More

    3 ವರ್ಷಗಳಲ್ಲಿ ರೂ. 15 ರಿಂದ 1900ಕ್ಕೆ ಏರಿದ ಷೇರು ಬೆಲೆ: ಸೋಲಾರ್ ಕಂಪನಿ ಸ್ಟಾಕ್​ ಬೆಲೆ ಸಾರ್ವಕಾಲಿಕ ಗರಿಷ್ಠ

    ಮುಂಬೈ: ಕೆಪಿಐ ಗ್ರೀನ್ ಎನರ್ಜಿ ಷೇರುಗಳ ಬೆಲೆ ಕಳೆದ 3 ವರ್ಷಗಳಲ್ಲಿ ಅದ್ಭುತ ಏರಿಕೆ ಕಂಡಿದೆ. ಕಂಪನಿಯ ಷೇರುಗಳ ಬೆಲೆ ಏಪ್ರಿಲ್ 22, 2021 ರಂದು 15.37 ರೂ. ಇತ್ತು. ಈಗ 23 ಏಪ್ರಿಲ್ 2024 ರಂದು ರೂ 1913.20 ತಲುಪಿದೆ. ಮಲ್ಟಿಬ್ಯಾಗರ್ ಕಂಪನಿಯ ಷೇರುಗಳು ಕಳೆದ 3 ವರ್ಷಗಳಲ್ಲಿ ಹೂಡಿಕೆದಾರರಿಗೆ 12,347% ನಷ್ಟು ಬಲವಾದ ಆದಾಯವನ್ನು ನೀಡಿವೆ. 3 ವರ್ಷಗಳ ಹಿಂದೆ ಈ ಷೇರುಗಳಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿ ಈಗಲೂ ಮುಂದುವರಿಸಿದ್ದರೆ, ಈ ಷೇರುಗಳ ಮೊತ್ತ 1.23 ಕೋಟಿ ರೂಪಾಯಿ ಆಗುತ್ತಿತ್ತು.

    ಈ ಷೇರುಗಳ ಬೆಲೆ ಕಳೆದ ಒಂದು ವರ್ಷದಲ್ಲಿ 497% ರಷ್ಟು ಹೆಚ್ಚಾಗಿದೆ. ಕಂಪನಿಯ ಷೇರುಗಳು ಏಪ್ರಿಲ್ 24, 2023 ರಂದು 320.53 ರೂ. ಇತ್ತು. ಈ ಷೇರುಗಳ ಬೆಲೆ ಈ ವರ್ಷ ಇಲ್ಲಿಯವರೆಗೆ 100% ಹೆಚ್ಚಾಗಿದೆ. ಕಂಪನಿಯ ಷೇರುಗಳ ಬೆಲೆ ಜನವರಿ 1, 2024 ರಂದು ರೂ 952.57 ರಷ್ಟಿತ್ತು,

    ಕೆಪಿಐ ಗ್ರೀನ್ ಎನರ್ಜಿ ತನ್ನ ಹೂಡಿಕೆದಾರರಿಗೆ ಎರಡು ವರ್ಷಗಳೊಳಗೆ ಬೋನಸ್ ಷೇರುಗಳನ್ನು ಎರಡು ಬಾರಿ ಉಡುಗೊರೆಯಾಗಿ ನೀಡಿದೆ. ಸೋಲಾರ್ ಕಂಪನಿ ಜನವರಿ 2023 ಬೋನಸ್ ಷೇರುಗಳನ್ನು 1:1 ಅನುಪಾತದಲ್ಲಿ ನೀಡಿದೆ. ಅಂದರೆ, ಕಂಪನಿಯು ಪ್ರತಿ ಷೇರಿಗೆ 1 ಬೋನಸ್ ಷೇರನ್ನು ನೀಡಿದೆ. ಇದರ ನಂತರ, ಕಂಪನಿಯು ಫೆಬ್ರವರಿ 2024 ರಲ್ಲಿ 1:2 ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡಿದೆ. ಈ ಬಾರಿ ಕಂಪನಿಯು ಪ್ರತಿ 2 ಷೇರುಗಳಿಗೆ 1 ಬೋನಸ್ ಷೇರು ನೀಡಿದೆ. ಈ ಕಂಪನಿಯ ಐಪಿಒ ಜನವರಿ 2019 ರಲ್ಲಿ 80 ರೂಪಾಯಿಗೆ ಬಂದಿತ್ತು.

    ಅನಿಲ್​ ಅಂಬಾನಿ ಕಂಪನಿ ಷೇರು 2,641 ರಿಂದ 193 ರೂಪಾಯಿಗೆ: 40 ಲಕ್ಷ ಷೇರು ಖರೀದಿಸಿದ ‘ಮಾರ್ಕೆಟ್​ ಮಾಸ್ಟರ್’ ಕೇಡಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts