More

    ಲೇಡಿ ಸಿಎಂ ಪೊಲೀಸ್​ ಆಗಿದ್ದೇಕೆ? ವಿವರ ಇಲ್ಲಿದೆ ನೋಡಿ..

    ಇಸ್ಲಾಮಾಬಾದ್​: ಯುವ ಪೊಲೀಸ್ ಅಧಿಕಾರಿಗಳ ಉತ್ಸಾಹವನ್ನು ಹೆಚ್ಚಿಸಲು ಪಾಕಿಸ್ತಾನದ ಪಂಜಾಬ್ ಸಿಎಂ ಮರ್ಯಮ್ ನವಾಜ್ ಷರೀಫ್ ಪೊಲೀಸ್​ ಸಮವಸ್ತ್ರ ಧರಿಸಿದ್ದರು. ಆದರೆ, ಇದು ಸಾರ್ವಜನಿಕರ ವ್ಯಾಪಕ ಟೀಕೆಗೆ ಗುರಿಯಾಯಿತು.

    ಇದನ್ನೂ ಓದಿ: ಬ್ಯಾಂಕ್​ಗಳ ಲುಕ್‌ಔಟ್ ನೋಟಿಸ್ ಅಧಿಕಾರ ರದ್ದು: ಬಾಂಬೆ ಹೈಕೋರ್ಟ್​ ಮಹತ್ವದ ತೀರ್ಪು​

    ಮರ್ಯಮ್ ಲಾಹೋರ್‌ನಲ್ಲಿ ಮಹಿಳಾ ಕಾನ್​ಸ್ಟೇಬಲ್‌ಗಳ ಪಾಸಿಂಗ್ ಔಟ್ ಸಮಾರಂಭದಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ ದೊಡ್ಡ ವಿವಾದವನ್ನು ಹುಟ್ಟುಹಾಕಿದರು. ಮುಖ್ಯಮಂತ್ರಿಯ ಈ ನಡೆ ವಿರೋಧಪಕ್ಷಗಳಷ್ಟೇ ಅಲ್ಲದೆ, ವಿಮರ್ಶಕರು ಮತ್ತು ಸಾರ್ವಜನಿಕರ ಟೀಕಾಪ್ರಹಾರಕ್ಕೆ ಒಳಗಾಯಿತು. ಇದು ಪಾಕಿಸ್ತಾನದ ರಾಜಕೀಯ ವಲಯದಲ್ಲಿ ದೊಡ್ಡ ಸುಂಟರಗಾಳಿಯನ್ನೇ ಎಬ್ಬಿಸಿದೆ.

    ಯುವ ಪೊಲೀಸ್ ಅಧಿಕಾರಿಗಳಲ್ಲಿ ಹುಮ್ಮಸ್ಸು ತುಂಬಿಸಲು ಮುಖ್ಯಮಂತ್ರಿ ಪೊಲೀಸ್​ ಸಮವಸ್ತ್ರ ಧರಿಸಿದ್ದರು. ಆದರೆ, ವಿಮರ್ಶಕರು ಇದನ್ನು ಕೇವಲ ಶೋಬೋಟಿಂಗ್ ಎಂದು ಟೀಕಿಸಿದರು. ಅಷ್ಟೇ ಅಲ್ಲ, ಪೋಲೀಸ್ ಉಡುಪಿನ ಕಾನೂನು ಬದ್ಧತೆಯನ್ನು ಪ್ರಶ್ನಿಸಿದರು.

    ಇನ್ನು ಮರ್ಯಮ್ ಅವರ ರಾಜಕೀಯ ವಿರೋಧಿಗಳು, ಸಮವಸ್ತ್ರ ಧರಿಸಿರುವ ಔಚಿತ್ಯದ ಬಗ್ಗೆ ಕಾನೂನು ಪ್ರಶ್ನೆಗಳನ್ನು ಸಹ ಎತ್ತಿದರು.

    ಪೋಲಿಸ್ ಸಮವಸ್ತ್ರವನ್ನು ಧರಿಸಿರುವ ಮೇರಿಯಮ್ ಅವರ ಫೋಟೋಗಳು ನೆಟ್​ನಲ್ಲಿ ಪ್ರಸಾರವಾದ ಕೆಲವೇ ಕ್ಷಣಗಳಲ್ಲಿ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ವಿರೋಧ ಪಕ್ಷ ಮುಖಂಡರಾದ ಒಮರ್ ಅಯೂಬ್, ಯಾಸ್ಮಿನ್ ರಶೀದ್, ಮೂನಿಸ್ ಇಲಾಹಿ ಮತ್ತು ಶಹಬಾಜ್ ಗಿಲ್ ಈ ಕ್ರಮವನ್ನು ಖಂಡಿಸಿದರು. ಈ ವಿಷಯವು ಸಾಮಾಜಿಕ ಮಾಧ್ಯಮದಲ್ಲಿ ಟಾಪ್ ಟ್ರೆಂಡ್‌ಗಳಲ್ಲಿ ಒಂದಾಗಿದೆ.

    ಮುಖ್ಯಮಂತ್ರಿ ಎಲ್ಲದರಲ್ಲೂ ತಮಾಷೆ ಮಾಡುತ್ತಿದ್ದಾರೆ. ಜಗತ್ತು ನಮ್ಮನ್ನು ಹೇಗೆ ಗ್ರಹಿಸುತ್ತದೆ? ಯಾವುದೇ ನೀತಿ, ನಿಯಮದ ಹೇಳಿಕೆಗಳಿಲ್ಲ, ಹಣದುಬ್ಬರದ ಬಗ್ಗೆ ಮಾತುಗಳನ್ನಾಡಿಲ್ಲ. “ಗಂಭೀರವಲ್ಲದ” ಆಡಳಿತ ಇಲ್ಲಿದೆ. ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು “ಬಾಡಿಗೆ ಪ್ರಧಾನ ಮಂತ್ರಿ” ಎಂದು ಟೀಕಿಸಿದರು.

    ಲಾಹೋರ್‌ನ ವಕೀಲರೊಬ್ಬರು ಈ ವಿಷಯದ ಬಗ್ಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಸಿಎಂ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮನವಿ ಮಾಡಿಕೊಂಡರು.

    ‘ಆ ಸಮಯದಲ್ಲಿ ನಾನು ಆ ಚಟಕ್ಕೆ ಬಿದ್ದಿದ್ದೆ’: ಸ್ಟಾರ್ ಹೀರೋಯಿನ್ ಬಿಚ್ಚಿಟ್ಟ ಸತ್ಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts