More

    ಗೌತಮ್​​​ ಹೇಳಿರುವುದರಲ್ಲಿ ತಪ್ಪೇನಿದೆ; ಗಂಭೀರ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಕೆವಿನ್​ ಪೀಟರ್ಸನ್​

    ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಆಟಗಾರ, ಕೆಕೆಆರ್​ ತಂಡದ ಮೆಂಟರ್​ ಗೌತಮ್​ ಗಂಭೀರ್​ ಇತ್ತೀಚಿನ ದಿನಗಳಲ್ಲಿ ತಮ್ಮ ಹೇಳಿಕೆಗಳ ಮೂಲಕವೇ ಸಖತ್​ ಟ್ರೆಂಡ್​ ಸೃಷ್ಟಿಸುತ್ತಿದ್ದು, ಕೆಕೆಆರ್​ ಮೆಂಟರ್​ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ತಂಡದ ಸಂಯೋಜನೆಯನ್ನು ಸಂಪೂರ್ಣವಾಗಿ ಬದಲಾಯಿಸಿದ್ದು, ಪ್ರಶಸ್ತಿ ಗೆಲ್ಲುವ ಹಾಟ್​ ಫೇವರಿಟ್​ ತಂಡಗಳಲ್ಲಿ ಕೋಲ್ಕತ ಟೀಮ್​ಅನ್ನು ಒಂದಾಗಿಸಿದ್ದಾರೆ.

    ನಾಯಕತ್ವದ ವಿಚಾರವಾಗಿ ಹಾರ್ದಿಕ್​ ಪಾಂಡ್ಯರ ಕುರಿತು ಮಾತನಾಡಿದ ಎಬಿ ಡಿವಿಲಿಯರ್ಸ್​ ವಿರುದ್ಧ ಗಂಭೀರ್​ ಆಕ್ರೋಶ ಹೊರಹಾಕಿದ್ದರು. ಈ ರೀತಿ ಮಾತನಾಡಲು ಎಬಿಡಿಗೆ ಯಾವ ಹಕ್ಕಿಗೆ ಎಂದು ಪ್ರಶ್ನಿಸುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಕೆವಿನ್​ ಪೀಟರ್ಸನ್​ ಪ್ರತಿಕ್ರಿಯಿಸಿದ್ದು, ಗಂಭೀರ್​ ಹೇಳಿರುವುದರಲ್ಲಿ ತಪ್ಪೇನಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

    ಈ ಕುರಿತು ಮಾತನಾಡಿದ ಪೀಟರ್ಸನ್​, ನಾನು ಕೂಡ ಒಬ್ಬ ಕೆಟ್ಟ ಕ್ಯಾಪ್ಟನ್​ ಆಗಿ ತಂಡವನ್ನು ಮುನ್ನಡೆಸಿದ್ದೇನೆ. ನಾನು ಕೂಡ ಹಲವು ಏಳುಬೀಳುಗಳನ್ನು ಕಂಡಿದ್ದೇನೆ. ಗೌತಮ್​ ಗಂಭೀರ್​ ಮಾತನಾಡಿರುವುದರಲ್ಲಿ ತಪ್ಪೇನಿದೆ ಎಂದು ಹೇಳುವ ಮೂಲಕ ಮಾಜಿ ಕ್ರಿಕೆಟಿ್ ಕೆವಿನ್​ ಪೀಟರ್ಸನ್​ ಗೌತಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ನಾಯಕತ್ವ ವಹಿಸಿದ ಸಂದರ್ಭದಲ್ಲಿ ಅವರ ಸ್ವಂತ ಪ್ರದರ್ಶನ ಹೇಗಿತ್ತು? ಕೆವಿನ್ ಪೀಟರ್ಸನ್ ಅಥವಾ ಎಬಿ ಡಿವಿಲಿಯರ್ಸ್ ಅವರ ವೃತ್ತಿಜೀವನದಲ್ಲಿ ನಾಯಕತ್ವ ವಹಿಸಿಕೊಂಡಿದ್ದ ಸಮಯದಲ್ಲಿ ಉತ್ತಮ ಪ್ರದರ್ಶನಗಳು ನಡೆದಿವೆ ಎಂದು ನಾನು ಭಾವಿಸುವುದೇ ಇಲ್ಲ. ಹೇಳಲು ಇಲ್ಲಿ ಏನೂ ಇಲ್ಲ. ನೀವು ಅವರ ದಾಖಲೆಗಳನ್ನು ನೋಡಿದರೆ, ಇತರ ಯಾವುದೇ ನಾಯಕರಿಗಿಂತ ತುಂಬಾ ಕೆಟ್ಟದಾಗಿದೆ ಎಂದು ನಾನು ಭಾವಿಸುತ್ತೇನೆ. ತಮ್ಮ ವೈಯಕ್ತಿಕ ಪ್ರದರ್ಶನಗಳನ್ನು ಹೊರತುಪಡಿಸಿ ತಂಡದೊಂದಿಗೆ ಏನನ್ನೂ ಸಾಧಿಸಲು ವಿಫಲರಾಗಿದ್ದಾರೆ ಎಂದು ಗೌತಮ್​ ಗಂಭೀರ್​ ಅಭಿಪ್ರಾಯಪಟ್ಟಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts