More

  ನಿಟ್ಟೆ ವಿವಿ ಪ್ರಯೋಗಾಲಯ ಉದ್ಘಾಟನೆ

  ಶಿರ್ವ: ವಿದ್ಯಾವರ್ಧಕ ಕ್ಯಾಂಪಸ್‌ನಲ್ಲಿ ನಿಟ್ಟೆ ವಿಶ್ವವಿದ್ಯಾಲಯ ವತಿಯಿಂದ ಸ್ಥಾಪಿಸಲ್ಪಟ್ಟ ಜಸ್ಟೀಸ್ ಕೆ.ಎಸ್.ಹೆಗ್ಡೆ ಗ್ರಾಮೀಣ ಆರೋಗ್ಯ ಕೇಂದ್ರದಲ್ಲಿ ಆಧುನಿಕ ಉಪಕರಣಗಳನ್ನೊಳಗೊಂಡ ನೂತನ ಪ್ರಯೋಗಾಲಯವನ್ನು ನಿಟ್ಟೆ ವಿವಿ ಉಪಾಧ್ಯಕ್ಷ ಪ್ರೊ.ಡಾ.ಸತೀಶ್ ಕುಮಾರ್ ಭಂಡಾರಿ ಶುಕ್ರವಾರ ಉದ್ಘಾಟಿಸಿದರು.
  7 ಲಕ್ಷ ರೂ. ವೆಚ್ಚದಲ್ಲಿ ಸ್ಥಾಪಿಸಲ್ಪಟ್ಟ ಈ ಪ್ರಯೋಗಾಲಯದಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ಹಿಮೋಗ್ಲೋಬಿನ್, ರಕ್ತ ವರ್ಗೀಕರಣ, ಮಲೇರಿಯಾ, ಡೆಂೆ, ರಕ್ತ ಪರೀಕ್ಷೆ, ಯಕೃತ್ತು ಮತ್ತು ಮೂತ್ರಪಿಂಡದ ಕಾರ್ಯನಿರ್ವಹಣೆಗೆ ಸಂಬಂಧಪಟ್ಟ ಪರೀಕ್ಷೆ ಮಾಡಲಾಗುವುದು ಎಂದು ಪ್ರೊ.ಡಾ.ಸತೀಶ್ ಕುಮಾರ್ ಭಂಡಾರಿ ಹೇಳಿದರು.

  ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ, ಕ್ಷೇಮಾ ಗ್ರಾಮೀಣ ಆರೋಗ್ಯ ಕೇಂದ್ರಗಳ ಸಂಯೋಜಕ ಮೇಜರ್ ಡಾ.ರಾಘವೇಂದ್ರ ಹುಚ್ಚಣ್ಣವರ, ಕಚೇರಿ ಸಿಬ್ಬಂದಿ ಸುನೀಲ್ ಮಾನೈ, ಶಿರ್ವ ಗ್ರಾಮೀಣ ಕೇಂದ್ರದ ವೈದ್ಯಾಧಿಕಾರಿ ಡಾ.ಸಜ್ಞಾ ಶೆಟ್ಟಿ, ದಂತ ವೈದ್ಯಾಧಿಕಾರಿ ಡಾ.ನಿವೇದಿತಾ ಮೂರ್ತಿ, ಲ್ಯಾಬ್ ಟೆಕ್ನೀಷಿಯನ್ ಅನೆಟ್ ಜೂಲಿಯೆಟ್ ಬರ್ಬೋಜ, ಸಿಬ್ಬಂದಿ ನಾಗಲಕ್ಷ್ಮೀ, ದಿವ್ಯಾ, ಜ್ಯೋತಿಲಕ್ಷ್ಮೀ ಉಪಸ್ಥಿತರಿದ್ದರು.

  ನಿಟ್ಟೆ ವಿವಿ ವತಿಯಿಂದ 2 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲ್ಪಟ್ಟ ಜಸ್ಟೀಸ್ ಕೆ.ಎಸ್.ಹೆಗ್ಡೆ ಗ್ರಾಮೀಣ ಆರೋಗ್ಯ ಕೇಂದ್ರದಲ್ಲಿ ಉಚಿತ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಚಿಕಿತ್ಸೆಯೊಂದಿಗೆ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಔಷಧಗಳನ್ನು ಉಚಿತವಾಗಿ ಒದಗಿಸಲಾತ್ತಿದ್ದು, ಶಿರ್ವ ಮತ್ತು ಆಸುಪಾಸಿನ ಬಡರೋಗಿಗಳಿಗೆ ಪ್ರಯೋಜನವಾಗುತ್ತಿದೆ.
  -ಪ್ರೊ.ವೈ.ಭಾಸ್ಕರ ಶೆಟ್ಟಿ, ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts