More

    ಅನಿಲ್​ ಅಂಬಾನಿ ಕಂಪನಿ ಷೇರು 2,641 ರಿಂದ 193 ರೂಪಾಯಿಗೆ: 40 ಲಕ್ಷ ಷೇರು ಖರೀದಿಸಿದ ‘ಮಾರ್ಕೆಟ್​ ಮಾಸ್ಟರ್’ ಕೇಡಿಯಾ

    ಮುಂಬೈ: ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಕಂಪನಿಯ ಷೇರುಗಳ ಬೆಲೆ ಕಳೆದ 4 ವರ್ಷಗಳಲ್ಲಿ ತ್ವರಿತ ಏರಿಕೆ ಕಂಡಿದೆ. ಕಳೆದ 4 ವರ್ಷಗಳಲ್ಲಿ ರಿಲಯನ್ಸ್ ಇನ್ಫ್ರಾ ಷೇರುಗಳ ಬೆಲೆ 9 ರಿಂದ 193 ರೂಪಾಯಿಗೆ ಏರಿಕೆಯಾಗಿದೆ. ಕಳೆದ 4 ವರ್ಷಗಳಲ್ಲಿ ರಿಲಯನ್ಸ್ ಇನ್ಫ್ರಾ ಷೇರುಗಳು 2000% ಏರಿಕೆ ಕಂಡಿವೆ. ಹಿರಿಯ ಹೂಡಿಕೆದಾರ ವಿಜಯ್ ರಿಲಯನ್ಸ್ ಕೇಡಿಯಾ ಅವರು ಈ ಷೇರುಗಳಲ್ಲಿ ದೊಡ್ಡ ಬೆಟ್​ ಮಾಡಿದ್ದಾರೆ.

    ರಿಲಯನ್ಸ್ ಇನ್ಫ್ರಾ ಷೇರುಗಳ 52 ವಾರಗಳ ಗರಿಷ್ಠ ಬೆಲೆ 308 ರೂ. ಹಾಗೂ ಕನಿಷ್ಠ ಬೆಲೆ 131.40 ರೂ. ಇದೆ.

    ಕಳೆದ 4 ವರ್ಷಗಳಲ್ಲಿ ರಿಲಯನ್ಸ್ ಇನ್ಫ್ರಾ ಷೇರುಗಳಲ್ಲಿ ಭಾರಿ ಏರಿಕೆಯಾಗಿದೆ. ರಿಲಯನ್ಸ್ ಇನ್ಫ್ರಾ ಷೇರುಗಳ ಬೆಲೆ ಮಾರ್ಚ್ 27, 2020 ರಂದು 9.20 ರೂ. ಇತ್ತು. ಏಪ್ರಿಲ್ 23, 2024 ರಂದು 192.95 ರೂ. ಮುಟ್ಟಿದೆ. ಕಳೆದ 4 ವರ್ಷಗಳಲ್ಲಿ ರಿಲಯನ್ಸ್ ಇನ್ಫ್ರಾ ಷೇರುಗಳ ಬೆಲೆ 2000% ಏರಿಕೆಯಾಗಿದೆ. 27 ಮಾರ್ಚ್ 2020 ರಂದು ಈ ಷೇರುಗಳಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿ ಈಗಲೂ ಹೂಡಿಕೆಯನ್ನು ಉಳಿಸಿಕೊಂಡಿದ್ದರೆ, ಈ ಷೇರುಗಳ ಪ್ರಸ್ತುತ ಮೌಲ್ಯ 21 ಲಕ್ಷ ರೂಪಾಯಿ ಆಗುತ್ತಿತ್ತು. ಕಳೆದ ಒಂದು ವರ್ಷದಲ್ಲಿ ರಿಲಯನ್ಸ್ ಇನ್ಫ್ರಾ ಷೇರುಗಳ ಬೆಲೆ ಶೇ. 23ರಷ್ಟು ಏರಿಕೆ ಕಂಡಿದೆ. ಈ ಷೇರುಗಳ ಸಾರ್ವಕಾಲಿಕ ಗರಿಷ್ಠ ಬೆಲೆ ರೂ. 2,641 ಹಾಗೂ ಕನಿಷ್ಠ ಬೆಲೆ ರೂ. 8.65 ಆಗಿದೆ.

    ವಿಜಯ್ ಕೇಡಿಯಾ ಅವರು ಈ ಕಂಪನಿಯ 40 ಲಕ್ಷ ಷೇರುಗಳನ್ನು ಖರೀದಿಸಿದ್ದಾರೆ. ಮಾರ್ಚ್ 2024 ರ ತ್ರೈಮಾಸಿಕದಲ್ಲಿ ರಿಲಯನ್ಸ್ ಇನ್ಫ್ರಾ ಷೇರುದಾರರ ಮಾಹಿತಿಯ ಪ್ರಕಾರ, ವಿಜಯ್ ಕೇಡಿಯಾ ಅವರು ರಿಲಯನ್ಸ್ ಇನ್ಫ್ರಾದಲ್ಲಿ 40 ಲಕ್ಷ ಷೇರುಗಳನ್ನು ಹೊಂದಿದ್ದಾರೆ ಅಥವಾ ಕಂಪನಿಯಲ್ಲಿ 1.01% ಪಾಲನ್ನು ಹೊಂದಿದ್ದಾರೆ. ವಿಜಯ್ ಕೇಡಿಯಾ ಅವರು ತಮ್ಮ ಕಂಪನಿ ಕೇಡಿಯಾ ಸೆಕ್ಯುರಿಟೀಸ್ ಮೂಲಕ ರಿಲಯನ್ಸ್ ಇನ್ಫ್ರಾದಲ್ಲಿ ಈ ಹೂಡಿಕೆ ಮಾಡಿದ್ದಾರೆ. ವಿಜಯ್ ಕೇಡಿಯಾ ಅವರು ಮಾರ್ಚ್ 2024 ತ್ರೈಮಾಸಿಕದಲ್ಲಿ ರಿಲಯನ್ಸ್ ಇನ್ಫ್ರಾದಲ್ಲಿ ಹೂಡಿಕೆ ಮಾಡಿದ್ದಾರೆ. ಏಕೆಂದರೆ ಡಿಸೆಂಬರ್ 2023 ತ್ರೈಮಾಸಿಕದಲ್ಲಿ ಅವರ ಹೆಸರು ಹೂಡಿಕೆದಾರರ ಪಟ್ಟಿಯಲ್ಲಿ ಇರಲಿಲ್ಲ. ರಿಲಯನ್ಸ್ ಇನ್‌ಫ್ರಾ ಮೇಲೆ ಕೆಡಿಯಾ ಬಾಜಿ ಕಟ್ಟಿದ್ದಾರೆ. ಅದೇ ಸಮಯದಲ್ಲಿ, ಸರ್ಕಾರಿ ವಿಮಾ ಕಂಪನಿ ಎಲ್ಐಸಿ ರಿಲಯನ್ಸ್ ಇನ್ಫ್ರಾದಲ್ಲಿನ ತನ್ನ ಪಾಲನ್ನು ಮಾರಾಟ ಮಾಡಿದೆ.

    ಕೇಡಿಯಾ ಅವರು 19 ನೇ ವಯಸ್ಸಿನಿಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರನ್ನು ಅನೇಕರು ‘ಮಾರುಕಟ್ಟೆ ಮಾಸ್ಟರ್’ ಎಂದು ಬಣ್ಣಿಸಿದ್ದಾರೆ.

    ಅವರು 1992-93 ರಲ್ಲಿ ರೂ 300 ಬೆಲೆಯಲ್ಲಿ ಎಸಿಸಿ ಷೇರು ಖರೀದಿಸಿದರು ಮತ್ತು ಒಂದೂವರೆ ವರ್ಷದೊಳಗೆ ಅಂದಾಜು ರೂ 3,000 ಬೆಲೆಗೆ ಮಾರಾಟ ಮಾಡಿದರು. 2004 ಮತ್ತು 2005 ವರ್ಷಗಳಲ್ಲಿ, ಅವರು ಮುಂದಿನ 10-12 ವರ್ಷಗಳಲ್ಲಿ 1,000% ಕ್ಕಿಂತ ಹೆಚ್ಚಿನ ಆದಾಯವನ್ನು ನೀಡಿದ ಹಲವಾರು ಮಲ್ಟಿಬ್ಯಾಗರ್ ಸ್ಟಾಕ್‌ಗಳನ್ನು ಆಯ್ಕೆ ಮಾಡಿದರು. ಈ ಷೇರುಗಳಲ್ಲಿ ಕೆಲವು ಅತುಲ್ ಆಟೋ, ಏಜಿಸ್ ಲಾಜಿಸ್ಟಿಕ್ಸ್ ಮತ್ತು ಸೆರಾ ಸ್ಯಾನಿಟರಿ.

     

    ಟಾಟಾ ಗ್ರೂಪ್​ನ ಟೆಲಿಕಾಂ ಕಂಪನಿ ಷೇರು ಬೆಲೆ ಒಂದೇ ದಿನದಲ್ಲಿ 20% ಏರಿಕೆ: ಇನ್ನಷ್ಟು ಏರಲಿದೆ ಎನ್ನುತ್ತದೆ ಬ್ರೋಕರೇಜ್​ ಸಂಸ್ಥೆ

    ಸಾಲ ತೀರಿಸಲು ಗಮನ ನೀಡುತ್ತಿದೆ ಕಂಪನಿ: ಅದಾನಿ ಸಮೂಹದ ಷೇರು ಬೆಲೆ ರೂ. 1500 ದಾಟಬಹುದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts