ಇಸ್ಲಾಮಾಬಾದ್: ದಿವಾಳಿಯಾಗಿರುವ ಪಾಕಿಸ್ತಾನದಲ್ಲಿ ಅಗತ್ಯವಸ್ತುಗಳು ಗಗನಕ್ಕೆ ಏರಿರುವುದು ಗೊತ್ತೇ ಇದೆ. ಗಾಯದ ಮೇಲೆ ಬರೆ ಎಳೆದಂತೆ ಈಗ ಕರಾಚಿಯಲ್ಲಿ ರೈತರ ಒತ್ತಾಯದ ಮೇರೆಗೆ ಹಾಲಿನ ಬೆಲೆ 10ಪಾಕ್ ರೂಪಾಯಿ ಹೆಚ್ಚಿಸಲಾಗಿದೆ. ಇದರೊಂದಿಗೆ ಪ್ರತಿ ಲೀಟರ್ ಹಾಲಿನ ಬೆಲೆ 200ಪಿಕೆಆರ್ ನಿಂದ 210 ಪಿಕೆಆರ್ ಆಗಿದೆ. ಬೆಲೆ ಏರಿಕೆ ತಾಳಲಾರದೆ ಕಂಗೆಟ್ಟಿರುವ ಜನರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಇದನ್ನೂ ಓದಿ: ಅಬ್ಬಬ್ಬಾ ಹೆಬ್ಬಾಪಟೇಲ್ ಬೋಲ್ಡ್ ಲುಕ್ಗೆ ಪಡ್ಡೆಗಳು ಫಿದಾ..
ಹೈನುಗಾರರ ಸಂಘದ ಬೇಡಿಕೆಗಳಿಗೆ ಸಮ್ಮತಿಸಿ ನಗರದ ಕಮಿಷನರ್ ಹಾಲು ಬೆಲೆ ಹೆಚ್ಚಳಕ್ಕೆ ಅನುಮೋದನೆ ನೀಡಿದ ನಂತರ ಬೆಲೆ ಏರಿಕೆಯಾಗಿದೆ. ಕರಾಚಿಯ ಅಂಗಡಿಗಳು ಈಗ ಪ್ರತಿ ಲೀಟರ್‌ಗೆ 210ಪಿಕೆಆರ್ಗೆ ಹಾಲನ್ನು ಮಾರಾಟ ಮಾಡುತ್ತಿವೆ. ಆದರೆ ಹಣದುಬ್ಬರದ ಕಾರಣ ನೀಡಿ ಶೀಘ್ರದಲ್ಲೇ ಸರ್ಕಾರ 50ಪಾಕ್ ರೂಪಾಯಿ ಹೆಚ್ಚಿಸುವ ಸಾಧ್ಯತೆಯಿದೆ ಎಂದು ನಾಗರಿಕರು ಆತಂಕಗೊಂಡಿ್ದಾರೆ.
ಕರಾಚಿಯ ಡೈರಿ ರೈತರ ಅಧ್ಯಕ್ಷ ಮುಬಾಷರ್ ಖಾದಿರ್ ಅಬ್ಬಾಸಿ ಮಾತನಾಡಿ, ಹಾಲಿನ ಉತ್ಪಾದನೆಯ ವೆಚ್ಚಾಗಿದೆ. ರಾಸುಗಳ ಬೆಲೆ ಗಗನಕ್ಕೇರಿದೆ. ಸರ್ಕಾರದ ನಿರ್ಲಕ್ಷ್ಯವು ಈ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಮೇ 10 ರೊಳಗೆ ಅಧಿಕಾರಿಗಳು ಹಾಲಿನ ದರ 50ರೂ.ಗೆ ಹೆಚ್ಚಿಸದಿದ್ದರೆ ಹಾಲು ಉತ್ಪಾದಕರು ಪ್ರತಿಭಟನೆಗೆ ಇಳಿಯಲಿದ್ದಾರೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಹಣದುಬ್ಬರದ ಕಾರಣದಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನ ತತ್ತರಿಸಿಹೋಗಿದ್ದಾರೆ.
ಆಸ್ಪತ್ರೆಗೆ ಸೇರಿದ 10ವರ್ಷದ ಬಾಲಕ ಡಿಸ್ಚಾರ್ಜ್ ಆದಾಗ ಮುದುಕನಾಗಿದ್ದ! ಆತನಿಗಿದ್ದ ಕಾಯಿಲೆಯಾದರೂ ಏನು?