ನೆಚ್ಚಿನ ನಟನೇ ಮೇಲು ಎಂದು ಅಭಿಮಾನಿಗಳು ಮಾಡುವ ವಾದ, ವಿವಾದಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಅದೇ ರೀತಿ ಈಗೊಂದು ತೆಲುಗು ಸಿನಿಮಾದ ಡೈಲಾಗ್​ ಈ ಇಬ್ಬರು ನಟರ ಅಭಿಮಾನಿಗಳ ಮಧ್ಯೆ ಮಾತಿನ ಸಮರಕ್ಕೆ ವೇದಿಕೆಯಾಗಿದೆ.

    ಇದನ್ನೂ ಓದಿ: ಹಷ್ ಮನಿ ಪ್ರಕರಣ: ಟ್ರಂಪ್ ಗೆ 6 ಲಕ್ಷ ದಂಡ ವಿಧಿಸಿದ ಕೋರ್ಟ್

    ಸದ್ಯ ದರ್ಶನ್ ಹಾಗೂ ಸುದೀಪ್ ಸಿನಿಮಾಗಳ ಬಗ್ಗೆ ಚರ್ಚಿಸುವಂತಹ ತೆಲುಗು ಚಿತ್ರದ ಸಣ್ಣ ತುಣುಕು ವೈರಲ್ ಆಗಿದೆ.

    ಇಬ್ಬರು ಯುವತಿಯರು ಆಗಷ್ಟೆ ತೆಲುಗಿನ ‘ಬುಟ್ಟಬೊಮ್ಮ’ ಸಿನಿಮಾ ನೋಡಿ ಆಟೋ ಏರಿ ಅದರಲ್ಲಿನ ಸಂಭಾಷಣೆಯನ್ನು ಚರ್ಚಿಸುವ ವೀಡಿಯೋ ಈ ಇಬ್ಬರು ನಟರ ಅಭಿಮಾನಿಗಳ ಚರ್ಚೆಗೆ ಗ್ರಾಸ ಒದಗಿಸಿದೆ.

    ಸದ್ಯ ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿ ಯೂಟ್ಯೂಬ್‌ನಲ್ಲಿ ರಿಲೀಸ್ ಮಾಡಲಾಗಿದೆ. ‘ಬುಟ್ಟಬೊಮ್ಮ’ ಸಿನಿಮಾ ಹಾಗೂ ಅದರಲ್ಲಿರುವ ಸಂದೇಶದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಆ ಆಟೋ ಸನ್ನಿವೇಶದ ವೀಡಿಯೋವನ್ನು ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.

    ಸುದೀಪ್ ಹಾಗೂ ದರ್ಶನ್ ಅಭಿಮಾನಿ ಯುವತಿರಿಬ್ಬರ ನಡುವಿನ ಸಂಭಾಷಣೆಯ ವಿಡಿಯೋ ಅದು. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಎನ್ನುವುದನ್ನು ನೋಡುವುದಾದರೆ ಒಬ್ಬ ಯುವತಿ, “ಅಬ್ಬಾ ಎಷ್ಟೊಂದು ಫೈಟ್ಸ್ ಇದ್ದಾವೆ. ಅದಕ್ಕೇ ನಾನು ಸುದೀಪ್ ಸಿನಿಮಾಗೇ ಬರಲ್ಲ ಎನ್ನುತ್ತಾಳೆ. ಇದಕ್ಕೆ ಮತ್ತೊಬ್ಬ ಯುವತಿ, ‘ಅಯ್ಯೋ ನಿಮ್ ದರ್ಶನ್ ಸಿನ್ಮಾದಲ್ಲಿ ಫೈಟಿಂಗೇ ಇರಲ್ವೇನೊ’ ಎನ್ನುತ್ತಾಳೆ. ಅದಕ್ಕೆ ಆ ಯುವತಿ, ಇಲ್ಲಾ..ಇಲ್ಲಾ..ಅವರ ಸಿನಿಮಾದಲ್ಲಿ ಸ್ಟೋರಿ ಮಧ್ಯೆ ಫೈಟ್ಸ್ ಇರುತ್ತೆ. ನಿಮ್ ಹೀರೊ ಸಿನಿಮಾದಲ್ಲೇ ಫೈಟ್ಸ್ ಮಧ್ಯೆ ಸ್ಟೋರಿ ಹುಡುಕಬೇಕು” ಎನ್ನುತ್ತಾಳೆ.

    ಇದೆಲ್ಲದರ ನಡುವೆ ಆ ವೀಡಿಯೋದಲ್ಲಿ ಡೈಲಾಗ್ ಅಲ್ಲಿಗೆ ಮುಗಿಯಲ್ಲ. “ಏಯ್ ಹೋಗೆ ನನ್ನ ಹೀರೊ ಡ್ಯಾನ್ಸ್ ನೋಡಿ ಹೊಟ್ಟೆಹುರಿ ನಿನಗೆ” ಎಂದು ಸುದೀಪ್ ಅಭಿಮಾನಿ ಹೇಳುವ ಡೈಲಾಗ್ ಕೂಡ ಇದೆ.

    ಈ ಡೈಲಾಗ್ ವೀಡಿಯೋ ತುಣುಕಿನಲ್ಲಿದೆ. ಇದು ಸಿನಿಮಾವೊಂದರಲ್ಲಿ ಅಭಿಮಾನಿಗಳಿಬ್ಬರ ನಡುವಿನ ಸಂಭಾಷಣೆ ಅಷ್ಟೆ. ಇದನ್ನು ನೋಡಿ ಟ್ರೋಲ್ ಮಾಡುವಂತಹದ್ದು ಏನಿದೆ? ಎಂದು ಕೆಲವರು ಕಾಮೆಂಟ್ಸ್ ಮಾಡುತ್ತಿದ್ದಾರೆ.
    ತೆಲುಗು ಚಿತ್ರವೊಂದರ ಕನ್ನಡ ಡಬ್‌ ವರ್ಷನ್‌ಗೆ ಬರೆದ ಡೈಲಾಗ್ ಇದು ಅಷ್ಟೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದು ಸುದೀಪ್ ಅಭಿಮಾನಿಗಳು ಹೇಳುತ್ತಿದ್ದಾರೆ.

    ದೇವೇಗೌಡರೇ ಪ್ಲಾನ್ ಮಾಡಿ ಪ್ರಜ್ವಲ್ ರೇವಣ್ಣನನ್ನು ವಿದೇಶಕ್ಕೆ ಕಳುಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts