More

    ಕನ್ನಡ ಚಿತ್ರರಂಗದ ಹಿರಿಯ ನಟಿ ಮಂಜುಳ ಅವರ ಮಗ ಈಗ ಎಲ್ಲಿದ್ದಾರೆ? ಏನ್​ ಮಾಡ್ತಿದ್ದಾರೆ ಗೊತ್ತಾ?

    ಬೆಂಗಳೂರು: 80, 90ರ ದಶಕದಲ್ಲಿ ಕನ್ನಡ ಚಿತ್ರರಂಗ ಅದೆಷ್ಟೋ ನಟಿಯರನ್ನು ಕಂಡಿದೆ. ಒಂದಿಷ್ಟು ಕಲಾವಿದೆಯರು ಜನರ ಮನಸ್ಸಿನಲ್ಲಿ ಉಳಿದರೆ, ಇನ್ನೂ ಕೆಲವು ನಟಿಯರು ಕಾರಣಾಂತರಗಳಿಂದ ತೆರೆಮರೆಗೆ ಸರಿದರು. ಆದರೆ ತಮ್ಮ ನಟನೆಯಿಂದ ಜನರ ಮೆಚ್ಚುಗೆ ಗಳಿಸಿ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಕೆಲವು ನಟಿಯರಲ್ಲಿ ಮಂಜುಳಾ ಕೂಡ ಒಬ್ಬರು


    ಕನ್ನಡ ಸಿನಿಮಾರಂಗದಲ್ಲಿ ಬಾಯ್​​ಬಡ್ಕಿ ಎಂದೇ ಪ್ರಸಿದ್ಧರಾಗಿ ತಮ್ಮದೆ ಆದ ನಟನಾ ಶೈಲಿಯನ್ನು ಹೊಂದಿದ್ದ ನಟಿ ಮಂಜುಳಾ.ಈ ನಟಿಗೆ ಒಬ್ಬರು ಮಗ ಸಹ ಇದ್ದು ಈಗ ಅವರು ಎಲ್ಲಿ ಇದ್ದಾರೆ? ಹೇಗಿದ್ದಾರೆ? ಮತ್ತೆ ಈಗ ಏನು ಕೆಲಸ ಮಾಡುತ್ತಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇರುತ್ತೆ.

    ಕನ್ನಡ ಚಿತ್ರರಂಗದ ಹಿರಿಯ ನಟಿ ಮಂಜುಳ ಅವರ ಮಗ ಈಗ ಎಲ್ಲಿದ್ದಾರೆ? ಏನ್​ ಮಾಡ್ತಿದ್ದಾರೆ ಗೊತ್ತಾ?


    ದಿ. ನಟಿ ಮಂಜುಳಾ ಅವರ ಮಗನ ಹೆಸರು ಅಭಿಷೇಕ್, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತ ಬೆಂಗಳೂರಿನಲ್ಲಿಯೇ ವಾಸವಾಗಿದ್ದಾರೆ. ಅಭಿಷೇಕ್​ ಅವರಿಗೆ ಅವರು ಮಂಜುಳಾ ನಟಿಸಿರುವ ಎರಡು ಕನಸು ಸಿನಿಮಾ ತುಂಬಾ ಇಷ್ಟವಂತೆ. ನಮ್ಮ ತಾಯಿ ಬಗ್ಗೆ ಯಾರಾದ್ರೂ ಬಂದು ಹೊಗಳಿದಾಗ ನನಗೆ ತುಂಬಾ ಖುಷಿಯಾಗುತ್ತೆ ಎಂದರು. ಹಾಗೂ ಮುಂದಿನ ದಿನಗಳಲ್ಲಿ ತಮ್ಮ ಮಗನನ್ನು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿಸುವ ಇಚ್ಛೆ ಇದೆ ಎಂದು ಇತ್ತೀಚಿನ ಸಂದರ್ಶನ ಒಂದರಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

    80ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ನಟಿ ಮಂಜುಳಾ, ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದು ತಮ್ಮ ಅಮೋಘ ನಟನೆಯ ಮೂಲಕ ಯಶಸ್ಸು ಕಂಡಿದ್ದರು. ವರ ನಟ ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್ ಹಾಗೂ ಶ್ರೀನಾಥ್‌ರಂತಹ ಮುಂತಾದ ಸಮಕಾಲೀನ ನಟರೊಂದಿಗೆ ತೆರೆ ಹಂಚಿಕೊಂಡು ನಟನೆಯಲ್ಲಿ ಮಂಜುಳಾ ಸೈ ಎನಿಸಿಕೊಂಡು ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts