ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡಲಿದ್ದಾರೆ ಧೋನಿ! ವಿಡಿಯೋ​ ಕಂಡ ಫ್ಯಾನ್ಸ್ ದಿಲ್ ಖುಷ್​

WhatsApp Image 2024-05-17 at 1.39.54 PM
Published on

ಬೆಂಗಳೂರು: ಪ್ರಸಕ್ತ ಐಪಿಎಲ್​ ಆವೃತ್ತಿ ಬಹಳ ರೋಚಕವಾಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳ ಚಿತ್ತ ಕೇವಲ ಪ್ಲೇಆಫ್‌ ಪಂದ್ಯಗಳತ್ತ ಮೂಡುತ್ತಿದೆ. ಆದರೆ, ಇದಕ್ಕೂ ಮೊದಲು ಮೇ.18ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ನಡುವಿನ ಪಂದ್ಯ ಮಾತ್ರ ಬಲು ರೋಚಕವಾಗಿರಲಿದೆ ಎಂಬುದು 100ಕ್ಕೆ 100 ಗ್ಯಾರಂಟಿ ಎನ್ನುವಂತಾಗಿದೆ.

ಈಗಾಗಲೇ ಐಪಿಎಲ್ ಅಂಕಪಟ್ಟಿಯಲ್ಲಿ ಕೆಕೆಆರ್​, ರಾಜಸ್ಥಾನ ರಾಯಲ್ಸ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ಪ್ಲೇಆಫ್​ಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ. ಸದ್ಯ ಈಗ ಉಳಿದಿರುವುದು ಆರ್​ಸಿಬಿ ಮತ್ತು ಸಿಎಸ್​ಕೆ ಮಾತ್ರ. ಇವರಿಬ್ಬರಲ್ಲಿ ಯಾರು ಪಂದ್ಯ ಗೆದ್ದು ಪ್ಲೇಆಫ್​ಗೆ ಎಂಟ್ರಿ ಕೊಡಲಿದ್ದಾರೆ ಎಂಬುದನ್ನು ಸದ್ಯ ಬಹಳ ಕಾತರದಿಂದ ಕಾದು ನೋಡಬೇಕಿದೆ. ಇನ್ನು ಈ ರೋಚಕ ಪಂದ್ಯಕ್ಕೆ ಮಳೆಯೂ ಅಡ್ಡಿಯಾಗಲಿದೆ ಎಂದು ಹೇಳಲಾಗುತ್ತಿದ್ದು, ಆರ್​ಸಿಬಿ ಭವಿಷ್ಯ ಮಳೆರಾಯನ ಮೇಲೂ ನಿಂತಿದೆ ಎಂಬುದೇ ಭಾರೀ ಆಶ್ಚರ್ಯ.

ಸದ್ಯ ಈಗಾಗಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತರಬೇತಿ ನಡೆಸುತ್ತಿರುವ ಎರಡು ತಂಡಗಳು, ಗೆಲುವಿಗಾಗಿ ಏನೇನು ಅಗತ್ಯವಿದೆಯೋ, ಅದರ ತಯಾರಿಗೆ ಸನ್ನದ್ಧವಾಗಿದೆ. ಇನ್ನು ಸಿಎಸ್​ಕೆ ತಂಡದಲ್ಲಿ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಪ್ರ್ಯಾಕ್ಟಿಸ್​ ಸೆಷನ್​ನಲ್ಲಿ ನೋಡುವುದೇ ಅಭಿಮಾನಿಗಳಿಗೆ ಒಂದು ಖುಷಿ. ಪ್ರತಿಬಾರಿ ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಮಾಹಿ, ಈ ಬಾರಿ ಬೌಲಿಂಗ್ ತರಬೇತಿಯಲ್ಲಿ ನಿರತರಾದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ.

ವೈರಲ್ ವಿಡಿಯೋ ನೋಡಿದ ಫ್ಯಾನ್ಸ್, ಇದೇನು ಆಶ್ವರ್ಯ? ಧೋನಿ ಬೌಲಿಂಗ್ ಮಾಡುತ್ತಿದ್ದಾರೆ ಅಂದರೆ ಖಂಡಿತ ಅಲ್ಲಿ ಯಾವುದೋ ಒಂದು ವಿಷಯ ನಮ್ಮಿಂದ ಅಡಗಿದೆ ಎಂದು ಭಾವಿಸಿದ್ದಾರೆ. ಕೆಲವರು ಈ ಸೀಸನ್​ನಲ್ಲಿ ಇದು ಧೋನಿ ಅವರ ಕಡೆಯ ಪಂದ್ಯವಾದ ಕಾರಣ, ಪ್ರಾಯಶಃ ಮಾಹಿಗೆ ಒಂದು ಓವರ್ ಬೌಲಿಂಗ್​ ಕೊಡುವ ನಿರ್ಧಾರವನ್ನು ಫ್ರಾಂಚೈಸಿ ಮಾಡಿರಬೇಕು ಎಂದು ಅಭಿಪ್ರಾಯಿಸಿದ್ದಾರೆ. ಸದ್ಯ ಈ ವಿಷಯ ಎಲ್ಲರ ಗಮನಸೆಳೆದಿದ್ದು, ಕ್ಯಾಪ್ಟನ್ ಕೂಲ್ ಬೌಲಿಂಗ್​ ದಾಳಿ ನೋಡಲು ನಾವಂತು ಬಹಳ ಕುತೂಹಲದಿಂದ ಕಾಯುತ್ತಿದ್ದೇವೆ ಎಂದೆಲ್ಲಾ ಕಮೆಂಟ್​ಗಳ ಸುರಿಮಳೆ ಹರಿದುಬಂದಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net