More

    ಎಸ್​ಆರ್​ಎಚ್​ ವಿರುದ್ಧ 25ರನ್​ಗಳ ಸೋಲು; ಆರ್​ಸಿಬಿ ನಾಯಕ ಫಾಫ್​ ನೀಡಿದ ಕಾರಣ ಹೀಗಿದೆ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ನಡೆದ ಪಂದ್ಯದಲ್ಲಿ ಆರ್​ಸಿಬಿ ತನ್ನ ಸೋಲಿನ ಸ್ಟ್ರೀಕ್​ಅನ್ನು ಮುಂದುವರೆಸಿದ್ದು, ಎಸ್​ಆರ್​ಎಚ್​​ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. 288ರನ್​ಗಳ ಬೃಹತ್​ ಮೊತ್ತವನ್ನು ಬೆನ್ನತ್ತಿದ್ದ ಆರ್​ಸಿಬಿ ಬ್ಯಾಟ್ಸ್​ಮನ್​ಗಳು ಎಸ್​ಆರ್​ಎಚ್​ ಬೌಲರ್​ಗಳನ್ನು ದಂಡಿಸಿದರು. 262ರನ್​ಗಳನ್ನು ಕಲೆಹಾಕುವ ಮೂಲಕ ಆರ್​ಸಿಬಿ ಅಂತಿಮವಾಗಿ 25ರನ್​ಗಳ ಸೋಲು ಕಂಡಿತ್ತು. ಇನ್ನು ಸೋಲಿನ ಕುರಿತು ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​ ಮಾತನಾಡಿದ್ದಾರೆ.

    ಸನ್​ರೈಸರ್ಸ್​​ ವಿರುದ್ಧದ ಪಂದ್ಯದಲ್ಲಿ ಟಾಸ್​​ ಗೆದ್ದು ಮೊದಲು ಫೀಲ್ಡಿಂಗ್​ ಆಯ್ದುಕೊಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಆರ್​ಸಿಬಿ ಬೌಲರ್​ಗಳು ವಿಫಲರಾದರು. ಎಸ್​ಆರ್​ಎಚ್​ ಪರ ಟ್ರಾವಿಸ್​ ಹೆಡ್​, ಹೆನ್ರಿಚ್​​​ ಕ್ಲಾಸೆನ್​, ಏಡೆನ್​ ಮಾರ್ಕ್ರಾಮ್​, ಅಬ್ದುಲ್​ ಸಮದ್​ ಆರ್​ಸಿಬಿ ಬೌಲರ್​ಗಳನ್ನು ದಂಡಿಸುವ ಮೂಲಕ 287 ರನ್​ಗಳನ್ನು ಪೇರಿಸಿದರು. ಇನ್ನು ಬೃಹತ್​ ಗುರಿ ಬೆನ್ನತ್ತಿದ್ದ ಆರ್​ಸಿಬಿಗೆ ಬ್ಯಾಟ್ಸ್​ಮನ್​ಗಳು ಉತ್ತಮ ಆರಂಭ ಒದಗಿಸುವಲ್ಲಿ ಸಫಲರಾದರು ಕೂಡ ಮಧ್ಯಮ ಕ್ರಮಾಂಕದ ದಿಢೀರ್​ ಕುಸಿತದಿಂದಾಗಿ 25ರನ್​ಗಳ ಸೋಲು ಕಂಡಿತ್ತು.

    Faf Kohli

    ಇದನ್ನೂ ಓದಿ: ಅಪ್ರಾಪ್ತ ವಯಸ್ಕ ವಿದ್ಯಾರ್ಥಿಯೊಂದಿಗೆ ಸರಸ​​; ಬೆತ್ತಲೆಯಾಗಿ ಸಿಕ್ಕಿಬಿದ್ದ ಇಂಗ್ಲಿಷ್ ಶಿಕ್ಷಕಿ ಅರೆಸ್ಟ್

    ಇನ್ನೂ ಸೋಲಿನ ಕುರಿತು ಮಾತನಾಡಿದ ನಾಯಕ ಫಾಫ್​ ಡು ಪ್ಲೆಸಿಸ್​, 280ರನ್​ಗಳ ಬೃಹತ್​ ಮೊತ್ತ ಬೆನ್ನಟ್ಟುವಾಗ ನಮ್ಮ ಉತ್ತಮ ಬ್ಯಾಟ್ಸ್​ಮನ್​ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ನಾವು ನೀಡಲಾಗಿದ್ದ ಟಾರ್ಗೆಟ್​ ಸಮೀಪ ಹೋಗಲು ಪ್ರಯತ್ನಿಸಿದ್ದೆವು ಆದರೆ, ಅಂತಿಮವಾಗಿ 25ರನ್​ಗಳ ಸೋಲು ಕಂಡೆವು. ಇಲ್ಲಿ ನಮ್ಮ ವೇಗಿಗಳು ಬೌಲ್ ಮಾಡಲು ಕಷ್ಟಪಟ್ಟರು. ಬ್ಯಾಟಿಂಗ್ ಕ್ಷೇತ್ರದಲ್ಲೂ ನಾವು ಕೆಲವು ಕಡೆ ಇನ್ನಷ್ಟು ಶ್ರಮ ಹಾಕಬೇಕಿದೆ. ಪವರ್​ಪ್ಲೇ ಬಳಿಕವೂ ರನ್​ರೇಟ್ ಕಡಿಮೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.

    ಟಾರ್ಗೆಟ್​ ಬೆನ್ನತ್ತಿದ್ದ ನಮ್ಮ ಬ್ಯಾಟ್ಸ್​ಮನ್​ಗಳು ಯಾವುದೇ ಕೊನೆಯವರೆಗೂ ಹೋರಾಡಿದರು. ಆದರೆ, ಬೌಲಿಂಗ್​ ವಿಚಾರಕ್ಕೆ ಬರುವುದಾದರೆ 30-40 ರನ್​ಗಳನ್ನು ಹೆಚ್ಚುವರಿಯಾಗಿ ಬಿಟ್ಟುಕೊಟ್ಟೆವು. ಆಟದ ವಿಚಾರ ಬಂದರೆ ಕೆಲವೊಮ್ಮೆ ನಿಮ್ಮ ತಲೆ ಸಿಡಿದಂತೆ ಅನಿಸುತ್ತದೆ. ಆದರೆ, ಮ್ಯಾಚ್ ಬಂದಾಗ ನಾವು ನಮ್ಮ ಕಡೆಯಿಂದ ಶೇ. 100 ನೀಡಬೇಕು ಎಂದು ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​ ಪೋಸ್ಟ್​ ಮ್ಯಾಚ್​ ಪ್ರಸೆಂಟೇಷನ್​ನಲ್ಲಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts