More

    ಬಾಲಿವುಡ್​​ ನಟಿ ಕರೀನಾ ಕಪೂರ್​ ಹೆಗಲಿಗೆ ದೊಡ್ಡ ಜವಾಬ್ದಾರಿ; ʻಯುನಿಸೆಫ್ ಇಂಡಿಯಾʼಗೆ ರಾಯಭಾರಿಯಾಗಿ ಆಯ್ಕೆ

    ಮುಂಬೈ: ಬಾಲಿವುಡ್‌ ನಟಿ ಕರೀನಾ ಕಪೂರ್ ಖಾನ್ ಯುನಿಸೆಫ್ ಇಂಡಿಯಾ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಈ ಕುರಿತಾಗಿ ಇನ್​ಸ್ಟಾಗ್ರಾಮ್​​ನಲ್ಲಿ ಬರೆದುಕೊಂಡು ಭಾವುಕರಾಗಿದ್ದಾರೆ.

    ಬಾಲಿವುಡ್​​ ನಟಿ ಕರೀನಾ ಕಪೂರ್​ ಹೆಗಲಿಗೆ ದೊಡ್ಡ ಜವಾಬ್ದಾರಿ; ʻಯುನಿಸೆಫ್ ಇಂಡಿಯಾʼಗೆ ರಾಯಭಾರಿಯಾಗಿ ಆಯ್ಕೆ

    2014ರಿಂದ ಯುನಿಸೆಫ್‌ ಜತೆ ನಟು ಹೊಂದಿ, ಅದರ ಚಟುವಟಿಕೆಯಲ್ಲಿ ಕ್ರಿಯಾಶೀಲವಾಗಿ ಭಾಗಿಯಾಗುತ್ತಿದ್ದರು. ಇದೀಗ ನಟಿ ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

    ಬಾಲಿವುಡ್​​ ನಟಿ ಕರೀನಾ ಕಪೂರ್​ ಹೆಗಲಿಗೆ ದೊಡ್ಡ ಜವಾಬ್ದಾರಿ; ʻಯುನಿಸೆಫ್ ಇಂಡಿಯಾʼಗೆ ರಾಯಭಾರಿಯಾಗಿ ಆಯ್ಕೆ

    ಕರೀನಾ ಪೋಸ್ಟ್‌ನಲ್ಲಿ ʻʻನನಗೆ ಇದು ಭಾವನಾತ್ಮಕ ದಿನ. ನಾನು ಯುನಿಸೆಫ್ ಇಂಡಿಯಾ ರಾಯಭಾರಿಯಾಗಿ ನೇಮಕಗೊಂಡಿರುವುದಕ್ಕೆ ಗೌರವವಿದೆ. ಕಳೆದ 10 ವರ್ಷಗಳಲ್ಲಿ ಯುನಿಸೆಫ್ ಇಂಡಿಯಾ ಜತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ನಾನು ಆ ಕೆಲಸದ ಬಗ್ಗೆ ಹೆಮ್ಮೆಪಡುತ್ತೇನೆ. ಮಕ್ಕಳ ಹಕ್ಕುಗಳನ್ನು ಉತ್ತೇಜಿಸಲು ಮತ್ತು ರಕ್ಷಿಸಲು ಮತ್ತು ಎಲ್ಲಾ ಮಕ್ಕಳಿಗೆ ಸಮಾನ ಭವಿಷ್ಯಕ್ಕಾಗಿ ಧ್ವನಿಯಾಗಲು ಹೆಮ್ಮೆಯಾಗುತ್ತಿದೆ. ದೇಶದಾದ್ಯಂತ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳಿಗಾಗಿ ದಣಿವರಿಯಿಲ್ಲದೆ ಶ್ರಮಿಸುತ್ತಿರುವ ಇಡೀ ತಂಡಕ್ಕೆ ವಿಶೇಷ ಧನ್ಯವಾದಗಳುʼʼಎಂದು ಬರೆದುಕೊಂಡಿದ್ದಾರೆ.

    ಕರೀನಾ ಕಪೂರ್ ಕೊನೆಯದಾಗಿ ‘ಕ್ರೂ’ ಚಿತ್ರದಲ್ಲಿ ಕಾಣಿಸಿಕೊಂಡರು. ಮುಂದೆ ರೋಹಿತ್ ಶೆಟ್ಟಿ ಅವರ ‘ಸಿಂಗಮ್ ಅಗೇನ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್‌ ಖ್ಯಾತ ನಟಿ ಕರೀನಾ ಕಪೂರ್‌ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿದ್ದಾರೆ ಎಂದು ಫ್ಯಾನ್ಸ್‌ ಸಂತದಲ್ಲಿ ಇದ್ದಿದ್ದರು. ಆದರೀಗ ವರದಿಯ ಪ್ರಕಾರ ಕರೀನಾ ಅವರು ಟಾಕ್ಸಿಕ್‌ ಸಿನಿಮಾದಿಂದ ಔಟ್‌ ಆಗಿದ್ದಾರೆ ಎನ್ನಲಾಗಿದೆ.

    ಬೀಚ್​​ನಲ್ಲಿ ದಿಶಾ ಪಟಾನಿ ಹಾಟ್ ಅವತಾರ; ಸೌಂದರ್ಯ ಅಲೆ ಎಂದ್ರು ಪಡ್ಡೆ ಹುಡುಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts