More

    IPL 2024: RCB ವಿರುದ್ಧ ಸೋತರೂ ತಲೆತಗ್ಗಿಸದ ಸನ್‌ರೈಸರ್ಸ್! ಅದಕ್ಕೂ ಒಂದು ಕಾರಣವಿದೆ

    ಹೈದರಾಬಾದ್: ನಿನ್ನೆ (ಏ.25) ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮತ್ತು ಸನ್​ರೈಸರ್ಸ್​ ಹೈದರಾಬಾದ್​ ನಡುವಿನ ರೋಚಕ ಪಂದ್ಯದಲ್ಲಿ ಎಸ್​ಆರ್​ಎಚ್​ 35 ರನ್​ಗಳ ಹೀನಾಯ ಸೋಲು ಅನುಭವಿಸಿತು. ಈ ಸೀಸನ್​ನಲ್ಲಿ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದು ಎಂದು ಹೇಳಲಾದ ಹೈದರಾಬಾದ್​ ಪಡೆ, ಚಾಲೆಂಜರ್ಸ್​ ಆರ್ಭಟಕ್ಕೆ ಕಡೆಗೂ ಶರಣಾಯಿತು.

    ಇದನ್ನೂ ಓದಿ: ಬಂಗಾಳದಲ್ಲಿ ರಾಮನವಮಿ ಮೆರವಣಿಗೆ ವೇಳೆ ಸ್ಫೋಟ, ಎನ್​ಐಎ ತನಿಖೆಗೆ ಕೋರ್ಟ್​ ಆದೇಶ

    ಐಪಿಎಲ್​ನ 41ನೇ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಆರ್​ಸಿಬಿ ತಂಡಕ್ಕೆ ರಜತ್​ ಪಟೀದಾರ್ (50 ರನ್, 20 ಎಸೆತ, 2 ಬೌಂಡರಿ, 5 ಸಿಕ್ಸರ್), ವಿರಾಟ್​ ಕೊಹ್ಲಿ (51 ರನ್, 43 ಎಸೆತ, 4 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ಕೊಡುಗೆ ಗೆಲುವಿಗೆ ಪ್ರಮುಖ ಕಾರಣವಾಯಿತು. 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 206 ರನ್​ಗಳಿಸುವ ಮೂಲಕ ಬೃಹತ್​ ಗುರಿಯನ್ನು ಬೆನ್ನಟ್ಟುವಂತೆ ಸನ್​ರೈಸರ್ಸ್​ ಹೈದರಾಬಾದ್​ಗೆ ಸವಾಲು​ ನೀಡಿದ ಆರ್​ಸಿಬಿ​, ಎದುರಾಳಿಗಳನ್ನು 171 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.

    ಇಲ್ಲಿಯವರೆಗೆ ಎಂಟು ಪಂದ್ಯಗಳನ್ನು ಆಡಿರುವ ಸನ್‌ರೈಸರ್ಸ್ ಹೈದರಾಬಾದ್, 8ರ ಪೈಕಿ ಐದು ಮ್ಯಾಚ್​ಗಳಲ್ಲಿ ಗೆಲುವು ಸಾಧಿಸಿದ್ದು, ಮೂರರಲ್ಲಿ ಸೋಲು ಕಂಡಿದೆ. ಆರ್​ಸಿಬಿ ಕೊಟ್ಟ ಗುರಿಯನ್ನು ಸುಲಭವಾಗಿ ಚೇಸ್​ ಮಾಡ್ತೀವಿ ಎಂದು ಮುನ್ನುಗ್ಗಿದ ಹೈದರಾಬಾದ್​ ಕಡೆಗೂ ಸೋಲುವ ಮೂಲಕ ಮುಗ್ಗರಿಸಿತು. ಇಷ್ಟಾದರೂ ಸಹ ವಿಶೇಷ ದಾಖಲೆ ಬರೆಯುವಲ್ಲಿ ಮಾತ್ರ ಎಸ್​ಆರ್​ಎಚ್​ ಹಿಂದೆ ಬಿದ್ದಿಲ್ಲ ಎಂಬುದು ಇಲ್ಲಿ ಗಮನಾರ್ಹ.

    ಇದನ್ನೂ ಓದಿ: ಗೃಹಜ್ಯೋತಿ ಹೆಸರಲ್ಲಿ ಮೋಸ, ಬಂಡೆಪ್ಪ ಕಾಶೆಂಪೂರಆರೋಪ

    ಐಪಿಎಲ್ ಸೀಸನ್​ನಲ್ಲಿ ಆಡಿದ ಒಟ್ಟು 8 ಪಂದ್ಯಗಳಲ್ಲಿ 100 ಸಿಕ್ಸರ್​​ಗಳನ್ನು ಸಿಡಿಸಿದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಇದೀಗ ಸನ್​ರೈಸರ್ಸ್​ ಹೈದರಾಬಾದ್​ ಫ್ರಾಂಚೈಸಿ ಪಾತ್ರವಾಗಿದೆ. ಸದ್ಯ ಈ ಸಂಗತಿ ತಿಳಿದ ಎಸ್​ಆರ್​ಎಚ್​ ಅಭಿಮಾನಿಗಳು, ಸೋತರು ಸಹ ಈ ವಿಶೇಷ ದಾಖಲೆ ಮಾಡಿದ್ದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂತಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

    ನಿಮಗೆ ಏನೂ ಗೊತ್ತಿಲ್ಲ… RCB ಪ್ಲೇಆಫ್ ಕನಸು ಇನ್ನೂ ಜೀವಂತ: ವಿಲ್​ ಜ್ಯಾಕ್ಸ್​ ಬಿಚ್ಚಿಟ್ರು ಶಾಕಿಂಗ್ ಸಂಗತಿ

    4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts