More

    ನಿರ್ಭೀತಿಯಿಂದ ಮತ ಚಲಾಯಿಸಿ

    ಸಾಗರ: ಸಾಗರ ತಾಲೂಕಿನ 271 ಮತಗಟ್ಟೆಯಲ್ಲಿ ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮತದಾರರು ನಿರ್ಭೀತಿಯಿಂದ ಬಂದು ಮತ ಚಲಾವಣೆ ಮಾಡುವಂತೆ ಉಪವಿಭಾಗಾಧಿಕಾರಿ ಆರ್.ಯತೀಶ್ ಮನವಿ ಮಾಡಿದರು.

    ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಇವಿಎಂ ಯಂತ್ರಗಳನ್ನು ಮತಗಟ್ಟೆ ಸಿಬ್ಬಂದಿಗೆ ವಿತರಿಸಿ ಮಾತನಾಡಿದ ಅವರು, ಮಹಿಳೆಯರ ಮತದಾನ ಹೆಚ್ಚಿಸಲು 4 ಸಖಿ ಬೂತ್, ಯುವಜನ ಬೂತ್, ಸಾಂಪ್ರದಾಯಿಕ ಬೂತ್‌ಗಳನ್ನು ರಚಿಸಲಾಗಿದೆ ಎಂದರು.
    ಪ್ರತಿ ಮತಗಟ್ಟೆಗೆ ನಾಲ್ಕು ಜನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 1200ಕ್ಕಿಂತ ಹೆಚ್ಚು ಮತಗಳನ್ನು ಹೊಂದಿರುವ ಮತಗಟ್ಟೆಗಳಿಗೆ ಐವರು ಸಿಬ್ಬಂದಿಯನ್ನು ನೇಮಿಸಲಾಗಿದೆ. ಎಲ್ಲ ಪೋಲಿಂಗ್ ಬೂತ್‌ಗಳಿಗೆ ಪೊಲೀಸರನ್ನು ನೇಮಿಸಲಾಗಿದ್ದು ಅವಶ್ಯವಿರುವ ಕಡೆಗಳಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.
    ತಾಲೂಕಿನ 25 ಮತಗಟ್ಟೆಗಳ ಮೇಲೆ ವಿಶೇಷ ಗಮನ ಹರಿಸಲಾಗಿದೆ. ತಾಲೂಕಿನಲ್ಲಿ 49 ಮತಗಟ್ಟೆ ವ್ಯಾಪ್ತಿಯಲ್ಲಿ ನೆಟ್‌ವರ್ಕ್ ಸಮಸ್ಯೆ ಇದ್ದು, 25 ಬ್ಲೂಸ್ಟಾರ್ ಸಿಬ್ಬಂದಿ ನಿಯೋಜಿಸಲಾಗಿದೆ. ಜತೆಗೆ ನೆಟ್‌ವರ್ಕ್ ಕೊರತೆ ಇರುವ ಮತಗಟ್ಟೆಗಳ ಮಾಹಿತಿ ನೀಡಲು ಸ್ಥಳೀಯ ಗ್ರಾಪಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅವರು ವೈಫೈ ಮೂಲಕ ಮಾಹಿತಿ ನೀಡಲಿದ್ದಾರೆ ಎಂದರು.
    1200ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿ ಚುನಾವಣೆ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ. ತಾಲೂಕಿನಲ್ಲಿ 542 ವೃದ್ಧರು ಮತ್ತು ಅಂಗವಿಕಲರ ಮತದಾನವಿದ್ದು, ಈ ಪೈಕಿ ಶೇ.98ರಷ್ಟು ಮತದಾನ ನಡೆದಿದೆ. ಪ್ರತಿ ಮತಗಟ್ಟೆಯಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮೆಡಿಕಲ್ ಕಿಟ್‌ನೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದು, ತುರ್ತು ಚಿಕಿತ್ಸೆಗೆ ನೆರವಾಗಲಿದ್ದಾರೆ ಎಂದು ತಿಳಿಸಿದರು.
    ತಹಸೀಲ್ದಾರ್ ಸೈಯದ್ ಕಲೀಮುಲ್ಲಾ, ಸುರೇಶ್ ಸಹಾನೆ, ಡಾ. ಕೆ.ಪ್ರಭಾಕರ್ ರಾವ್, ಡಾ. ಶಿವಾನಂದ್ ಭಟ್, ತುಕಾರಾಮ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts