More

    ಟಿ20 ಕ್ರಿಕೆಟ್​ನಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ ಬರೆದ ಕಿಂಗ್​ ಕೊಹ್ಲಿ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ 52ನೇ ಪಂದ್ಯದಲ್ಲಿ ಅಲ್ರೌಂಡ್​ ಪ್ರದರ್ಶನದ ಫಲವಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಗುಜರಾತ್​ ಟೈಟಾನ್ಸ್​ ಎದುರು ಗೆಲ್ಲುವ ಮೂಲಕ ಪಾಯಿಂಟ್ಸ್​ ಟೇಬಲ್​ನಲ್ಲಿ 7ನೇ ಸ್ಥಾನಕ್ಕೇರಿದ್ದು, ಫ್ಲೇಆಫ್​ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

    ಹಾಲಿ ಟೂರ್ನಿಯಲ್ಲಿ ತಮ್ಮ ಬಿರುಸಿನ ಬ್ಯಾಟಿಂಗ್​ ಮೂಲಕವೇ ಅತ್ಯಧಿಕ ರನ್​ ಸ್ಕೋರರ್ ಆಗಿ ಹೊರಹೊಮ್ಮಿರುವ ವಿರಾಟ್​ ಕೊಹ್ಲಿ ಆರೆಂಜ್​ ಕ್ಯಾಪನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಇನ್ನು ಗುಜರಾತ್​ ವಿರುದ್ಧದ ಪಂದ್ಯದಲ್ಲಿ 42 ರನ್​ಗಳಿಸಿ ಔಟಾದ ವಿರಾಟ್​ ಕೊಹ್ಲಿ ಟಿ-20 ಇತಿಹಾಸದಲ್ಲಿ ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ.

    ಇದನ್ನೂ ಓದಿ: VIDEO| ಭಾರತದ ಕ್ರಿಕೆಟಿಗನನ್ನು ತೆಗಳಿ ಪಾಕ್​ ಆಟಗಾರನನ್ನು ಹೊಗಳಿದ ಊರ್ವಶಿ ರೌಟೇಲಾ

    ಗುಜರಾತ್​ ಟೈಟಾನ್ಸ್​​ ವಿರುದ್ಧದ ಪಂದ್ಯದಲ್ಲಿ ಆರು ರನ್​ಗಳನ್ನು ಕಲೆಹಾಕಿದ ವೇಳೆ ವಿರಾಟ್​ ಕೊಹ್ಲಿ ಟಿ-20 ಕ್ರಿಕೆಟ್​ನಲ್ಲಿ 12,500 ರನ್​ ಪೂರೈಸಿದ ವಿಶ್ವದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ಇದುವರೆಗೆ 349 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ 9 ಶತಕ ಹಾಗೂ 91 ಅರ್ಧಶತಕ ಒಳಗೊಂಡಂತೆ 12,500 ರನ್​ ಸಿಡಿಸಿದ್ದಾರೆ. ಈ ಮೂಲಕ 12,500 ರನ್​ ಪೂರೈಸಿದ ವಿಶ್ವದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ವಿರಾಟ್​ ಕೊಹ್ಲಿಗೂ ಮುನ್ನ ಟಿ-20 ಕ್ರಿಕೆಟ್​ನಲ್ಲಿ ವೆಸ್ಟ್​ ಇಂಡೀಸ್​ನ ಕ್ರಿಸ್​ ಗೇಲ್​ (14,562), ಪಾಕಿಸ್ತಾನದ ಶೋಯೆಬ್​ ಮಲಿಕ್​ (13,360), ಕೀರನ್ ಪೊಲಾರ್ಡ್ (12,900) 12 ಸಾವಿರಕ್ಕೂ ಅಧಿಕ ರನ್​ ಗಳಿಸಿದ ಮೊದಲ ಮೂವರು ಬ್ಯಾಟ್ಸ್​ಮನ್​ಗಳಾಗಿದ್ದಾರೆ. ಇದೀಗ 12,536 ರನ್​ ಗಳಿಸುವ ಮೂಲಕ ವಿರಾಟ್​ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts