More

    ಇದು ಸಸಿಗಳ ಗಿಫ್ಟ್ ಜಮಾನಾ; ಪರಿಸರಕ್ಕೆ ನಮ್ಮದೊಂದು ಉಡುಗೊರೆ!

    ಬೆಂಗಳೂರು: ಶುಭ ಸಮಾರಂಭಗಳಲ್ಲಿ ಉಡುಗೊರೆ ಕೊಡುವ ಸಂಪ್ರದಾಯ ತಲೆತಲಾಂತರದಿಂದಲೂ ನಡೆದುಕೊಂಡು ಬಂದಿದೆ. ಒಂದು ಕಾಲದಲ್ಲಿ ತಟ್ಟೆ, ಲೋಟ, ಲಟ್ಟಣಿಗೆ, ಮಂಚ, ಸೌಟು ಹೀಗೆ ನವ ವಧು&ವರರಿಗೆಗೆ ಹೊಸ ಜೀವನ ಆರಂಭಿಸಲು ಅಗತ್ಯವಿರುವ ಗೃಹೋಪಯೋಗಿ ವಸ್ತುಗಳನ್ನು ನೀಡಲಾಗುತ್ತಿತ್ತು. ಕಾಲಾನಂತರ ಶೋಕೇಸ್​ನಲ್ಲಿ ಇಡಬಹುದಾದ ಉಡುಗೊರೆಗಳಿಗೆ ಆದ್ಯತೆ ಲಭಿಸಿತು. ನಾಗರಿಕರ ಪರಿಸರ ಕಾಳಜಿ ಹೆಚ್ಚಾಗುತ್ತಿದ್ದಂತೆ ಈಗ ಸಸಿಗಳನ್ನು ಉಡುಗೂರೆಯಾಗಿ ನೀಡಲಾಗುತ್ತಿದೆ.

    ಮದುವೆ, ಹುಟ್ಟುಹಬ್ಬ, ನಾಮಕರಣ ಮತ್ತಿತರ ಸಮಾರಂಭಗಳಲ್ಲಿ ಅತಿಥಿಗಳು ಉಡುಗೊರೆಯಾಗಿ ಸಸಿಗಳನ್ನು ನೀಡುವ ಸಂಪ್ರದಾಯ ಪಾಶ್ಚಾತ್ಯ ದೇಶಗಳಲ್ಲಿ ಕಂಡುಬರುತ್ತಿತ್ತು. ಅದೀಗ ನಮ್ಮ ದೇಶದಲ್ಲೂ ಹೆಚ್ಚಾಗಿ ಕಂಡುಬರುತ್ತಿದೆ. ವಿವಿಧ ತಳಿಯ ಸಸಿಗಳನ್ನು ಆಯ್ಕೆ ಮಾಡಿ ಅದಕ್ಕೆ ಚೆಂದದ ಹೊರ ವಿನ್ಯಾಸ ಮಾಡಿ, ಉಡುಗೊರೆ ನೀಡುವುದು ಫ್ಯಾಷನ್​ ಆಗುತ್ತಿದೆ. ಪರಿಸರ ಕಾಳಜಿ ನಿಟ್ಟಿನಲ್ಲಿ ಇಂತಹ ಉಡುಗೊರೆ ಪಡೆಯುವವರ ಹಾಗೂ ನೀಡುವವರ ನತೆ ಹೆಚ್ಚಿಸುತ್ತಿದೆ.

    ಈ ಬಗೆಯ ಗಿಫ್ಟ್​ಗಳು ಸಾಮಾನ್ಯವಾಗಿ ತರಕಾರಿ, ಸಾಸಿವೆ, ಶುಂಠಿ ಮತ್ತಿತರ ಸಸಿಗಳಿಗೆ ಸೀಮಿತವಾಗಿತ್ತು. ಈಗ ಸ್ನೇಹಿತರ ದಿನ, ಪ್ರೇಮಿಗಳ ದಿನ, ಸ್ವಾತಂತ್ರ್ಯ ದಿನಾಚರಣೆ ಹೀಗೆ ಎಲ್ಲ ಸುಸಂದರ್ಭಗಳಿಗೂ ಲಗ್ಗೆಯಿಟ್ಟಿವೆ. ಸ್ನೇಹಿತರ ದಿನದಂದು ನೆಚ್ಚಿನವರಿಗೆ ಯಾವ ಸಸಿ ನೀಡಿದರೆ ಚೆಂದ ಎಂಬೆಲ್ಲ ಚಿಂತನೆಗಳೊಂದಿಗೆ ಉಡುಗೊರೆ ಖರೀದಿ ನಡೆಯುತ್ತದೆ. ಇತ್ತೀಚೆಗೆ ರಾಜಕೀಯ ಸಭೆ ಸಮಾರಂಭಗಳಲ್ಲೂ ಗಣ್ಯರಿಗೆ ಸಸಿಗಳನ್ನು ನೀಡಿ ಗೌರವಿಸುವ ಪರಿಪಾಠ ಕಂಡುಬರುತ್ತಿದೆ.

    ಅತಿಥಿಗಳಲ್ಲಿ ಪ್ರಭಾವ

    ಉಡುಗೊರೆಯಾಗಿ ನಾವು ಬೇರೆಯವರಿಗೆ ನೀಡುವ ಹಾಗೂ ಬೇರೆಯವರಿಂದ ನಮಗೆ ಬರುವ ಸಸಿ ಉಡುಗೊರೆಗಳನ್ನು ಮನೆ ಆವರಣದಲ್ಲಿನ ಪುಟ್ಟ ಗಾರ್ಡನ್​ನಲ್ಲಿ, ವಿವಿಧ ಕೋಣೆಗಳಲ್ಲಿ, ಬಾಲ್ಕನಿಯಲ್ಲಿ ಪ್ರೀತಿಯಿಂದ ಪೋಷಿಸುವಾಗ ಲಭಿಸುವ ಖುಷಿ ವರ್ಣನಾತೀತ. ಸಸಿಗಳು ಹೂ ಬಿಡುವಾಗ, ಚೆನ್ನಾಗಿ ಬೆಳೆದು ತರಕಾರಿ/ ಹಣ್ಣು ನೀಡುವಾಗ ಏನೋ ಹಿಗ್ಗು. ಈ ರೀತಿ ಪರಿಸರಸ್ನೇಹಿ ಮನೆಗೆ ಆಗಮಿಸುವ ಅತಿಥಿಗಳು ತಾವೂ ತಮ್ಮ ಮನೆಯಲ್ಲಿ ಅದನ್ನು ಅನುಸರಿಸುತ್ತಾರೆ. ನಾವು ಬೆಳೆದ ಗಿಡವೊಂದು ಮರವಾದ ಬಳಿಕ ಬೇಸಿಗೆಯಲ್ಲಿ ಅದರ ನೆರಳಲ್ಲಿ ಕುಳಿತುಕೊಳ್ಳುವಾಗ ಸಿಗುವ ಆನಂದಕ್ಕೆ ಬೆಲೆ ಕಟ್ಟಲಾಗದು.

    ಪ್ಲಾಸ್ಟಿಕ್​ ಉಡುಗೊರೆಗಳಿಗೆ ಇತಿಶ್ರೀ

    ಸ್ವಾತಂತ್ರ್ಯ ದಿನಾಚರಣೆ, ಮಕ್ಕಳ ದಿನಾಚರಣೆಯಂಥ ವಿಶೇಷ ದಿನಗಳಲ್ಲಿ ಶಾಲೆ ಆವರಣದಲ್ಲಿ ಸಾಮೂಹಿಕವಾಗಿ ಸಸಿಗಳನ್ನು ನೆಡುವುದರ ಜತೆಗೆ ಅವುಗಳಿಗೆ ಸ್ವಾತಂತ್ರ$್ಯ ಹೋರಾಟಗಾರರ, ವಿಶೇಷ ವ್ಯಕ್ತಿಗಳ ಹೆಸರನ್ನು ನಾಮಕರಣ ಮಾಡಿ ವಿಶೇಷ ಕಾಳಜಿವಹಿಸಿ ಜೋಪಾನ ಮಾಡುವುದು ಇಂದಿನ ಟ್ರೆಂಡ್​. ಇದಕ್ಕೆ ಹಲವು ಪರಿಸರಪ್ರೇಮಿಗಳು, ಸಂ&ಸಂಸ್ಥೆಗಳು ನೀಡುತ್ತಿರುವ ಸಹಕಾರದಿಂದ ಜನಜಾಗೃತಿ ಮೂಡುತ್ತಿದೆ. ಮನೆಯಲ್ಲಿ ಮಕ್ಕಳಿಗೆ ಗಿಡಗಳ ಪೋಷಣೆಯ ಹೊಣೆ ನೀಡುವ ಮೂಲಕ ಪರಿಸರಸ್ನೇಹಿ ತಲೆಮಾರನ್ನು ಪೋಷಿಸಿದಂತೆಯೂ ಆಗುತ್ತದೆ. ಈ ಬಗೆಯ ಧೋರಣೆಯಿಂದ ಪ್ಲಾಸ್ಟಿಕ್​ನಿಂದ ನಿರ್ಮಿಸಿದ ಉಡುಗೊರೆಗಳಿಗೆ ಇತಿಶ್ರೀ ಹಾಡಿದಂತಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts