ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ರನ್ ಮಳೆಯೇ ಹರಿದು ಬಂದಿದ್ದು, ಟಿ-20 ಕ್ರಿಕೆಟ್ನಲ್ಲಿ ಈ ಪಂದ್ಯ ಹಲವು ದಾಖಲೆಗಳನ್ನು ಬರೆದಿದೆ. ಇನ್ನು ಟಾಸ್ ವೇಳೆ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಎಸ್ಆರ್ಎಚ್ ನಾಯಕ ಪ್ಯಾಟ್ ಕಮ್ಮಿನ್ಸ್ಗೆ ವಿವರಣೆ ಒಂದು ನೀಡಿದ್ದು, ಈ ಬಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆರ್ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಈ ಬಗ್ಗೆ ಮ್ಯಾಚ್ ರೆಫ್ರಿ ಹಾಗೂ ಅಂಪೈರ್ಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಮುಂಬೈ ವಿರುದ್ಧದ ಪಂದ್ಯದಲ್ಲಿ ನಡೆದ ಟಾಸ್ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಇದರಲ್ಲಿ ಮೋಸ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ನಾಯಕ ಫಾಫ್ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Guess what Faf du plesis explaining to Pat Cummins @StarSportsIndia @IPL @mipaltan @RCBTweets @faf1307 @JioCinema #iplfixing pic.twitter.com/CQSE9XPdE4
— Dr. Hrishikesh Hanumant Gardi (@gardi_dr) April 16, 2024
ಇದನ್ನೂ ಓದಿ: ನದಿಯಲ್ಲಿ ದೋಣಿ ಮುಳುಗಿ ನಾಲ್ವರು ದುರ್ಮರಣ, ಹಲವರು ನಾಪತ್ತೆ
ವಾಂಖೆಡೆ ಕ್ರೀಡಾಂಗಣದಲ್ಲಿ ಏಪ್ರಿಲ್ 11ರಂದು ನಡೆದ ಪಂದ್ಯದಲ್ಲಿ ಮುಂಬೈ ಹಾಗೂ ಬೆಂಗಳೂರು ನಡುವಿನ ಪಂದ್ಯದಲ್ಲಿ ಟಾಸ್ ಮುಖ್ಯ ಪಾತ್ರ ವಹಿಸಿತ್ತು. ಟಾಸ್ ಬಳಿಕ ಕಾಯಿನ್ಅನ್ನು ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ಟ್ಯಾಂಪರಿಂಗ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲಾತಾಣಗಳಲ್ಲಿ ಪರ-ವಿರೋಧದ ಚರ್ಚೆ ವ್ಯಾಪಕವಾಗಿ ನಡೆದಿತ್ತು. ಇದೀಗ ಇದಕ್ಕೆ ಸಂಬಂಧಿಸಿದಂತೆ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಪ್ಯಾಟ್ ಕಮಿನ್ಸ್ ಬಳಿ ಮಾತನಾಡಿದ್ದಾರೆ.
ಫಾಫ್ ಅವರು ಟಾಸ್ ವೇಳೆ ಏನಾಯಿತು ಎಂಬುದನ್ನು ವಿವರಿಸಿದ್ದಾರೆ. ಇದನ್ನು ಕೇಳಿ ಕಮಿನ್ಸ್ ಶಾಕ್ ಆಗಿದ್ದಾರೆ. ಅವರ ಮುಖದ ಭಾವನೆಗಳೇ ಎಲ್ಲವನ್ನೂ ಹೇಳಿವೆ. ಇದರಿಂದ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ. ನಿಜಕ್ಕೂ ಅವರು ಟಾಸ್ ವಿಚಾರವನ್ನೇ ಹೇಳಿದ್ದಾ ಅಥವಾ ಬೇರೆ ಹೇಳಿದ್ದನ್ನು ಈ ರೀತಿ ಅರ್ಥೈಸಲಾಗಿದೆಯೇ ಎಂಬ ಪ್ರಶ್ನೆ ಮೂಡಲು ಶುರುವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ.