More

    ಒಂದು ಕಾಲ್​ ರಿಸೀವ್​ ಮಾಡದಿದ್ದಕ್ಕೆ 13 ಕೋಟಿ ಕಳೆದುಕೊಂಡಿದ್ದ ಬೆಳ್ಳುಳ್ಳಿ ಕಬಾಬ್ ಚಂದ್ರು: ಏನದು ಘಟನೆ?

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡಿರುವ ಬೆಳ್ಳುಳ್ಳಿ ಕಬಾಬ್ ಚಂದ್ರು ಡಾ.ರಾಜ್​(ಅಣ್ಣಾವ್ರು) ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಬೆಳ್ಳುಳ್ಳಿ ಕಬಾಬ್ ಚಂದ್ರು ಅಂತ ಜನಪ್ರಿಯರಾಗಿದ್ದೇ ಒಂದು ರೋಚಕ ಕಥೆ. ಮೇಕಪ್ ಆರ್ಟಿಸ್ಟ್ ನಿಂದ ಹೊಟೇಲ್ ಉದ್ಯಮಿಯಾಗಿ ಚಂದ್ರು ಬೆಳೆದು ನಿಂತಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ಚಂದ್ರು ಸಂದರ್ಶನ ನೀಡಿದ್ದು, ತನ್ನ ಜರ್ನಿಯನ್ನು ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಲೇಡಿ ಸಿಎಂ ಪೊಲೀಸ್​ ಆಗಿದ್ದೇಕೆ? ವಿವರ ಇಲ್ಲಿದೆ ನೋಡಿ..

    ಹೊಟೇಲ್ ಉದ್ಯಮಕ್ಕೆ ಇಳಿದಾಗ ಒಂದು ಕರೆ ಸ್ವೀಕರಿಸದೆ ಇದ್ದಿದ್ದಕ್ಕೆ ಬರೋಬ್ಬರಿ 13 ಕೋಟಿ ರೂಪಾಯಿ ಕಳೆದುಕೊಂಡಿದ್ದನ್ನು ನೆನಪಿಸಿಕೊಂಡಿದ್ದಾರೆ.

    ಅಣ್ಣಾವ್ರ ಕಂಪನಿ ಬಿಟ್ಟ ಬಳಿಕ ಚಂದ್ರು ಮಾಲಾಶ್ರೀ ಅವರಿಗೆ ಮೇಕಪ್ ಆರ್ಟಿಸ್ಟ್ ಆಗಿದ್ದರು. ಬಳಿಕ ಹೊಟೇಲ್ ಉದ್ಯಮಕ್ಕೆ ಕೈ ಹಾಕಿದ್ದರು. ಚಿಕ್ಕದೊಂದು ಗಾಡಿಯಲ್ಲಿ ಹೊಟೇಲ್ ನಡೆಸುವುದಕ್ಕೆ ಶುರು ಮಾಡಿದ್ದರು. ಮುಂದೆ ಅಡುಗೆ ಕಾಂಟ್ರಾಕ್ಟ್ ತೆಗೆದುಕೊಳ್ಳುವವರೆಗೂ ಬಂದು ನಿಂತಿತ್ತು. ಬೆಂಗಳೂರಿನಲ್ಲಿ ಆಗ ಏಷ್ಯನ್ ಗೇಮ್ಸ್ ನಡೆಯುತ್ತಿತ್ತು. ಅಲ್ಲಿಗೆ ಊಟ, ತಿಂಡಿ ಸರಬರಾಜು ಮಾಡಲು ಚಂದ್ರುಗೆ 13 ಕೋಟಿ ರೂಪಾಯಿ ಆಫರ್​ ಬಂದಿತ್ತು. ಆಗ ಮೊಬೈಲ್ ಫೋನ್ ಇರಲಿಲ್ಲ. ಪೇಜರ್ ಅಷ್ಟೇ ಇತ್ತು. ಹೀಗಾಗಿ ಪೇಜರ್ ಅನ್ನು ಎತ್ತಿ ಪಕ್ಕಕ್ಕೆ ಇಟ್ಟಿದ್ದರು. ಈ ವೇಳೆ ಏಷ್ಯನ್ ಗೇಮ್ಸ್‌ಗೆ ಊಟದ ವ್ಯವಸ್ಥೆ ಮಾಡುವುದಕ್ಕೆ ಅಂತ ಬಂದಿದ್ದ ಡೀಲ್ ಮಿಸ್ ಆಗಿತ್ತು.

    ಈ ವಿಷಯವನ್ನು ಚಟಪಟ ಚಂದ್ರು ಹೇಳಿಕೊಂಡಿದ್ದಾರೆ. ಬಳಿಕ ಎಂಎಲ್‌ಎಗಳ ಕ್ರಿಕೆಟ್ ಸಮಾರಂಭಕ್ಕೆ 4 ಸಾವಿರ ಮಂದಿಗೆ ಅಡುಗೆ ಮಾಡಿಕೊಟ್ಟೆ. ಮಧ್ಯಾಹ್ನ 1.30ಕ್ಕೆ ಆರ್ಡರ್ ತೆಗೆದುಕೊಂಡೆ. ರಾತ್ರಿ 9 ಗಂಟೆಗೆ ಅಡುಗೆ ಮಾಡಿಕೊಟ್ಟು ಶಬರಿಮಲೆಗೆ ಹೋದೆ ಎಂದು ಆರ್ಡರ್ ಸಿಕ್ಕಿದ್ದನ್ನು ಹೇಳಿಕೊಂಡಿದ್ದರು.

    ಇವತ್ತು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆದ್ಮೇಲೆ ಹಗಲು ರಾತ್ರಿ ಎನ್ನದೆ ಫೋನ್ ಕಾಲ್‌ಗಳು ಬರುತ್ತವೆ. ಆದರೆ, ಮಿಸ್ ಮಾಡಿಕೊಳ್ಳಲು ಇಷ್ಟವಿಲ್ಲ. ಫೇಕ್ ಕರೆಗಳಾಗಿದ್ದರೂ ಸ್ವೀಕರಿಸುತ್ತೇನೆ. ಅದಕ್ಕೆ ಕಾರಣ 13.4 ಕೋಟಿ ರೂಪಾಯಿಯ ಆರ್ಡರ್ ಮಿಸ್​ ಆಗಿದ್ದು ಎಂದು ಚಂದ್ರು ಹೇಳಿಕೊಂಡಿದ್ದಾರೆ.

    ‘ಆ ಸಮಯದಲ್ಲಿ ನಾನು ಆ ಚಟಕ್ಕೆ ಬಿದ್ದಿದ್ದೆ’: ಸ್ಟಾರ್ ಹೀರೋಯಿನ್ ಬಿಚ್ಚಿಟ್ಟ ಸತ್ಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts