

ನ್ಯೂಯಾರ್ಕ್: 'ಹಷ್ ಮನಿ' ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನ್ಯೂಯಾರ್ಕ್ ನ್ಯಾಯಾಲಯವು 6 ಲಕ್ಷ ರೂ. ದಂಡ ವಿಧಿಸಿದೆ.
ಟ್ರಂಪ್ ಅವರು ನಟಿ ಸ್ಟ್ರಾಮಿ ಡೇನಿಯಲ್ಸ್ಗೆ ಹಣ ಪಾವತಿಸಿದ ಆರೋಪಕ್ಕೆ ಸಂಬಂಧ ಪಟ್ಟಂತೆ 'ಹಷ್ ಮನಿ' ಪ್ರಕರಣದಡಿ ವಿಚಾರಣೆ ಎದುರಿಸುತ್ತಿದ್ದಾರೆ.
ಸ್ಟಾರ್ಮಿಯೊಂದಿಗೆ 2006ರಲ್ಲಿ ಟ್ರಂಪ್ ದೈಹಿಕ ಸಂಬಂಧ ಹೊಂದಿದ್ದರು. ಇದಕ್ಕೆ ಸಂಬಂಧಿಸಿದಂತೆ ಸೊಲ್ಲೆತ್ತದಿರುವಂತೆ ಸ್ಟಾರ್ಮಿಗೆ ಟ್ರಂಪ್ ತಮ್ಮ ವಕೀಲರ ಮೂಲಕ ಹಣ ಪಾವತಿಸಿದ್ದರು ಎಂಬ ಆರೋಪವಿದೆ. ಇದೀಗ ಇದರ ವಿಚಾರಣೆಯು ನಡೆಯುತ್ತಿದೆ.
ಈ ಪ್ರಕರಣ 2016ರ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಮೇಲೆ ಪ್ರಭಾವ ಉಂಟು ಮಾಡಬಹುದು ಎಂಬ ಕಾರಣಕ್ಕೆ ಟ್ರಂಪ್, ನಟಿಗೆ ಹಣ ನೀಡಿದ್ದರು ಎಂದು ಆರೋಪ ಮಾಡಲಾಗಿದೆ.
ಟ್ರಂಪ್ ಪ್ರಾರಂಭದಲ್ಲಿ ಈ ಆರೋಪವನ್ನು ತಳ್ಳಿ ಹಾಕಿದ್ದರು. ಬಳಿಕ ಇದೊಂದು ಸರಳ ಖಾಸಗಿ ವಹಿವಾಟು ಎಂದು ಹೇಳಿಕೆ ನೀಡಿದ್ದರು.