

ಚೆನ್ನೈ: ತಲಾ ಅಜಿತ್ ಅಭಿನಯದ ಕಾಲಿವುಡ್ ಸೂಪರ್ ಡೂಪರ್ “ಯೆನ್ನೈ ಅರಿಂದಾಲ್” ಮತ್ತು “ವಿಶ್ವಾಸಂ” ಚಿತ್ರಗಳಲ್ಲಿ ಮಗಳ ಪಾತ್ರದಲ್ಲಿ ಬಾಲ ನಟಿಯಾಗಿ ನಟಿಸುವ ಮೂಲಕ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದ ಅನಿಕಾ ಸುರೇಂದ್ರನ್, ಇದೀಗ ನಾಯಕಿಯಾಗಿ ಅನೇಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಅನಿಕಾ ಅವರ ವಯಸ್ಸು 19. ದಕ್ಷಿಣ ಭಾರತದ ಭರವಸೆಯ ನಾಯಕಿಯಾಗುವ ಎಲ್ಲ ಲಕ್ಷಣಗಳು ಅನಿಕಾರಲ್ಲಿದೆ.
ಮಲಯಾಳಂನ ಓ ಮೈ ಡಾರ್ಲಿಂಗ್ ಸಿನಿಮಾದಲ್ಲಿ ಲಿಪ್ಲಾಕ್ ಮಾಡುವ ಮೂಲಕ ಬೋಲ್ಡ್ ಪಾತ್ರಗಳಿಗೂ ನಾನು ರೆಡಿ ಎಂಬ ಸಂದೇಶದೊಂದಿಗೆ ಅನಿಕಾ ಅಭಿಮಾನಿಗಳ ಹುಬ್ಬೇರಿಸಿದ್ದರು. ಇದೀಗ ಅನಿಕಾ ನಟ ಧನುಷ್ ನಿರ್ದೇಶನದ ನಿಲವುಕು ಎನ್ಮೇಲ್ ಎನ್ನದಿ ಕೋಬಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಅನಿಕಾ, ಆಗಾಗ ತಮ್ಮ ಸ್ಟೈಲಿಶ್ ಹಾಗೂ ಹಾಟ್ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಿರುತ್ತಾರೆ. ಅನಿಕಾರ ಬೋಲ್ಡ್ ಅವತಾರಗಳನ್ನು ನೋಡಿ ಅನೇಕರು ಟೀಕಾ ಪ್ರಹಾರ ಮಾಡುತ್ತಿರುತ್ತಾರೆ. ಅಲ್ಲದೆ, ಟ್ರೋಲ್ ಸಹ ಮಾಡುತ್ತಾರೆ. ಇನ್ನು ಕೆಲವರು ಕೆಟ್ಟದಾಗಿ ನಿಂದಿಸುತ್ತಾರೆ.
ತಮ್ಮ ವಿರುದ್ಧ ಟೀಕೆ ಮಾಡುವವರಿಗೆ ಇದೀಗ ಅನಿಕಾ ಇತ್ತೀಚಿನ ಮಾಧ್ಯಮ ಸಂದರ್ಶನದಲ್ಲಿ ತಿರುಗೇಟು ನೀಡಿದ್ದಾರೆ. ಚಿತ್ರರಂಗದಲ್ಲಿ ನಟಿಯರು ಇಂತಹ ವಿಷಯಗಳನ್ನು ಸಾಮಾನ್ಯವಾಗಿ ಎದುರಿಸುತ್ತಿದ್ದಾರೆ. ನಾನು ಗ್ಲಾಮರಸ್ ಆಗಿ ಬಟ್ಟೆ ಧರಿಸುವುದು ನನ್ನ ವೈಯಕ್ತಿಕ ಆದ್ಯತೆ ಎಂದಿದ್ದಾರೆ. ಅಲ್ಲದೆ, ಟೀಕೆಗಳು ಬರುವುದು ಸಾಮಾನ್ಯ ಮತ್ತು ಅವು ಜೀವನದ ಒಂದು ಭಾಗವಾಗಿದೆ ಎಂದಿರುವ ಅನಿಕಾ, ನೀವು ಹೇಗೆ ಉಡುಗೆ ತೊಟ್ಟರೂ ತಪ್ಪಾಗಿ ಮಾತನಾಡುವವರೂ ಇದ್ದೇ ಇರುತ್ತಾರೆ ಎನ್ನುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಅಂದಹಾಗೆ ಅನಿಕಾ ಅವರು ತುಂಬಾ ಬೋಲ್ಡ್ ಆಗಿ ಮಾತನಾಡುವುದರಲ್ಲಿ ಹಿಂಜರಿಯುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕೇಳುವ ಅಶ್ಲೀಲ ಪ್ರಶ್ನೆಗಳಿಗೂ ತುಂಬಾ ನೇರವಾಗಿಯೇ ಉತ್ತರಿಸುತ್ತಾರೆ. ಈ ಹಿಂದೆ ನೆಟ್ಟಿಗರೊಬ್ಬರು ಇದು ಸ್ವಲ್ಪ ವಿಚಿತ್ರ ಅನಿಸಬಹುದು ಆದರೆ, ನನಗೆ ಬ್ರಾಗಳ ಬಗ್ಗೆ ಸಲಹೆ ಬೇಕಿದೆ. ನೀವು ಯಾವುದನ್ನು ಬಳಸುತ್ತೀರಿ ಹೇಳಿ ಎಂದು ಪ್ರಶ್ನಿಸಿದ್ದರು. ಇದಕ್ಕೆ ಸ್ವಲ್ಪವೂ ಸಂಕೋಚ ಪಟ್ಟುಕೊಳ್ಳದ ಅನಿಕಾ, ಹತ್ತಿಯಲ್ಲಿ ಮಾಡಿದ ಸರಿಯಾದ ಗಾತ್ರದ ಬ್ರಾಗಳನ್ನು ನಿಮಗೆ ಸಲಹೆ ನೀಡುತ್ತೇನೆ. ಜಿವಾಮೆಯಂತಹ ಸೈಟ್ಗಳ ಮೂಲಕ ಆನ್ಲೈನ್ನಲ್ಲಿ ನಾನು ಖರೀದಿಸುತ್ತೇನೆ ಎಂದಿದ್ದರು. ಇದು ಕೂಡ ವೈರಲ್ ಆಗಿತ್ತು. (ಏಜೆನ್ಸೀಸ್)