More

    ನಟ ಸೋನು ಸೂದ್ ವಾಟ್ಸ್​ಆ್ಯಪ್​​ ಖಾತೆ ಬ್ಲಾಕ್​; ಸ್ಪಂದಿಸಲು ಸಾಧ್ಯವಾಗದೆ ಬೇಸರ ಹೊರಹಾಕಿದ ನಟ

    ಮುಂಬೈ: ನಟನೆ ಮಾತ್ರವಲ್ಲದೇ ತಮ್ಮ ಸಾಮಾಜಿಕ ಸೇವೆಗಳ ಮೂಲಕ ಹೆಚ್ಚು ಖ್ಯಾತಿ ಪಡೆದಿರುವ ಬಹುಭಾಷಾ ನಟ ಸೋನು ಸೂದ್​ ತಮ್ಮ ವಾಟ್ಸ್​ಅಪ್​ ಖಾತೆ ಸ್ಥಗಿತಗೊಂಡಿರುವುದಾಗಿ ತಿಳಿಸಿದ್ದಾರೆ. ಕಳೆದ 36 ಗಂಟೆಗಳಿಂದ ಅವರ ವಾಟ್ಸ್​ಆ್ಯಪ್​​​ ಖಾತೆ ಸಕ್ರಿಯವಾಗಿಲ್ಲ ಕೂಡಲೇ ಕ್ರಮ ಕೈಗೊಳ್ಳುವಂತೆ ನಟ ಸೋನು ಸೂದ್​ ಆಗ್ರಹಿಸಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ನಟ ಸೋನು ಸೂದ್, ನನ್ನ ವಾಟ್ಸ್​ಆ್ಯಪ್​​​ ಖಾತೆ ಕಾರ್ಯನಿರ್ವಹಿಸುತ್ತಿಲ್ಲ. ಈಗಾಗಲೇ 36 ಗಂಟೆ  ಕಳೆದಿದೆ. ಇದೀಗ ಎಚ್ಚೆತ್ತುಕೊಳ್ಳುವ ಸಮಯ. ಸಂಕಷ್ಟದಲ್ಲಿರುವ ನೂರಕ್ಕೂ ಹೆಚ್ಚು ಮಂದಿ ನೆರವಾಗಿ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಸಂಪರ್ಕಿಸಲು ಸಾಧ್ಯವಾಗದ ಜನರು ನೇರವಾಗಿ ಇಲ್ಲಿ ಸಂದೇಶ ಕಳುಹಿಸಿ ಎಂದು ಟ್ವೀಟ್​ ಮಾಡಿದ್ದಾರೆ.

    ವಾಟ್ಸ್​ಆ್ಯಪ್​​ ಖಾತೆ ಬ್ಲಾಕ್ ಆದ ಬೆನ್ನಲ್ಲೇ ಮಾಹಿತಿ ನೀಡಿದ್ದ ಸೋನು ಸೂದ್‌ಗೆ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದೀಗ  ನಟ ಆಕ್ರೋಶ ಹೊರಹಾಕಿದ್ದು, ನಟನ ಪರ ಹಲವರು ಪ್ರತಿಕ್ರಿಯಿಸಿದ್ದಾರೆ. ವಾಟ್ಸ್​ಆ್ಯಪ್​​ ಈ ಕುರಿತು ತಕ್ಷಣವೇ ಸ್ಪಂದಿಸಲು ಜನರು ಮನವಿ ಮಾಡಿದ್ದಾರೆ. ಸಾಮಾಜಿಕ ಸೇವೆಯೊಂದಿಗೆ ಪ್ರತಿ ದಿನ ಹಲವರಿಗೆ ನೆರವಾಗುವ ಸೋನು ಸೂದ್ ವಾಟ್ಸ್​ಆ್ಯಪ್​​ ಖಾತೆಯನ್ನು ಸಕ್ರಿಯಗೊಳಿಸುವಂತೆ ಅಭಿಮಾನಿಗಳು ಮನವಿ ಮಾಡಿದ್ದಾರೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts