ಹೈದರಾಬಾದ್: ಕಳೆದ ಕೆಲವು ತಿಂಗಳ ಹಿಂದೆ ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದ ಪ್ಯಾನ್ ಇಂಡಿಯಾ ‘ಹನು-ಮ್ಯಾನ್’ ಚಿತ್ರವನ್ನು ಮೆಚ್ಚಿಕೊಂಡಿದ್ದ ಸಿನಿಪ್ರೇಕ್ಷಕರು, ಚಿತ್ರದಲ್ಲಿನ ಆಕರ್ಷಕ ವಿಎಫ್ಎಕ್ಸ್ ಕೆಲಸಗಳಿಗೆ ಫಿದಾ ಆಗಿದ್ದರು. ಇನ್ನು ಹನು-ಮ್ಯಾನ್ನಲ್ಲಿ ಸ್ಟಾರ್ ಆಗಿ ಮಿಂಚಿದ ನಟ ತೇಜ ಸಜ್ಜ, ಇದೀಗ ತಮ್ಮ ಮುಂದಿನ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ವೊಂದನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಗಡ್ಡ ಬೋಳಿಸಿಕೊಳ್ಳುತ್ತೀರುವ ಸ್ಟಾರ್ ಹೀರೋಯಿನ್; ‘ನಿಮ್ಮ ಸೌಂದರ್ಯದ ಗುಟ್ಟು ಇದೇನಾ’ ಎಂದ್ರು ನೆಟ್ಟಿಗರು
ಇತ್ತೀಚಿನ ದಿನಗಳಲ್ಲಿ ಚಲನಚಿತ್ರ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಎರಡು ಭಾಗಗಳಾಗಿ ಘೋಷಿಸುತ್ತಿರುವುದು ಹೊಸ ಸಂಪ್ರದಾಯವಾಗಿದೆ. ಈ ಸಾಲಿನಲ್ಲಿ ರಕ್ಷಿತ್ ಶೆಟ್ಟಿ ಅಭಿನಯದ ‘ಸಪ್ತಸಾಗರದಾಚೆ ಎಲ್ಲೋ’, ಪ್ರಭಾಸ್‌ನ ‘ಸಲಾರ್’, ‘ಕಲ್ಕಿ 2898 AD’ ಹಾಗೂ ‘ದೇವರ’, ‘ಹರಿಹರ ವೀರ ಮಲ್ಲು’, ‘ಹನು-ಮ್ಯಾನ್’ ಚಿತ್ರಗಳಿವೆ. ಇದೀಗ ತೇಜ ಸಜ್ಜ ನಟನೆಯ ‘ಮಿರೈ’ ಕೂಡ ಎರಡು ಭಾಗಗಳಾಗಿ ಬರಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಇದು ಆ್ಯಕ್ಷನ್ ಜಾನರ್ ಒಳಗೊಂಡ ಚಿತ್ರ ಎಂದು ಹೇಳಲಾಗಿದ್ದು, 8 ವರ್ಷಗಳ ಬಳಿಕ ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಮ್ಬ್ಯಾಕ್ ಮಾಡಿರುವ ಮಂಚು ಮನೋಜ್, ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಮತ್ತಷ್ಟು ವಿಶೇಷ. ಇತ್ತೀಚೆಗಷ್ಟೇ ನಿರ್ಮಾಪಕರು ಚಿತ್ರದ ಫಸ್ಟ್ ಲುಕ್ ಅನ್ನು ಅನಾವರಣಗೊಳಿಸಿದ್ದು, ‘ಮಿರಾಯ್’ ಎರಡು ಭಾಗಗಳಲ್ಲಿ ತೆರೆದುಕೊಳ್ಳುತ್ತದೆ ಎಂದು ತಿಳಿದುಬಂದಿದೆ. ಮೊದಲ ಭಾಗ ಏಪ್ರಿಲ್ 18, 2025ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ,(ಏಜೆನ್ಸೀಸ್).
ಆರ್ಆರ್ ವಿರುದ್ಧ ಆರ್ಸಿಬಿಗೆ ಗೆಲುವು ಈಗ ಮತ್ತಷ್ಟು ಸುಲಭ! ಸುಳಿವು ಕೊಟ್ಟಿದೆ ಮಾಜಿ ಕ್ರಿಕೆಟಿಗನ ಹೇಳಿಕೆ
ನಿವೃತ್ತಿ ಬಗ್ಗೆ ನಮಗೆ ಸ್ಪಷ್ಟನೆ ಇಲ್ಲ! ಆದ್ರೆ, ಹೋಗುವ ಮುನ್ನ ಧೋನಿ ಹೇಳಿದ್ದು ಇದೊಂದು ಮಾತು…