More

    ಕುಂಬಳ ಬೀಜ- ಇದು ಪೋಷಕಾಂಶಗಳ ಖಜಾನೆ

    ಕುಂಬಳ ಬೀಜ- ಇದು ಪೋಷಕಾಂಶಗಳ ಖಜಾನೆ

    ಮಾರುಕಟ್ಟೆಯಿಂದ ನಾವು ಗೋಡಂಬಿ, ಬಾದಾಮಿಯನ್ನು ಮಾತ್ರ ತರುತ್ತೇವೆ. ಆದರೆ ಅಲ್ಲೇ ಪಕ್ಕದಲ್ಲಿರುವ ಕುಂಬಳ ಬೀಜದ ಬಗ್ಗೆ ಆಸಕ್ತಿತೋರುವುದಿಲ್ಲ. ಈ ಕುಂಬಳ ಬೀಜ ಪೋಷಕಾಂಶಗಳ ಖಜಾನೆ. ಇದರಲ್ಲಿ ಮ್ಯಾಗ್ನಿಷಿಯಂ ಅಧಿಕವಾಗಿದೆ. ಇದರಿಂದಾಗಿ ಮೂಳೆ, ನರಗಳ ಕೆಲಸ ಸರಿಯಾಗಿ ಆಗಲು ಸಾಧ್ಯವಾಗುತ್ತದೆ. ಶಕ್ತಿ ಉತ್ಪಾದನೆಯನ್ನು ಚೆನ್ನಾಗಿ ಆಗುವಂತೆ ಮಾಡುತ್ತದೆ. ಹೊಟ್ಟೆ ಶುದ್ಧವಾಗಲು ಸಹಾಯ ಮಾಡುತ್ತದೆ. ಹೃದಯದ ಕೆಲಸವೂ ಸರಿಯಾಗಿ ಆಗುತ್ತದೆ.

    ಕುಂಬಳ ಬೀಜದಲ್ಲಿ ಒಳ್ಳೆಯ ಕೊಬ್ಬು ಮತ್ತು ನಾರಿನ ಅಂಶ ಹೇರಳವಾಗಿದೆ. ಇದರಿಂದಾಗಿ ಮಲಬದ್ಧತೆಯಲ್ಲಿಯೂ ಸಹಾಯ ವಾಗುತ್ತದೆ. ಜೊತೆಗೆ ಮಧುಮೇಹ, ಬೊಜ್ಜು ಮುಂತಾದ ತೊಂದರೆ ಗಳಲ್ಲಿಯೂ ಅನುಕೂಲವಾಗುತ್ತದೆ. ಪುರುಷರಲ್ಲಿ ಸಂತಾನಹೀನತೆಯ ಸಮಸ್ಯೆಯನ್ನು ಕಡಿಮೆ ಮಾಡಲು ಇದು ಸಹಾಯಕವಾಗಿದೆ. ನಿತ್ಯವೂ ಕುಂಬಳ ಬೀಜವನ್ನು ಸೇವಿಸುವುದರಿಂದ ವೀರ್ಯಾಣುವಿನ ಶಕ್ತಿ ಹೆಚ್ಚುತ್ತದೆ ಎಂಬುದು ಸಾಬೀತಾಗಿದೆ. ಸ್ತನದ ಕ್ಯಾನ್ಸರ್ ತಡೆಯು ವಲ್ಲಿಯೂ ಇದು ಸಹಕಾರಿಯಾಗಿದೆ. ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿರುವ ಕಾರಣ ಇದು ಹಲ ವಾರು ಕಾಯಿಲೆಗಳು ಹೆಚ್ಚಾಗದಂತೆ ತಡೆಯುವಲ್ಲಿ ಸಹಕಾರಿ. ಮೂತ್ರ

    ಕೋಶ ಮತ್ತು ಪ್ರಾಸ್ಟೇಟ್​ನ ಆರೋಗ್ಯವನ್ನು ಕಾಪಾಡುವಲ್ಲಿ ಇದು ಪ್ರಯೋಜನಕಾರಿ. ಹಾಗಾಗಿ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿ ಕಾಡುವ ಮೂತ್ರಮಾರ್ಗಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರದಂತೆ ಇದು ನೋಡಿಕೊಳ್ಳುತ್ತದೆ. ಆಂಟಿ ಆಕ್ಸಿಡೆಂಟ್​ಗಳು ಹೇರಳವಾಗಿರುವ ಕಾರಣ ಮುಪ್ಪನ್ನು ದೂರ ಮಾಡುವುದರ ಜೊತೆಗೆ ಕ್ಯಾನ್ಸರ್ ನಂತಹ ಕಾಯಿಲೆಗಳು ಬರುವುದನ್ನು ತಡೆಯುತ್ತದೆ. ನಿದ್ದೆ ಚೆನ್ನಾಗಿ ಆಗಲು ಸಹಾಯ ಮಾಡುತ್ತದೆ. ಮಿದುಳಿಗೆ ಶಕ್ತಿಯನ್ನು ಕೊಡುವ ಗುಣವನ್ನು ಹೊಂದಿರುವ ಕಾರಣ ಮರೆವು, ವಿನಾಕಾರಣ ಸಿಟ್ಟು, ಭಯ, ಆತಂಕಗಳನ್ನು ಕಡಿಮೆ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಲು ಸಹಕಾರಿ. ಸಂಧಿಗಳ ಉರಿಯೂತವನ್ನು ಕಡಿಮೆ ಮಾಡಿ ಸಂಧಿನೋವು ಮತ್ತು ಬಾವುಗಳನ್ನು ನಿಯಂತ್ರಿಸುತ್ತದೆ. ಸಸ್ಯಾಹಾರಿಗಳಿಗೆ ಪೋ›ಟೀನ್ ಕೊರತೆ ಇರುವ ಕಾರಣ ಕುಂಬಳ ಬೀಜವನ್ನು ಸೇವಿಸುವುದರಿಂದ ತಕ್ಕಮಟ್ಟಿಗೆ ಪೋ›ಟೀನ್ ಕೊರತೆ ಕಡಿಮೆಯಾಗಲು ಸಹಾಯವಾಗುತ್ತದೆ. ಜಿಂಕ್, ಫಾಸ್ಪರಸ್, ಪೋಟಾಸಿಯಂ, ಸೆಲೇನಿಯಂ ನಂತಹ ಪೋಷಕಾಂಶಗಳು ಹೇರಳವಾಗಿ ಇರುವ ಕಾರಣ ದೇಹದ ಹಲವು ಅಂಗಗಳಿಗೆ ಶಕ್ತಿಯನ್ನು ಕೊಡಲು ಇದು ತುಂಬಾ ಸಹಕಾರಿಯಾಗಿದೆ.

    ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಹೆಚ್ಚಿಸಲು ಕೂಡ ಈ ಪೋಷಕಾಂಶಗಳು ಸಹಾಯ ಮಾಡುತ್ತವೆ. ಹಾಗಾಗಿ ನಿತ್ಯ ಒಂದೆರಡು ಚಮಚ ಕುಂಬಳ ಬೀಜವನ್ನು ಸೇವಿಸಬೇಕು. ರಾತ್ರಿ ನೆನೆಸಿ ಬೆಳಿಗ್ಗೆ ಕೂಡ ಇದನ್ನು ಸೇವಿಸಬಹುದು. ಇದು ಜೀರ್ಣಕ್ರಿಯೆಗೆ ಸ್ವಲ್ಪ ಕಷ್ಟಕರವಾದುದರಿಂದ ಅಜೀರ್ಣ, ಅಗ್ನಿಮಾಂದ್ಯ, ಐಬಿಎಸ್​ನಂತಹ ಕಾಯಿಲೆಗಳನ್ನು ಹೊಂದಿರುವವರು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ, ಮಧ್ಯಾಹ್ನ ಅಥವಾ ಸಂಜೆ ಊಟದ ಮೊದಲು ಸೇವಿಸಬಹುದು. ಊಟದ ನಂತರ ಅಥವಾ ರಾತ್ರಿ ಸೇವಿಸುವುದು ಅಷ್ಟು ಸರಿಯಲ್ಲ. ಸೂರ್ಯಕಾಂತಿ ಬೀಜ: ಇಷ್ಟೇ ಪೋಷಕಾಂಶ ಭರಿತ ಮತ್ತು ಪ್ರಯೋಜನ ಕಾರಿಯಾದ ಇನ್ನೊಂದು ಬೀಜವೆಂದರೆ ಅದು ಸೂರ್ಯಕಾಂತಿ ಬೀಜ. ಇದರಲ್ಲಿ ವಿಟಮಿನ್ ಇ, ಆಂಟಿ ಆಕ್ಸಿಡೆಂಟ್​ಗಳು, ಸೆಲೆನಿಯಂ, ಪೋ›ಟೀನ್, ನಾರಿನ ಅಂಶಗಳು ಹೇರಳವಾಗಿವೆ. ಕ್ಯಾನ್ಸರ್ ನಿರೋಧಕ ಅಂಶ ಗಳಿವೆ. ಹೃದಯಕ್ಕೆ ಶಕ್ತಿಯನ್ನು ಕೊಡುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಥೈರಾಯ್ಡ್ಗೆ ಸಂಬಂಧಪಟ್ಟ ಸಮಸ್ಯೆ ಬರದಂತೆ ತಡೆಯಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಸೂರ್ಯಕಾಂತಿ ಬೀಜಗಳನ್ನು ಸೇವಿಸಿದರೆ ಮಾಂಸಖಂಡದ ಸೆಳೆತ ಕಡಿಮೆಯಾಗುತ್ತವೆ.

    ಅಲರ್ಜಿ, ಸಂಧಿಗಳ ಸಮಸ್ಯೆಗಳು, ಮಧುಮೇಹ ಮತ್ತು ರಕ್ತನಾಳಗಳಿಗೆ ಸಂಬಂಧಪಟ್ಟ ತೊಂದರೆಗಳನ್ನು ನಿವಾರಿಸುತ್ತದೆ. ವಿಟಮಿನ್ ಇ ಹೇರಳವಾಗಿರುವುದರಿಂದ ಮಹಿಳೆಯರ ಆರೋಗ್ಯಕ್ಕೆ ತುಂಬಾ ಸಹಾಯಕ. ವಿಶೇಷವಾಗಿ ಮುಟ್ಟು ನಿಲ್ಲುವ ಸಮಯದಲ್ಲಿ ಆಗುವ ಹಲವು ಏರುಪೇರುಗಳಿಗೆ ಇದು ಸಹಾಯ ಮಾಡುತ್ತದೆ. ಕುಂಬಳ ಬೀಜದ ಜತೆಗೆ ಸೂರ್ಯಕಾಂತಿ ಬೀಜವನ್ನು ಕೂಡ ಒಂದೆರಡು ಚಮಚ ಸೇವಿಸಿದರೆ ಒಳ್ಳೆಯದು. ತುಂಬಾ ಅಪರೂಪಕ್ಕೆ ಕೆಲವರಿಗೆ ಇದರಿಂದ ಅಲರ್ಜಿ ಆಗುವ ಸಂಭವ ಇರುವುದರಿಂದ ತೆಗೆದುಕೊಂಡಾಗ ದೇಹದಲ್ಲಿ ಏರುಪೇರು ಆಗುತ್ತಿದೆಯೇ ಎಂದು ಮೊದಲ ಮೂರ್ನಾಲ್ಕು ದಿನ ಗಮನಿಸಬೇಕು. ನೆನಪಿರಲಿ, ಸೂರ್ಯಕಾಂತಿ ಎಣ್ಣೆಯನ್ನು ಸೇವಿಸಿದರಾಯಿತು ಎಂಬ ಭಾವನೆ ಬೇಡ. ಸೂರ್ಯಕಾಂತಿ ಬೀಜಗಳನ್ನೇ ಸೇವಿಸಬೇಕು.

    ಇದೇ ನಮ್ಮ ಸೋಲಿಗೆ ಮುಖ್ಯ ಕಾರಣ… ತಂಡದ ಸಹ ಆಟಗಾರರನ್ನು ದೂರಿದ ರುತುರಾಜ್ ಗಾಯಕ್ವಾಡ್​

    ಆರ್​ಸಿಬಿ ಗೆಲುವಿಗೆ ಅಲ್ಲಿಂದಲೇ ಶುಭಕೋರಿದ ವಿಜಯ್​​ ಮಲ್ಯ! ದಯವಿಟ್ಟು ಫೈನಲ್​ಗಾದ್ರೂ ಭಾರತಕ್ಕೆ ಬನ್ನಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts