'ಕಲ್ಕಿ 2898 ಎಡಿ' ರಿಲೀಸ್​ಗೆ ಡೇಟ್​ ಫಿಕ್ಸ್​.. ಯಾವಾಗ ಬಿಡುಗಡೆ?

kalki
Published on

ಹೈದರಾಬಾದ್​: ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ದಾರ್ಶನಿಕ ನಿರ್ದೇಶಕ ನಾಗ್ ಅಶ್ವಿನ್ ಅವರ ಕ್ರೇಜಿ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಚಲನಚಿತ್ರ 'ಕಲ್ಕಿ 2898 ಎಡಿ' ಮೇ 9 ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಲಾಗಿತ್ತು. ಆದರೆ ತಯಾರಕರು ಇತ್ತೀಚೆಗೆ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ.

'ಕಲ್ಕಿ 2898 ಎಡಿ' ಚಿತ್ರವು ಮೇ 9 ರ ಬದಲು ಜೂನ್ 27 ರಂದು ಬಿಡುಗಡೆಯಾಗಲಿದೆ ಎಂದು ಹೇಳುವ ಪವರ್‌ಫುಲ್ ಪೋಸ್ಟರ್ ಅನ್ನು 'ಕಲ್ಕಿ 2898 ಎಡಿ' ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ.

ರೆಬೆಲ್ ಸ್ಟಾರ್ ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋಣೆ ಮತ್ತು ಅಮಿತಾ ಬಚ್ಚನ್ ಕೂಡ ಈ ಪೋಸ್ಟರ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದು ಯುದ್ಧದ ದೃಶ್ಯದಂತೆ ಕಾಣುತ್ತದೆ. ಸದ್ಯ ಈ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತೆಲುಗು ರಾಜ್ಯಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮೇ 9ಕ್ಕೆ ಈ ಸಿನಿಮಾ ರಿಲೀಸ್ ಆಗುತ್ತಿಲ್ಲ. ಇದರ ಜೊತೆಗೆ ಐಪಿಎಲ್ ಕೂಡ ನಡೆಯುತ್ತಿರುವುದು ಮತ್ತೊಂದು ಕಾರಣ ಎನ್ನಲಾಗಿದೆ. ಹೀಗಾಗಿ ನಿರ್ಮಾಪಕರು ಈ ಸಿನಿಮಾ ರಿಲೀಸ್​ ದಿನಾಂಕವನ್ನು ಜೂನ್ 27ಕ್ಕೆ ಮುಂದೂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net