More

  ನಟಿ ರಾಖಿ ಸಾವಂತ್​ ಗರ್ಭಕೋಶದಿಂದ ತೆಗೆದ ಗಡ್ಡೆಯನ್ನು ತೋರಿಸಿದ ಮಾಜಿ ಪತಿ ರಿತೇಶ್​

  ಮುಂಬೈ: ಬಾಲಿವುಡ್​​ ನಟಿ ರಾಖಿ ಸಾವಂತ್​ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ವಿಚಾರ ಗೊತ್ತಿದೆ. ನಟಿಗೆ ಈಗ ಶಸ್ತ್ರಚಿಕಿತ್ಸೆ ನಡೆದಿದ್ದು, ನಟಿ ಆರೋಗ್ಯವಾಗಿದ್ದಾರಂತೆ. ಈ ಕುರಿತಾಗಿ ಆಕೆಯ ಮಾಜಿ ಪತಿ ರಿತೇಶ್ ರಾಜ್ ಸಿಂಗ್ ಈ ಕುರಿತಾಗಿ ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ.

  ಕೊನೆಗೂ ಬಾಲಿವುಡ್​ ನಟಿ ರಾಖಿ ಸಾವಂತ್​ ಆಪರೇಷನ್​ ಮುಗಿದಿದೆ. ನಟಿ ಏಕಾಏಕಿ ಆಸ್ಪತ್ರೆಗೆ ಅಡ್ಮಿಟ್​ ಆಗಿದ್ದರಿಂದ ಇದು ಕೂಡ ಡ್ರಾಮಾ ಎಂದೇ ಮಾತನಾಡಿಕೊಂಡಿದ್ದರು. ಹೀಗೆ ಮಾತನಾಡುವವರ ಬಾಯಿ ಮುಚ್ಚಿಸಿದ್ದಾರೆ ಮೊದಲ ಮಾಜಿ ಪತಿ ರಿತೇಶ್ ರಾಜ್ ಸಿಂಗ್. ದಿಢೀರ್​ ಎಂದು ಆಸ್ಪತ್ರೆಗೆ ದಾಖಲಾಗಿದ್ದರಿಂದ ಸೋಷಿಯಲ್​ ಮೀಡಿಯಾಗಳಲ್ಲಿ ನಟಿಯನ್ನು ಟ್ರೋಲ್​ ಮಾಡಿದವರೇ ಹೆಚ್ಚು.

  ಮಾಜಿ ಪತಿ ರಿತೇಶ್​, ಮೂರು ಗಂಟೆ ಶಸ್ತ್ರ ಚಿಕಿತ್ಸೆ ನಡೆಯಿತು. ರಾಖಿಗೆ ಇನ್ನೂ ಎಚ್ಚರವಾಗಿಲ್ಲ. ಎದೆ ಮತ್ತು ಹೊಟ್ಟೆ ನೋವಿನಿಂದಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹಲವಾರು ಪರೀಕ್ಷೆಗಳನ್ನು ನಡೆಸಿದ ನಂತರ ವೈದ್ಯರು ರಾಖಿಯ ಗರ್ಭಾಶಯದಲ್ಲಿ ಗಡ್ಡೆಯನ್ನು ಪತ್ತೆ ಮಾಡಿದ್ದಾರೆ. ದೇವರ ದಯೆ ರಾಖಿ ಜೀ ಪರವಾಗಿಲ್ಲ ಮತ್ತು ಆಪರೇಷನ್ ಯಶಸ್ವಿಯಾಗಿದೆ. ಕಾರ್ಯಾಚರಣೆಯು ಪ್ರಮುಖವಾಗಿತ್ತು ಮತ್ತು ಇದು 3 ಗಂಟೆಗಳನ್ನು ತೆಗೆದುಕೊಂಡಿತು. ಆದರೆ ಈ ಗಂಟೆಗಳು ನನಗೆ ಹೇಗೆ ಹೋಯಿತು ಎಂಬುದನ್ನು ನಾನು ವಿವರಿಸಲು ಸಾಧ್ಯವಿಲ್ಲ. ನಾನು ಮತ್ತು ನನ್ನ ತಂಡ ಅವಳಿಗಾಗಿ ಉಪವಾಸ ಮತ್ತು ಪ್ರಾರ್ಥನೆ ಮಾಡಿದೆವು. ಅವರ ಪ್ರಾರ್ಥನೆಗಾಗಿ ಎಲ್ಲಾ ಅಭಿಮಾನಿಗಳು ಮತ್ತು ಸ್ನೇಹಿತರಿಗೆ ಧನ್ಯವಾದಗಳು.

  ತಮ್ಮ ಮೊಬೈಲ್​ ಫೋನ್​ನಲ್ಲಿ ತೆಗೆದಿರುವ ಗಡ್ಡೆಯನ್ನು ತೋರಿಸಿದ್ದಾರೆ. ಗರ್ಭಕೋಶದಲ್ಲಿ ತುಂಬಾ ದೊಡ್ಡದಾದ ಗಡ್ಡೆ ಇತ್ತು. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ರಾಖಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ರಿತೇಶ್​ ಹೇಳಿದ್ದಾರೆ. ಈಗ ರಿತೇಶ್​ ಪುನಃ ಫೋಟೋ ತೋರಿಸುತ್ತಾ, ಇನ್ನಾದರೂ ಟ್ರೋಲ್​ ಮಾಡುವುದನ್ನು ನಿಲ್ಲಿಸಿ, ಡ್ರಾಮಾ ಎಂದು ಹೇಳಬೇಡಿ ಎಂದಿದ್ದಾರೆ.

  ನಟಿ ಸುಪ್ರೀಂಕೋರ್ಟ್​ ಆದೇಶದ ಮೇರೆಗೆ ಬಂಧನದ ಭೀತಿಯನ್ನೂ ಎದುರಿಸುತ್ತಿದ್ದಾರೆ. ಮಾಜಿ ಪತಿ ಆದಿಲ್​ ಖಾನ್​ರ ಖಾಸಗಿ ವಿಡಿಯೋಗಳನ್ನು ಲೀಕ್​ ಮಾಡಿದ ಆರೋಪ ಇವರ ಮೇಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ನಿಂದ ಬಂಧನದ ಭೀತಿ ಇವರಿಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts