More

  ರಾಜಕಾಲುವೆ ಸ್ವಚ್ಛತೆ ಕಾರ್ಯ ಪ್ರಾರಂಭ – ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಪರಿಶೀಲನೆ


  ಪುತ್ತೂರು: ಪೂರ್ವ ಮುಂಗಾರಿನಿAದಾಗಿ ಅಲ್ಲಲ್ಲಿ ಮಳೆಯಾಗುತ್ತಿದ್ದು, ನಗರಸಭೆಯ ವ್ಯಾಪ್ತಿಯ ರಾಜಕಾಲುವೆಗಳ ಪರಿಸ್ಥಿತಿಯನ್ನು ಗಮನಿಸಿ ಸ್ವಚ್ಛಗೊಳಿಸುವ ಕಾರ್ಯ ಬುಧವಾರ ಚಾಲನೆ ನೀಡಲಾಗಿದೆ. ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಕಾಮಗಾರಿಯ ಪರಿಶೀಲನೆ ಮಾಡಿ ಅಗತ್ಯ ಸೂಚನೆಗಳನ್ನು ನೀಡಿ ಮಳೆಗಾಲದಲ್ಲಿ ನೀರು ನುಗ್ಗಿದ ಬಳಿಕ ಎಚ್ಚರಗೊಳ್ಳುವುದಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.


  ಜುಬಿನ್ ಮೊಹಾಪಾತ್ರ ಮಾತನಾಡಿ ಪುತ್ತೂರು ಉಪವಿಭಾಗದಲ್ಲಿ ಕುಡಿಯುವ ನೀರಿನ ದೊಡ್ಡಮಟ್ಟದ ಸಮಸ್ಯೆ ಬಂದಿಲ್ಲ. ೧೨ ಗ್ರಾಮ ಪಂಚಾಯಿತಿಗಳಲ್ಲಿ ಸಮಸ್ಯೆ ಬರುವ ಲಕ್ಷಣಗಳಿರುವ ಕಾರಣದಿಂದ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗಿದೆ. ಅತಿ ಹೆಚ್ಚು ಸಮಸ್ಯೆಯಿರುವಲ್ಲಿ ಸ್ಥಳೀಯ ಅಽಕಾರಿಗಳು ಜನರ ಬಳಿ ತೆರಳಿ ಮಾಹಿತಿ ಪಡೆದು, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿದೆ. ನಗರದಲ್ಲಿಯೂ ಎರಡು ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಲಾಗಿದೆ ಎಂದರು.


  ಮುಂಗಾರು ಮಳೆಗೆ ಪೂರ್ವಭಾವಿಯಾಗಿ ರಾಜಕಾಲುವೆಗಳನ್ನು ಸ್ವಚ್ಚಗೊಳಿಸಲಾಗುತ್ತಿದೆ. ತೀವ್ರ ಗಾಳಿಯಿಂದ ಉಂಟಾದ ಹಾನಿಯಿಂದ ವಿದ್ಯುತ್ ಸಮಸ್ಯೆಯಾಗಿ ನೀರು ಪೂರೈಕೆಯಲ್ಲಿಯೂ ಸ್ವಲ್ಪ ಸಮಸ್ಯೆ ಉಂಟಾಗಿತ್ತು. ವಿದ್ಯುತ್ ಸಮಸ್ಯೆಯನ್ನು ಮೆಸ್ಕಾಂ ತುರ್ತಾಗಿ ಪರಿಹಾರ ಮಾಡಿದೆ. ದ.ಕ ಜಿಲ್ಲೆಯಲ್ಲಿ ಜಿಲ್ಲಾಽಕಾರಿಗಳ ಅಧ್ಯಕ್ಷತೆಯಲ್ಲಿ ಮೂರು ಸಭೆಗಳನ್ನು ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡಿದ್ದಾರೆ. ಪುತ್ತೂರಿನಲ್ಲಿ ಎರಡು ವಾರದಲ್ಲಿ ೫ ಟಾಸ್ಕ್ಫೋರ್ಸ್ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.


  ನೆಲ್ಲಿಕಟ್ಟೆ ಹಿಂದು ರುದ್ರಭೂಮಿ ಸಮಿಪದಲ್ಲಿ ಹಾದುಹೋಗುವ ರಾಜ ಕಾಲುವೆ, ಮುಖ್ಯರಸ್ತೆಯ ಗಣೇಶ್ ಪ್ರಸಾದ್ ಹೊಟೇಲ್ ಬಳಿ ರಾಜಕಾಲುವೆ, ಎಪಿಎಂಸಿ ರಸ್ತೆಯಲ್ಲಿರುವ ರಾಜಕಾಲುವೆಯ ಕಾಮಗಾರಿ ಪರಿಶೀಲನೆ ನಡೆಸಿದರು. ಸ್ವಚ್ಚಗೊಳಿಸುವ ಕಾಮಗಾರಿಯನ್ನು ಶೀಘ್ರವಾಗಿ ಹಾಗೂ ಸಮಪರ್ಕವಾಗಿ ನಡೆಸುವಂತೆ ಸೂಚನೆ ನೀಡಿದರು.


  ತಹಶೀಲ್ದಾರ್ ಕುಞÂ ಅಹಮ್ಮದ್, ನಗರಸಭಾ ಪೌರಾಯುಕ್ತ ಬದ್ರುದ್ದಿನ್ ಸೌದಾಗರ, ನಗರಸಭಾ ಸಹಾಯಕ ಕಾರ್ಯಪಾಲಕ ಅಭಿಯಂತರಾದ ದುರ್ಗಾ ಪ್ರಸಾದ್, ಶಬರಿನಾಥ್ ರೈ, ಸಹಾಯಕ ಅಭಿಯಂತ ಕೃಷ್ಣ ಮೂರ್ತಿ ರೆಡ್ಡಿ, ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ ಕೆ, ಶ್ವೇತಾಕಿರಣ್, ನಗರಸಭೆ ನೀರು ಸರಬರಾಜು ವಿಭಾಗ ಜಲಸಿರಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಾದೇಶ್, ಇಂಜಿನಿಯರ್ ಗೌತಮ್, ಸಹಾಯಕ ಇಂಜಿನಿಯರ್ ಸುನೀಲ್ ಉಪಸ್ಥಿತರಿದ್ದರು.


  ಮಿಂಚು ನಿರೋಧಕ ಅಳವಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅನುದಾನ ಬಿಡುಗಡೆಯಾದ ಕೂಡಲೇ ಅಳವಡಿಸಲು ಕ್ರಮಕೈಗೊಳ್ಳಲಾಗುವುದು. ಕಡಬದಲ್ಲಿ ಮಿಂಚು ನಿರೋಧಕ ಅಳವಡಿಸಲು ಸ್ಥಳ ವೀಕ್ಷಣೆ ಮಾಡಿ ಸೂಕ್ತ ಸ್ಥಳ ಗುರುತಿಸಿಲಾಗಿದೆ. ಅಪಾಯಕಾರಿ ಹಾಗೂ ಅನಽಕೃತ ಹೋರ್ಡಿಂಗ್ಸ್ಗಳಿದ್ದರೆ ಅವುಗಳ ಕುರಿತು ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಆದೇಶ ನೀಡಲಾಗಿದ್ದು, ಅಪಾಯಕಾರಿಯಾಗಿದ್ದರೆ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
  | ಜುಬಿನ್ ಮೊಹಾಪಾತ್ರ
  ಸಹಾಯಕ ಆಯುಕ್ತರು, ಪುತ್ತೂರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts