More

    ಆರ್​ಸಿಬಿ ವೆಂಟಿಲೇಟರ್​ನಿಂದ ಹೊರಬಂದಿದೆ ಐಸಿಯುನಿಂದಲ್ಲ; ಮಾಜಿ ಕ್ರಿಕೆಟಿಗನ ಹೇಳಿಕೆ ವೈರಲ್​

    ಬೆಂಗಳೂರು: ವಿಶ್ವದ ಮಿಲಿಯನ್​ ಡಾಲರ್​ ಟೂರ್ನಿಗಳಲ್ಲಿ ಒಂದಾಗಿರುವ ಐಪಿಎಲ್​ ಆರಂಭಗೊಂಡು 52 ಪಂದ್ಯಗಳು ಮುಕ್ತಯಗೊಂಡರೂ ಯಾವ ತಂಡಗಳು ಇದುವರೆಗೆ ಅಧಿಕೃತವಾಗಿ ಫ್ಲೇಆಫ್​ ಪ್ರವೇಶಿಸಿಲ್ಲ. ಐಪಿಎಲ್​ನ ದ್ವಿತಿಯಾರ್ಧದಲ್ಲಿ ಪುಟಿದೆದ್ದಿರುವ ಆರ್​ಸಿಬಿ ಹ್ಯಾಟ್ರಿಕ್​ ಗೆಲುವು ಸಾಧಿಸುವ ಮೂಲಕ ಹಲವು ತಂಡಗಳ ಫ್ಲೇಆಫ್​ ಹಾದಿಗೆ ಸವಾಲಾಗಿ ನಿಂತಿದೆ.

    ಮುಂದಿನ ಮೂರು ಪಂದ್ಯಗಳಲ್ಲಿ ಆರ್​ಸಿಬಿ ಭರ್ಜರಿ ಪ್ರದರ್ಶನ ನೀಡಿ ಗೆದ್ದರೆ ಪ್ಲೇಆಫ್​ ಆಸೆ ಜೀವಂತವಾಗಿರಲಿದೆ. ಆದರೆ, ಆರ್​ಸಿಬಿ ಪ್ಲೇಆಫ್​ ಪ್ರವೇಶಿಸಬೇಕೆಂದರೆ ಉಳಿದ ತಂಡಗಳ ಸೋಲು-ಗೆಲುವು ಮಹತ್ವದ ಪಾತ್ರ ವಹಿಸಲಿದೆ. ಇದಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಿರುವ ಮಾಜಿ ಕ್ರಿಕೆಟಿಗ ಅಜಯ್​ ಜಡೇಜಾ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ.

    ಇದನ್ನೂ ಓದಿ: ಮೋದಿ-ನಿತೀಶ್​ ಟೀಕಿಸುತ್ತ ಮಹಿಳೆಯ ಜತೆ ಅಸಭ್ಯ ನೃತ್ಯ; ಆರ್​ಜೆಡಿ ನಾಯಕನ ವಿಡಿಯೋ ವೈರಲ್

    ವೆಂಟಿಲೇಟರ್​ನಿಂದ ಹೊರಬಂದರೂ ಆರ್​ಸಿಬಿ ಇನ್ನೂ ಐಸಿಯುನಲ್ಲಿದೆ ಎಂಬುದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕಾಗಿದೆ. ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಬ್ಯಾಟಿಂಗ್​ ನೋಡಿ ನಿಜವಾಗಿಯೂ ಖುಷಿಯಾಯಿತು. ಆದರೆ, ನಾವು ಇಲ್ಲಿ ಬೌಲರ್​ಗಳ ಬಗ್ಗೆ ಮಾತನಾಡಬೇಕಾಗಿದೆ. ಒಂದು ಕಾಲದಲ್ಲಿ ಬ್ಯಾಟ್ಸ್​ಮನ್​ಗಳಿಗೆ ಸರಿಯಾದ ಸಹಕಾರ ನೀಡುತ್ತಿರಲಿಲ್ಲ. ಆದರೆ, ಇದೀಗ ಬೌಲರ್​ಗಳು ಬ್ಯಾಟ್ಸ್​ಮನ್​ಗಳಿಗೆ ಸಹಕಾರ ನೀಡುತ್ತಿದ್ದು, ಇದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

    ಆರಂಭದಿಂದಲೂ ಅವರು ವಿಭಿನ್ನವಾಗಿ ಆಟವಾಡುತ್ತ ಬಂದಿದ್ದಾರೆ. ಆದರೆ, ಸಿಕ್ಸರ್​ನೊಂದಿಗೆ ಆಟವನ್ನು ಪ್ರಾರಂಭಿಸಿರುವುದನ್ನು ನಾನು ಎಂದಿಗೂ ನೋಡಿಲ್ಲ. ಆದರೆ,. ಆರ್​ಸಿಬಿ ವೆಂಟಿಲೇಟರ್​ನಿಂದ ಹೊರ ಬಂದಿದ್ದು, ಇನ್ನೂ ಐಸಿಯುನಲ್ಲಿದೆ ಎಂಬ ಅಂಶವನ್ನು ಯಾರು ಮರೆಯಬಾರದೆಂದು ಮಾಜಿ ಕ್ರಿಕೆಟಿಗ ಅಜಯ್​ ಜಡೇಜಾ ಅಭಿಪ್ರಾಯಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts