More

    ಪತ್ನಿ ನಿಧನರಾದ ದಿನದಂದೇ ಇಹಲೋಕ ತ್ಯಜಿಸಿದ ನಟ ದ್ವಾರಕೀಶ್​

    ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಕರ್ನಾಟಕದ ಕುಳ್ಳ ಎಂದೇ ಹೆಸರುವಾಸಿಯಾಗಿದ್ದ ದ್ವಾರಕೀಶ್​ ಅವರ ನಿಧನ ಸ್ಯಾಂಡಲ್​ವುಡ್​ಗೆ ಆಘಾತವನ್ನುಂಟು ಮಾಡಿದೆ.

    ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನಲ್ಲಿ 1942 ಆಗಸ್ಟ್​ 19ರಂದು ಬಂಗಲೆ ಶ್ಯಾಮರಾವ್​ ಹಾಗೂ ಜಯಮ್ಮ ದಂಪತಿ ಪುತ್ರರಾಗಿ ಜನಿಸಿದ ದ್ವಾರಕೀಶ್​ ಅವರು, 1967ರಲ್ಲಿ ಅಂಬುಜಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರಿಗೆ ಗಿರಿ ಹಾಗೂ ಯೋಗೇಶ್​ ಎಂಬ ಇಬ್ಬರು ಪುತ್ರರಿದ್ದಾರೆ.

    ಅಚ್ಚರಿ ಏನೆಂದರೆ ನಟಿ ದ್ವಾರಕೀಶ್​ ಅವರ ಮೊದಲ ಪತ್ನಿ ಅಂಬುಜಾ ಏಪ್ರಿಲ್​ 16, 2021ರಂದು ವಯೋಸಹಜ ಖಾಯಿಲೆಯಿಂದ ಮೃತಪಟ್ಟಿದ್ದರು. ಇದೀಗ ಅವರ ಪತ್ನಿ ಮೃತಪಟ್ಟು ಮೂರು ವರ್ಷಗಳು ಸಂದಿದ್ದು, ಅದೇ ದಿನದಂದು ನಟ ದ್ವಾರಕೀಶ್​ ಇಹಲೋಕ ತ್ಯಜಿಸಿದ್ದಾರೆ. ಅಚ್ಚರಿ ಎಂಬಂತೆ ಅವರ ಪತ್ನಿ ನಿಧನದ ದಿನವೇ ದ್ವಾರಕೀಶ್​ ಸ್ವರ್ಗಸ್ಥರಾಗಿದ್ದಾರೆ.

    Dwarakish Family

    ಇದನ್ನೂ ಓದಿ: ಎಸ್​ಆರ್​ಎಚ್​ ವಿರುದ್ಧ 25ರನ್​ಗಳ ಸೋಲು; ಆರ್​ಸಿಬಿ ನಾಯಕ ಫಾಫ್​ ನೀಡಿದ ಕಾರಣ ಹೀಗಿದೆ

    ದ್ವಾರಕೀಶ್ ಅವರು​ 1964ರಲ್ಲಿ ವೀರಸಂಕಲ್ಪ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. 1969ರಲ್ಲಿ ಬಿಡುಗಡೆಯಾದ ಡಾ. ರಾಜ್ ಕುಮಾರ್ ಅಭಿನಯದ ‘ಮೇಯರ್ ಮುತ್ತಣ್ಣ’ ಚಿತ್ರದಲ್ಲಿ ಹಾಸ್ಯ ನಟನಾಗಿ ಅಭಿನಯಿಸಿದ್ದರು. ಬಳಿಕ ಹಲವು ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ತಮ್ಮ ವಿಭಿನ್ನ ನಟನೆಯಿಂದ ಗಮನ ಸೆಳೆದಿದ್ದರು. ದ್ವಾರಕೀಶ್, 1972 ರಲ್ಲಿ ‘ಕುಳ್ಳ ಏಜೆಂಟ್ 000’ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕನ ಪಟ್ಟ ಅಲಂಕರಿಸಿದ್ದರು. ಈ ಚಿತ್ರ ಜನರ ಮೆಚ್ಚುಗೆ ಗಳಿಸಿದ ನಂತರ ಕಿಲಾಡಿ ಕಿಟ್ಟು, ಪೆದ್ದ ಗೆದ್ದ, ಪ್ರಚಂಡ ಕುಳ್ಳ, ಸಿಂಗಾಪುರದಲ್ಲಿ ರಾಜಾ ಕುಳ್ಳ ಹೀಗೆ ಹಲವು ಸಿನಿಮಾಗಳ ಮೂಲಕ ದ್ವಾರಕೀಶ್ ಯಶಸ್ವಿ ನಾಯಕನಾಗಿ ಆಗಿ ಹೊರಹೊಮ್ಮಿದರು.

    1985ರಲ್ಲಿ ಸಿನಿಮಾ ನಿರ್ದೇಶನಕ್ಕಿಳಿದ ದ್ವಾರಕೀಶ್, ಮೊದಲ ಬಾರಿ ನೀ ಬರೆದ ಕಾದಂಬರಿ ಎಂಬ ಚಿತ್ರವನ್ನು ನಿರ್ದೇಶಿಸಿದರು. ಈ ಸಿನಿಮಾ ಸಾಕಷ್ಟು ಯಶಸ್ಸು ಗಳಿಸಿತು. ನಂತರ ಡಾನ್ಸ್ ರಾಜ ಡಾನ್ಸ, ಶ್ರುತಿ, ಶ್ರುತಿ ಹಾಕಿದ ಹೆಜ್ಜೆ, ರಾಯರು ಬಂದರು ಮಾವನ ಮನೆಗೆ ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಕೆಲವು ಸಿನಿಮಾಗಳಲು ಸೂಪರ್​ ಹಿಟ್​​, ಇನ್ನೂ ಕೆಲವು ಸಿನಿಮಾಗಳು ನಿರೀಕ್ಷೆ ಮಟ್ಟವನ್ನು ತಲುಪುವುದು ಕಷ್ಟವಾಗಿತ್ತು. ಇನ್ನು ನಿರ್ಮಾಣದ ವಿಚಾರಕ್ಕೆ ಬರುವುದಾದರೆ ಅವರು 50ಕ್ಕೂ ಹೆಚ್ಚು ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts