ನವದೆಹಲಿ: ಸಾಮಾನ್ಯವಾಗಿ ನಮ್ಮಲ್ಲಿ ಕೆಲವರು ಹಳದಿ ಹಲ್ಲುಗಳನ್ನು ಹೊಂದಿರುತ್ತಾರೆ. ಆಹಾರ ಪದ್ಧತಿ, ಹಲ್ಲಿನ ಆರೈಕೆಯ ಕೊರತೆ ಹಾಗೂ ಧೂಮಪಾನ ಇತ್ಯಾದಿಗಳಿಂದ ಬಿಳಿ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಅಂತಹ ಹಲ್ಲುಗಳನ್ನು ಹೊಂದಿರುವ ಜನರು ತೀವ್ರ ಮುಜುಗರದಲ್ಲಿ ಸಿಲುಕುತ್ತಾರೆ. ನಾಲ್ಕು ಜನರ ಎದುರು ಆರಾಮವಾಗಿ ಮಾತನಾಡಲು ಮತ್ತು ಮನಸಾರೆ ನಗಲು ಸಹ ಹಿಂಜರಿಯುತ್ತಾರೆ.
ಇತರರು ನಮ್ಮ ಹಲ್ಲುಗಳ ಮೇಲೆ ಕಾಮೆಂಟ್ ಮಾಡುತ್ತಾರೆ ಎಂದು ಆಗಾಗ ಭಯಪಡುತ್ತಾರೆ. ಇದಲ್ಲದೆ, ಈ ಹಳದಿ ಹಲ್ಲುಗಳನ್ನು ತೊಡೆದುಹಾಕುವುದು ದೊಡ್ಡ ಸವಾಲು ಎಂದು ಭಾವಿಸುತ್ತಾರೆ. ಎಷ್ಟೇ ಬಗೆಯ ಟೂತ್ ಪೇಸ್ಟ್ಗಳನ್ನು ಬಳಸಿದರು ಕೂಡ ಹಲ್ಲುಗಳಲ್ಲಿ ಮಾತ್ರ ಯಾವುದೇ ಬದಲಾವಣೆ ಕಾಣುವುದಿಲ್ಲ. ಇದರಿಂದ ಚಿಂತಿತರಾಗುತ್ತಾರೆ.
ನೀವು ಸಹ ಹಳದಿ ಹಲ್ಲುಗಳಿಂದ ಬಳಲುತ್ತಿದ್ದೀರಾ? ಆದರೆ, ಯಾವುದೇ ಕಾರಣಕ್ಕೂ ನೀವು ಚಿಂತಿಸಬೇಡಿ. ಈಗ ನಾವು ಹೇಳುವ ಈ ಸರಳ ಸಲಹೆಯನ್ನು ಅನುಸರಿಸಿದರೆ ಸಾಕು ಹಳದಿ ಹಲ್ಲುಗಳಿಗೆ ಶಾಶ್ವತವಾಗಿ ವಿದಾಯ ಹೇಳಬಹುದು. ವಿಳಂಬ ಮಾಡದೆ ಆ ಸರಳ ಸಲಹೆ ಯಾವುದೆಂದು ತಿಳಿದುಕೊಳ್ಳೋಣ.
ಮೊದಲು ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಒಂದು ಚಮಚ ಅಕ್ಕಿ ಹಿಟ್ಟನ್ನು ಹಾಕಿ. ಅದಕ್ಕೆ ಎರಡು ಚಮಚ ನಿಂಬೆ ರಸ, ಒಂದು ಚಮಚ ಆಲಿವ್ ಎಣ್ಣೆ ಮತ್ತು ಒಂದು ಚಮಚ ಬಿಳಿ ಟೂತ್ ಪೇಸ್ಟ್ ಅನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈಗ ಆ ಮಿಶ್ರಣವನ್ನು ಬಳಸಿ ಎರಡರಿಂದ ಮೂರು ನಿಮಿಷಗಳ ಕಾಲ ಬ್ರಶ್ ಮಾಡಿ. ನಂತರ ಹಲ್ಲು ಮತ್ತು ಬಾಯಿಯನ್ನು ನೀರಿನಿಂದ ಸ್ವಚ್ಛಗೊಳಿಸಿ. ಈ ಸರಳ ಸಲಹೆಯನ್ನು ನೀವು ನಿಯಮಿತವಾಗಿ ಅನುಸರಿಸಿದರೆ, ಹಲ್ಲುಗಳ ಮೇಲೆ ಸಂಗ್ರಹವಾದ ಹಳದಿ ಕಲೆಗಳು ಕ್ರಮೇಣವಾಗಿ ಮಾಯವಾಗುತ್ತವೆ.
ಈ ಟಿಪ್ಸ್ ಫಾಲೋ ಮಾಡಿದರೆ, ನಿಮ್ಮ ಹಲ್ಲುಗಳು ಬಿಳಿ ಮತ್ತು ಪ್ರಕಾಶಮಾನವಾಗಿ ಹೊಳೆಯುತ್ತವೆ. ಹಾಗಾಗಿ ಹಳದಿ ಹಲ್ಲುಗಳಿಗೆ ವಿದಾಯ ಹೇಳಲು ಬಯಸುವವರು ಈ ಮನೆಮದ್ದುಗಳನ್ನು ಅನುಸರಿಸಲೇಬೇಕು. (ಏಜೆನ್ಸೀಸ್)
ಮದುವೆ ಸಂಭ್ರಮಕ್ಕೆಂದು ಬಂದು ಸಾವಿಗೆ ಶರಣಾದ ನಟಿ: ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿತ್ತು ನಿಗೂಢ ಬರಹ!
ಎಷ್ಟು ಬಾರಿ ಸರಸವಾಡಿದ್ದೀರಿ ಎಂದು ಕೇಳಿದ ನೆಟ್ಟಿಗನಿಗೆ ಖಡಕ್ ಉತ್ತರ ನೀಡಿದ ಖ್ಯಾತ ಯೂಟ್ಯೂಬರ್!