More

  ಪ್ರೀತಿಗೆ ಇನ್ನೊಂದು ಹೆಸರೇ ದ್ವಾರಕೀಶ್​; ಪತಿ ನೆನೆದು ಕಣ್ಣೀರು ಹಾಕಿದ ಎರಡನೇ ಪತ್ನಿ ಶೈಲಜಾ

  ಬೆಂಗಳೂರು: ಕರ್ನಾಟಕದ ಪ್ರಚಂಡ ಕುಳ್ಳ ಎಂದೇ ಖ್ಯಾತಿ ಪಡೆದಿದ್ದ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್​ ಅವರ ನಿಧನ ಸ್ಯಾಂಡಲ್​ವುಡ್​ಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಅವರ ಸಾವಿಗೆ ಚಿತ್ರರಂಗ, ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ.

  ಸಿನಿಮಾ ಮಾತ್ರವಲ್ಲದೇ ನಿಜಜೀವನದಲ್ಲೂ ಎರಡು ಮದುವೆಯಾಗುವ ಮೂಲಕ ಸಾಹಸ ಮಾಡಿದ್ದರು. ಮೊದಲ ಪತ್ನಿಯ ಅನುಮತಿಯನ್ನು ಪಡೆದು ಎರಡನೇ ವಿವಾಹವಾದ ಸುದ್ದಿ ಎಲ್ಲರಿಗೂ ತಿಳಿದಿದೆ. ಪತಿಯ ನಿಧನದ ಕುರಿತು ಅವರ ಎರಡನೇ ಪತ್ನಿ ಶೈಲಜಾ ಮಾತನಾಡಿದ್ದು, ಪತಿಯೊಂದಿಗಿನ ನೆನೆಪುಗಳನ್ನು ಮೆಲಕು ಹಾಕಿದ್ದಾರೆ.

  ಇದನ್ನೂ ಓದಿ: ಬ್ರೇಕ್​ ಫೇಲ್​ ಆಗಿ ಕೆಎಸ್​ಆರ್​ಟಿಸಿ ಬಸ್​ ಪಲ್ಟಿ; 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

  ಪ್ರೀತಿ ತುಂಬಿದ ಮನೆ ಇದಾಗಿತ್ತು. ಅವರಿಗೆ ಎಲ್ಲರ ಮೇಲೂ ಪ್ರೀತಿ ಇತ್ತು. ಈಗ ಅವರಿಲ್ಲ. ಅವರನ್ನು ನಾವು ಕಳೆದುಕೊಂಡಿದ್ದೇವೆ. ಅವರಿನ್ನು ಮರಳಿ ಬರುವುದಿಲ್ಲ. ದಂಡಿ ದಂಡಿ ಪ್ರೀತಿ, ವಿಶ್ವಾಸ ತುಂಬಿದ ಮನೆಯಿದು, ಮುದ್ದಾದ ಐವರು ಮಕ್ಕಳು-ಸೊಸೆ ಎಲ್ಲರನ್ನು ಬಿಟ್ಟು ಹೋಗ್ತಿದ್ದಾರೆ. ಪ್ರೀತಿಗೆ ಇನ್ನೊಂದು ಹೆಸರೇ ಅವರು. ಎಲ್ಲರನ್ನೂ ಪ್ರೀತಿ ಮಾಡಿದವರು ಅವರು. ಅವರು ನನಗೆ ಯಾವತ್ತೂ ಮೋಸ ಮಾಡಲಿಲ್ಲ. ಅವರ ಪ್ರೀತಿ ನನಗೆ ಎಂದಿಗೂ ಇರುತ್ತೆ.

  ದ್ವಾರಕೀಶ್ ಅವರು ಅಂಬುಜಕ್ಕನಿಗೆ ಎಷ್ಟು ಪ್ರೀತಿ ಕೊಟ್ಟರೋ ಅಷ್ಟೇ ಪ್ರೀತಿ ಕೊಟ್ಟರು. ದ್ವಾರಕೀಶ್ ನನಗೆ ಯಾವತ್ತೂ ಮೋಸ ಮಾಡಲಿಲ್ಲ, ಕಡೆಗಾಣಿಸಲಿಲ್ಲ ಲೈಫ್‌ನಲ್ಲಿ ನಾನು ಮರೆಯೋಕೆ ಆಗದಷ್ಟು ಪ್ರೀತಿ ಕೊಟ್ಟಿದ್ದಾರೆ. ಮಕ್ಕಳಿಗೆ ನಾನು ಎರಡನೇ ತಾಯಿಯಾದ್ರೂ ಕೂಡ ಅವರು ನನಗೆ ಸ್ವಂತ ತಾಯಿ ಹಾಗೆ ಪ್ರೀತಿ ಮಾಡ್ತಾರೆ. ಮಕ್ಕಳು ನನಗೆ ಆಂಟಿ ಅಂತ ಕರೆದರೂ ಅವರು ನನ್ನನ್ನು ತುಂಬ ಪ್ರೀತಿ ಮಾಡ್ತಾರೆ. ತುಂಬ ಮುದ್ದಾದ ಮಕ್ಕಳವು. ನಾನು ಪುಣ್ಯ ಮಾಡಿದೆ ಎಂದು ಅಗಲಿದೆ ಪತಿಯನ್ನು ನೆನೆದು ಎರಡನೇ ಪತ್ನಿ ಶೈಲಜಾ ಕಣ್ಣೀರು ಹಾಕಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts