More

    LSG ಪರ ಪದಾರ್ಪಣೆ ಪಂದ್ಯದಲ್ಲೇ ಅನಪೇಕ್ಷಿತ ದಾಖಲೆ ಬರೆದ ವೆಸ್ಟ್​​ ಇಂಡೀಸ್​ನ ಮಾರಕವೇಗಿ

    ಕಲ್ಕತ್ತಾ: ಇಲ್ಲಿನ ಈಡೆನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ 28ನೇ ಐಪಿಎಲ್​ ಪಂದ್ಯದಲ್ಲಿ ಆಲ್ರೌಂಡ್​ ಪ್ರದರ್ಶನದ ಫಲವಾಗಿ ಕಲ್ಕತ್ತಾ ನೈಟ್​ರೈಡರ್ಸ್​ ತಂಡವು ಲಖನೌ ಸೂಪರ್​ಜೈಂಟ್ಸ್​ ವಿರುದ್ಧ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

    ಗಾಯದ ಸಮಸ್ಯೆಯಿಂದ ಟೂರ್ನಿ ಆರಂಭಕ್ಕೂ ಮುನ್ನವೇ ಹೊರಬಿದ್ದಿದ ಇಂಗ್ಲೆಂಡ್​ ವೇಗಿ ಮಾರ್ಕ್​ ವುಡ್​ ಬದಲಿಗೆ ಲಖನೌ ಸೂಪರ್​ಜೈಂಟ್ಸ್​ ತಂಡವು ವೆಸ್ಟ್​ ಇಂಡೀಸ್​ನ ಮಾರಕ ವೇಗಿ, ಗಬ್ಬಾ ಟೆಸ್ಟ್ ಹೀರೋ ಎಂದೇ ಖ್ಯಾತಿ ಪಡೆದಿರುವ ಶಮರ್ ಜೋಸೆಫ್ ಅವರನ್ನು ತಂಡಕ್ಕೆ ಸೇರಿದಿಕೊಂಡಿತ್ತು. ಇದೀಗ ಶಮರ್ ಜೋಸೆಫ್ ಐಪಿಎಲ್​ನಲ್ಲಿ ಅನಪೇಕ್ಷಿತ ದಾಖಲೆ ಬರೆಯುವ ಮೂಲಕ ಸುದ್ದಿಯಾಗಿದ್ದಾರೆ.

    ಕೆಕೆಆರ್​ ವಿರುದ್ಧದ ಪಂದ್ಯದ ಮೂಲಕ ವೆಸ್ಟ್​​ಇಂಡೀಸ್​ನ ವೇಗಿ ಶಮರ್ ಜೋಸೆಫ್​ ಐಪಿಎಲ್​ಗೆ ಪದಾರ್ಪಣೆ ಮಾಡಿದರು. 162 ರನ್​ಗಳ ಗುರು ಬೆನ್ನತ್ತಿದ್ದ ಕೆಕೆಆರ್​ ತಂಡವನ್ನು ಎದುರಿಸಲು ಲಖನೌ ನಾಯಕ ಮೊದಲ ಓವರ್​ಅನ್ನು ಶಮರ್​ ಅವರಿಗೆ ಎಸೆಯುವಂತೆ ಹೇಳಿದರು. ಅದರಂತೆ ಬೌಲಿಂಗ್​ ಮಾಡಿದ ಶಮರ್​ ಆರಂಭದಲ್ಲಿ ಉತ್ತಮವಾಗಿ ಚೆಂಡನ್ನು ಎಸೆದರು. ಆ ನಂತರ ಹಳಿ ತಪ್ಪಿದ ಶಮರ್ ತಾವೆಸೆದ ಮೊದಲ ಓವರ್​ನಲ್ಲೇ ಶಮರ್ ಜೋಸೆಫ್ ಬರೋಬ್ಬರಿ ಒಟ್ಟು 22 ರನ್‌ಗಳನ್ನು ಬಿಟ್ಟುಕೊಟ್ಟರು.

    ಇದನ್ನೂ ಓದಿ: ಸ್ಟಾರ್ ಹೀರೋಯಿನ್​ಗಳ ಬಾಡಿ ಡಬಲ್​ ಆಗಿ ಕೆಲಸ ಮಾಡಿದ ವ್ಯಕ್ತಿ ಇಂದು 1500 ಕೋಟಿ ರೂ. ಒಡೆಯ

    ಈ ಮೂಲಕ ಶಮರ್​ ಜೋಸೆಫ್ ಐಪಿಎಲ್ ಚೊಚ್ಚಲ ಪಂದ್ಯದ ಮೊದಲ ಓವರ್‌ನಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟು ಯಾರೂ ಮಾಡದ ಬೇಡದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಶಮರ್ ಜೋಸೆಫ್ ತಮ್ಮ ಓವರ್​ನ ಮೊದಲ ಎಸೆತದಲ್ಲಿ ಯಾವುದೇ ರನ್ ನೀಡಲಿಲ್ಲ. ಎರಡನೇ ಎಸೆತದ ಲೆಗ್ ಬೈಸ್ ಆಯಿತು. ಮೂರನೇ ಎಸೆತದಲ್ಲಿ ಬೌಂಡರಿ ಬಂದರೆ, ನಾಲ್ಕನೇ ಎಸೆತದಲ್ಲಿ 2 ರನ್ ಬಂತು. ಐದನೇ ಎಸೆತದಲ್ಲೂ ಬೈಸ್ ಮೂಲಕ 1 ರನ್ ಬಂತು. ಕೊನೆಯ ಎಸೆತದಲ್ಲಿ ಜೋಸೆಫ್ ಒಟ್ಟಾರೆ 14 ರನ್ ನೀಡಿದರು. ಕೊನೆಯ ಎಸೆತದಲ್ಲಿ ಜೋಸೆಫ್ 2 ವೈಡ್, 2 ನೋ ಬಾಲ್, ವೈಡ್ ಫೋರ್, ಒಂದು ಸಿಕ್ಸರ್ ಕೂಡ ಸೇರಿತ್ತು.

    ಪದಾರ್ಪಣೆ ಪಂದ್ಯದ ಮೊದಲ ಓವರ್​ನಲ್ಲಿ ಅತಿ ಹೆಚ್ಚು ರನ್​ ಬಿಟ್ಟು ಕೊಟ್ಟ ಆಟಗಾರ ಮತ್ತು ಒಂದೇ ಎಸೆತದಲ್ಲಿ 14 ರನ್​ ನೀಡಿದ ಆಟಗಾರ ಎಂಬ ಅಪಕೀರ್ತಿಗೆ ಶಮರ್​ ಜೋಸೆಫ್ ಪಾತ್ರರಾಗಿದ್ದಾರೆ. ಇದಲ್ಲದೆ ಮೂರು ಕ್ಯಾಚ್​ಗಳನ್ನು ಬಿಡುವ ಮೂಲಕ ಕಲ್ಕತ್ತಾ ವಿರುದ್ಧ ಲಖನೌ ಸೋಲಿಗೆ ಶಮರ್​ ಅವರೇ ಪ್ರಮುಖ ಕಾರಣ ಎಂದು ಹಲವರು ದೂರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts