More

    ಆಸ್ಪತ್ರೆ ಬೆಡ್ ಮೇಲೆ ಸ್ಟಾರ್ ಹೀರೋಯಿನ್; ಚೇತರಿಸಿಕೊಳ್ಳೋದು ತುಂಬಾ ಕಷ್ಟವಾಗ್ತಿದೆ ಎಂದು ನಟಿ ಭಾವುಕ

    ಹೈದ್ರಾಬಾದ್​:  ಟಾಲಿವುಡ್ ನಟಿ ದಕ್ಷಾ ನಗರ್ಕರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಆಕೆ ತನ್ನ ಪರಿಸ್ಥಿತಿಯನ್ನು ವಿವರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಇದ್ದೇನೆ ಎಂದು ಭಾವುಕರಾಗಿದ್ದಾರೆ.

    ಸಿನಿಮಾಗಳಲ್ಲಿ ಮಾತ್ರವಲ್ಲ, ಆಗಾಗ ಕಾರ್ಯಕ್ರಮಗಳಲ್ಲೂ ಮಿಂಚುತ್ತಿರುವ ಈ ನಟಿ  ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದಾಗಿ ಪೋಸ್ಟ್ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಚೇತರಿಸಿಕೊಳ್ಳುವುದು ತುಂಬಾ ಕಷ್ಟಕರವಾಗಿದೆ ಎಂದು ಅವರು ಹೇಳಿದರು.

    “ಕಳೆದ ಕೆಲವು ದಿನಗಳು ನನಗೆ ತುಂಬಾ ಕಷ್ಟಕರವಾಗಿತ್ತು. ಸರ್ಜರಿ ರೂಮಿನಲ್ಲಿ ನನಗೆ ಗೊತ್ತಿಲ್ಲದ ಜನರ ಮಧ್ಯದಲ್ಲಿ ಹಾಗೆ ಮಲಗುವುದು ತುಂಬಾ ಕಷ್ಟಕರವಾಗಿತ್ತು. ನನ್ನ ಬೆನ್ನುಮೂಳೆಯಲ್ಲಿ ನಾನು ಈಗಾಗಲೇ ಎರಡು ಚುಚ್ಚುಮದ್ದನ್ನು ಪಡೆದಿದ್ದೇನೆ. ನನ್ನ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನಾನು ತುಂಬಾ ಪ್ರಯತ್ನಿಸಿದೆ. ಅಂತಹ ಸಮಯದಲ್ಲಿ ನಾನು ತುಂಬಾ ಪ್ರೀತಿಸಿದ ಜನರೆಲ್ಲರೂ ನನ್ನ ಬೆಂಬಲಕ್ಕೆ ನಿಂತರು ಎಂದು ಇನ್​​ಸ್ಟಾಗ್ರಾಮ್​​ನಲ್ಲಿ ಬರೆದುಕೊಂಡಿದ್ದಾರೆ.

    ಪ್ರೀತಿಯ ಆರೈಕೆಯು ಗಾಯಗಳನ್ನು ಸಹ ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಅಂತಹ ಸಮಯದಲ್ಲಿ ಹೇಗೆ ಪ್ರೀತಿಸಬೇಕು ಎಂದು ಅವರು ನನಗೆ ತೋರಿಸಿದರು. ನನಗೆ ಆದ ಪರಿಸ್ಥಿತಿ ಬೇರೆಯವರಿಗೆ ಆಗಬಾರದು ಎಂದು ದಕ್ಷಾ ನಗರ್ಕರ್ ಭಾವುಕರಾದರು. ಇದೀಗ ಆಕೆ ಹೇಳಿದ ಈ ವಿಷಯ ವೈರಲ್ ಆಗಿದೆ. ಆಕೆಯ ಸ್ಥಿತಿಯನ್ನು ಕಂಡು ಅಭಿಮಾನಿಗಳು ಭಾವುಕರಾಗಿದ್ದಾರೆ. ದಕ್ಷಾ ನಗರ್ಕರ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ. ಆದರೆ ಇವರಿಗೆ ಇರುವ ಆರೋಗ್ಯ ಸಮಸ್ಯೆ ಏನು ಎನ್ನುವುದು ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿಲ್ಲ.

    ಟಾಲಿವುಡ್ ದಕ್ಷಾ ನಗರ್ಕರ್ ಸುಮಾರು ಒಂಬತ್ತು ವರ್ಷಗಳಿಂದ ಟಾಲಿವುಡ್ ಇಂಡಸ್ಟ್ರಿಯಲ್ಲಿ ನಾಯಕಿಯಾಗಿ ಮುಂದುವರಿದಿದ್ದಾರೆ. ಆದರೆ ಇಷ್ಟು ವರ್ಷಗಳಲ್ಲಿ ಈ ನಟಿ ಮಾಡಿದ್ದು ಕೇವಲ 5 ಚಿತ್ರಗಳು. ಹುಷಾರು, ರಾವಣಾಸುರ ಮತ್ತು ಝಾಂಬಿ ರೆಡ್ಡಿ ಚಿತ್ರಗಳ ಮೂಲಕ ಟಾಲಿವುಡ್  ಹೆಸರು ಗಳಿಸಿದರು. ಹುಷಾರು’ ಚಿತ್ರದ ಮೂಲಕ ತೆಲುಗಿನಲ್ಲಿ ಗುರುತಿಸಿಕೊಂಡರು. ‘ಜೊಂಬಿ ರೆಡ್ಡಿ’ ಚಿತ್ರದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಕೂಡ ಶೇರ್ ಮಾಡುತ್ತಿರುತ್ತಾರೆ.

    ನಟಿ ತಮ್ಮ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳೊಂದಿಗೆ  ಇನ್​​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ಆ ವಿಷಯ ಈಗ ವೈರಲ್ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts