More

    ಬಾಲಿವುಡ್​ಗಿಂತ ಕೊರಿಯನ್​ ಚಿತ್ರಗಳು ಚೆನ್ನಾಗಿರುತ್ತವೆ, ಈ ಪದ ಕಂಡರೆ ನನಗೆ ಆಗುವುದಿಲ್ಲ: ಹಿರಿಯ ನಟ ಹೀಗಂದಿದ್ಯಾಕೆ

    ಮುಂಬೈ: ಸೌತ್​ ಸಿನಿ ಇಂಡಸ್ಟ್ರಿಯ ಅಬ್ಬರದ ಮುಂದೆ ಮಂಕಾಗಿರುವ ಹಿಂದಿ ಚಿತ್ರರಂಗವು ಇತ್ತೀಚಿನ ವರ್ಷಗಳಲ್ಲಿ ನೀಡಿರುವುದು ಕೆಲವೇ ಕೆಲವು ಹಿಟ್​ ಸಿನಿಮಾಗಳು ಎಂದು ಹೇಳಬಹುದಾಗಿದೆ. ಈ ಪೈಕಿ ಪಠಾಣ್, ಜವಾನ್​ , ಗದರ್​-2 ಸೇರಿದಂತೆ ಕೆಲವೇ ಕೆಲವು ಚಿತ್ರಗಳು ಹಿಟ್​ಲಿಸ್ಟ್​ ಸೇರಿದವು. ಇದೀಗ ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಹಿರಿಯ ನಟ ನಾಸೀರುದ್ಧಿನ್​ ಷಾ ಬಾಲಿವುಡ್​ ಚಿತ್ರಗಳಿಗಿಂತ ಕೊರಿಯನ್​ ಸಿನಿಮಾಗಳು ಉತ್ತಮವಾಗಿವೆ ಎಂದು ಹೇಳಿದ್ದಾರೆ.

    ಕಾರ್ಯಕ್ರಮ ಒಂದರಲ್ಲಿ ಈ ಕುರಿತು ಮಾತನಾಡಿದ ಷಾ, ಭಾರತೀಯ ಆಹಾರವು ಅದರ ವಸ್ತು ಮತ್ತು ಗುಣಮಟ್ಟವು ಜಾಗತಿಕ ಮಟ್ಟದಲ್ಇ ಮನ್ನಣೆ ಪಡೆಯುತ್ತಿರುವಾಗ ಬಾಲಿವುಡ್​ ಚಲನಚಿತ್ರಗಳು ಮಾತ್ರ ಈ ಗುಣಲಕ್ಷಣಗಳನ್ನು ಹೊಂದಿಲ್ಲ. ಬಾಲಿವುಡ್​ ಚಿತ್ರಗಳಲ್ಲಿ ನಿಜವಾದ ವಸ್ತುವಿನ ಕೊರತೆಯಿದ್ದು, ನೀರಿನ ಮೇಲೆ ಗುಳ್ಳೆಯಂತಾಗಿದೆ.

    ಬಾಲಿವುಡ್​ ಚಿತ್ರಗಳಿಗಿಂತ ಕೊರಿಯನ್​ ಸಿನಿಮಾಗಳು ಉತ್ತಮವಾಗಿದೆ. ಇಡೀ ಜಗತ್ತು ಬಾಲಿವುಡ್​ ಚಿತ್ರಗಳನ್ನು ನೋಡುತ್ತಿದೆ ಎಂದು ನಾವು ಹೇಳಿಕೊಳ್ಳುತ್ತೇವೆ. ಆದರೆ, ಅದಾಗುತ್ತಿಲ್ಲ. ಮೊದಲಿಗೆ ನಾನು ಬಾಲಿವುಡ್​ ಎಂಬ ಪದವನ್ನು ದ್ವೇಷಿಸುತ್ತೇನೆ. ಏಕೆಂದರೆ ಈ ಚಿತ್ರಗಳು ಸತ್ವವನ್ನು ಹೊಂದಿರದ ಕಾರಣ ಎಲ್ಲರಿಗೂ ತಿಳಿದಿರುವ ಉದ್ದೇಶಗಳೊಂದಿಗೆ ನಿರ್ಮಿಲಸಲ್ಪಟ್ಟಿರುವುದರಿಂದ ಚಿತ್ರಗಳು ಸೋಲುವಂತಾಗಿದೆ ಎಂದು ನಟ ನಾಸೀರುದ್ಧೀನ್​ ಷಾ ಅಭಿಪ್ರಾಯಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts