More

    ರೇವ್ ಪಾರ್ಟಿಯಲ್ಲಿ ನಾನಿಲ್ಲವೆಂದು ಪೊಲೀಸರಿಗೆ ಚಳ್ಳೆಹಣ್ಣು ನಟಿ ಹೇಮಾ! ಈಕೆ ವಿರುದ್ಧ ಮತ್ತೊಂದು ಪ್ರಕರಣ ದಾಖಲು..

     ಬೆಂಗಳೂರು:  ಬೆಂಗಳೂರಿನಲ್ಲಿ ನಡೆದ ಈ ರೇವ್ ಪಾರ್ಟಿಯಲ್ಲಿ 100ಕ್ಕೂ ಹೆಚ್ಚು ರಾಜಕೀಯ ಮತ್ತು ಚಿತ್ರರಂಗದ ಗಣ್ಯರು ಸಿಕ್ಕಿದ್ದರು ಎಂದು ಬೆಂಗಳೂರು ಪೊಲೀಸರು ಬಹಿರಂಗಪಡಿಸಿದ್ದಾರೆ. ಅವರಲ್ಲಿ ನಟಿ ಹೇಮಾ ಹೆಸರನ್ನೂ ಪೊಲೀಸರು ಪ್ರಕಟಿಸಿದ್ದಾರೆ. ಆದರೆ ಈ ವಿಚಾರ ಹೊರೆಗೆ ಬೀಳುತ್ತಿದ್ದಂತೆ ನಟಿ ಅಭಿಮಾನಿಗಳು ಮತ್ತು ಪೊಲೀಸರಿಗೆ ದಾರಿ ತಪ್ಪಿಸುವ ಕೆಲಸ  ಮಾಡಿದ್ದಾರೆ ಎನ್ನಲಾಗಿದೆ.

    ತಾನು ಆ ರೇವ್ ಪಾರ್ಟಿಯಲ್ಲಿ ಇರಲಿಲ್ಲ.. ಹೈದರಾಬಾದ್‌ನ ಫಾರ್ಮ್ ಹೌಸ್‌ನಲ್ಲಿ ಇದ್ದೇನೆ ಎಂದು ವಿಡಿಯೋವನ್ನು ಸಹ ಬಿಡುಗಡೆ ಮಾಡಿದ್ದಾಳೆ . ಇದೀಗ ಆ ಘಟನೆಗೆ ಸಂಬಂಧಿಸಿದಂತೆ ನಟಿ ಹೇಮಾ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿರುವುದನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರ ಹೆಸರುಗಳು ಹೊರಬರಲಿವೆ ಎಂಬ ವರದಿಗಳೂ ಇವೆ.

    ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿ ಕರ್ನಾಟಕ ಮತ್ತು ತೆಲುಗು ರಾಜ್ಯಗಳೆರಡನ್ನೂ ಬೆಚ್ಚಿಬೀಳಿಸಿದೆ. ಬರ್ತ್ ಡೇ ಪಾರ್ಟಿ ನೆಪದಲ್ಲಿ ಬೆಂಗಳೂರಿನ ಹೋಟೆಲ್ ಒಂದರಲ್ಲಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಖಚಿತ ಮಾಹಿತಿ ಪಡೆದ ಪೊಲೀಸರು ಪಾರ್ಟಿ ಮೇಲೆ ದಾಳಿ ನಡೆಸಿದ್ದಾರೆ. ಆ ಹೊಟೇಲ್‌ನಲ್ಲಿ ರೇವ್ ಪಾರ್ಟಿ ನಡೆದಿರುವುದು ದೃಢಪಟ್ಟಿತ್ತು. ಜತೆಗೆ ಅಪಾರ ಪ್ರಮಾಣದ ಮದ್ಯ ಹಾಗೂ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪಾರ್ಟಿಯಲ್ಲಿ ಸುಮಾರು 100 ಮಂದಿ ಪಾಲ್ಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇವರಲ್ಲಿ ಹೆಚ್ಚಿನವರು ರಾಜಕೀಯ ಮತ್ತು ಸಿನಿಮಾ ಕ್ಷೇತ್ರದ ಸೆಲೆಬ್ರಿಟಿಗಳು ಎಂಬುದು ಬಹಿರಂಗವಾಗಿದೆ. ಆ ಪಟ್ಟಿಯಲ್ಲಿ ಟಾಲಿವುಡ್ ಖ್ಯಾತ ನಟಿ ಹೇಮಾ ಹೆಸರೂ ಹೊರಬಿದ್ದಿದೆ.

    ರೇವ್ ಪಾರ್ಟಿಯಲ್ಲಿ ನಾನಿಲ್ಲವೆಂದು ಪೊಲೀಸರಿಗೆ ಚಳ್ಳೆಹಣ್ಣು ನಟಿ ಹೇಮಾ! ಈಕೆ ವಿರುದ್ಧ ಮತ್ತೊಂದು ಪ್ರಕರಣ ದಾಖಲು..

    ತಾನು ಹೈದರಾಬಾದ್‌ನಲ್ಲಿದ್ದೇನೆ ಮತ್ತು ಫಾರ್ಮ್‌ಹೌಸ್‌ನಲ್ಲಿ ತಣ್ಣಗಾಗಿದ್ದೇನೆ. ಅದೆಲ್ಲಾ ಫೇಕ್ ನ್ಯೂಸ್ ಎಂದು ನಗುತ್ತಲೇ ಹೇಳಿದರು. ಅವರ ಮಾತಿಗೆ ಸಾಕ್ಷಿ ಎಂಬಂತೆ ವಿಡಿಯೋವನ್ನೂ ಬಿಡುಗಡೆ ಮಾಡಿದ್ದಾರೆ.ಆದರೆ ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ನಟಿ ಹೇಮಾ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಆ ಬಳಿಕ ಬೆಂಗಳೂರು ಪೊಲೀಸರು ಹೇಮಾ ಅವರ ಫೋಟೋವನ್ನೂ ಬಿಡುಗಡೆ ಮಾಡಿದ್ದಾರೆ  ಎನ್ನಲಾಗಿದೆ. ರೇವ್​ ಪಾರ್ಟಿ ನಡೆದ ಬೆಂಗಳೂರಿನ ರೆಸಾರ್ಟ್​ (Bengaluru Resort) ನಿಂದಲೇ ವಿಡಿಯೋ ಮಾಡಿ ‘ನಾನು ಹೈದರಾಬಾದ್​​ನಲ್ಲಿ ಇದ್ದೀನಿ’ ಎಂದು ಹೇಮಾ ಸುಳ್ಳು ಹೇಳಿದ್ದಾರೆ ಎನ್ನಲಾಗಿದೆ. ಈಕೆ ನಿನ್ನೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಬೆಂಗಳೂರು ಪೊಲೀಸರು ನೀಡಿರುವ ಫೋಟೋದಲ್ಲಿ ಅದೇ ಡ್ರೆಸ್ ಧರಿಸಿರುವುದು ಎಲ್ಲರಿಗೂ ಅನುಮಾನ ಮೂಡಿಸಿದೆ.

    ಪೊಲೀಸರು ಬಿಡುಗಡೆ ಮಾಡಿರುವ ಫೋಟೋದಲ್ಲಿ ಹೇಮಾ ಕೂಡ ಆ ವಿಡಿಯೋದಲ್ಲಿರುವಂತೆಯೇ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದರು. ಈಗ ಆ ವಿಡಿಯೋ ಹೇಮಾಗೆ ತುಂಬಾ ತೊಂದರೆ ಕೊಟ್ಟಂತಿದೆ. ಯಾಕೆಂದರೆ ಆ ವಿಡಿಯೋದಿಂದಾಗಿ ಇದೀಗ ಆಕೆಯ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಏಕೆಂದರೆ ಘಟನೆ ನಡೆದ ಪ್ರದೇಶದಲ್ಲಿ ಪೊಲೀಸರಿಗೆ ಸಿಕ್ಕಿ ದಾರಿತಪ್ಪಿಸುವ ವಿಡಿಯೋ ಬಿಡುಗಡೆ ಮಾಡಿದ್ದಕ್ಕೆ ಬೆಂಗಳೂರು ಪೊಲೀಸರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಯಾಕೆ ಹೇಮಾ ವಿರುದ್ಧ ರೇವ್ ಪಾರ್ಟಿ ಕೇಸ್ ಮಾತ್ರವಲ್ಲದೆ ಮತ್ತೊಂದು ಕೇಸ್ ಕೂಡ ದಾಖಲಾಗಿದೆ ಎನ್ನಲಾಗಿದೆ.

    ರೇವ್ ಪಾರ್ಟಿಗೆ ಡ್ರಗ್ಸ್ ಸಫ್ಲೈ ಮಾಡಿದ ಪೆಡ್ಲರ್ ಯಾರು, ಎಲ್ಲಿಂದ ಸರಬರಾಜು ಮಾಡಿದ ಅಂತ ಸಿಸಿಬಿ ಮಾದಕವಸ್ತು ನಿಗ್ರಹ ದಳದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈಗಾಗಲೇ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣವನ್ನ ಸಿಸಿಬಿ ಪೊಲೀಸರು ತಮ್ಮ ಸುಪರ್ದಿಗೆ ಪಡೆದು ತನಿಖೆ ನಡೆಸಲು ಮುಂದಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts